/newsfirstlive-kannada/media/post_attachments/wp-content/uploads/2025/06/BIHAR_MOTHER.jpg)
ಪಾಟ್ನಾ: ಹೆತ್ತ ತಾಯಿಯೇ ದೇವರು. ತಾಯಿಗಿಂತ ದೇವರಿಲ್ಲ ಅಂತ ಹೇಳುತ್ತೇವೆ. ಆದರೇ, ಬಿಹಾರದಲ್ಲಿ ತಾಯಿಯೊಬ್ಬರು ತನ್ನ 12 ವರ್ಷದ ಮಗನ ಜೀವ ತೆಗೆದು ಬಿಟ್ಟಿದ್ದಾಳೆ. ಶಾಲಾ ಶಿಕ್ಷಕಿಯಾಗಿದ್ದ ತಾಯಿ, ಶಾಲಾ ಪ್ರಾಂಶುಪಾಲ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು 12 ವರ್ಷದ ಮಗ ವಿರೋಧಿಸಿದ್ದಕ್ಕೆ ತಾಯಿ ಈ ಕೃತ್ಯ ಎಸಗಿದ್ದಾರೆ.
ಬಿಹಾರದ ಪಾಟ್ನಾ ಗ್ರಾಮೀಣ ಜಿಲ್ಲಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರೋಮಾಕುಮಾರಿ (32) ಎಂಬ ಶಾಲಾ ಶಿಕ್ಷಕಿ, ತನ್ನ 12 ವರ್ಷದ ಮಗ ಶ್ರೇಯಾಂಸ್ ನನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ್ದಾಳೆ. 12 ವರ್ಷದ ಮಗ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದಾಗ, ತಾಯಿಯೇ ಹಲ್ಲೆ ನಡೆಸಿ ಮಗನ ಜೀವ ತೆಗೆದಿದ್ದಾಳೆ. ರೋಮಾಕುಮಾರಿ, ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಜೊತೆ ಸೇರಿ ಮಗನನ್ನು ಹತ್ಯೆ ಮಾಡಿದ್ದಾಳೆ.
ಇದನ್ನೂ ಓದಿ:ರೋಹಿತ್ ಶರ್ಮಾ, ರಿತಿಕಾಗೆ ಪ್ರಪೋಸ್ ಮಾಡಿದ್ದೇಗೆ.. ಈ ಸೀನ್ ಯಾವ ಮೂವಿಗೂ ಕಡಿಮೆ ಇಲ್ಲ!
ಬಳಿಕ ಮೃತದೇಹವನ್ನು ಕೋನಹಾರ್ ಬ್ರಿಡ್ಜ್ ಬಳಿ ಹಾಕಿ ಬೆಂಕಿ ಹಚ್ಚಿದ್ದಾರೆ. ಜೂನ್ 15 ರಂದು ಅರೆಬೆಂದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮಗನ ಕೊಲೆ ಕೇಸ್ನಲ್ಲಿ ತಾಯಿ ರೋಮಾಕುಮಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬಿಹಾರದ ಅರಾ ಜಿಲ್ಲೆಯ ರೋಮಾಕುಮಾರಿ, ನಿರ್ಮಲ್ ಪಾಸ್ವಾನ್ರನ್ನು ಶಾಲಾ ತರಬೇತಿ ವೇಳೆ ಭೇಟಿಯಾಗಿದ್ದಳು. ರೋಹಟಸ್ನ ಪ್ರೈಮರಿ ಟೀಚರ್ಸ್ ಟ್ರೇನಿಂಗ್ ಕಾಲೇಜಿನಲ್ಲಿ ನಿರ್ಮಲ್ ಪಾಸ್ವಾನ್ ಪ್ರಿನ್ಸಿಪಾಲ್ ಆಗಿದ್ದ. ಗಂಡನ ಜೊತೆಗಿನ ವೈವಾಹಿಕ ಸಂಬಂಧ ಹಾಳಾಗಿದ್ದರಿಂದ ರೋಮಾಕುಮಾರಿ, ಪ್ರಿನ್ಸಿಪಾಲ್ ಕಡೆ ಆಕರ್ಷಿತಳಾಗಿ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ರೋಮಾಕುಮಾರಿ ಮನೆಗೆ ಪದೇ ಪದೇ ಪ್ರಿನ್ಸಿಪಾಲ್ ನಿರ್ಮಲ್ ಪಾಸ್ವಾನ್ ಬರುವುದಕ್ಕೆ ಮಗ ಶ್ರೇಯಾಂಸ್ ವಿರೋಧಿಸಿದ್ದ. ಇದೇ ಜೀವ ತೆಗೆಯಲು ಕಾರಣ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ