/newsfirstlive-kannada/media/post_attachments/wp-content/uploads/2024/06/reservation.jpg)
ಬಿಹಾರದಲ್ಲಿ ಓಬಿಸಿ, ಇಬಿಸಿ ಮೀಸಲಾತಿ ಏರಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ನಿಂದ ಹಿನ್ನಡೆಯಾಗಿದೆ. ಮೀಸಲಾತಿ ವ್ಯಾಪ್ತಿಯನ್ನು ಶೇಕಡಾ 50 ರಿಂದ ಶೇಕಡಾ 65ಕ್ಕೆ ನಿತೀಶ್ ಕುಮಾರ್ ಸರ್ಕಾರ ಮುಂದಾಗಿತ್ತು. ಇದೀಗ ಬಿಹಾರದ ಹೈಕೋರ್ಟ್, ಸರ್ಕಾರದ ಆದೇಶವನ್ನು ರದ್ದುಗೊಳಿಸಿದೆ.
ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಎಸ್ಸಿ, ಎಸ್ಟಿ, ಇಬಿಸಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ರಾಜ್ಯ ಸರ್ಕಾರವು ಶೇ.65 ರಷ್ಟು ಮೀಸಲಾತಿಯನ್ನು ಹೆಚ್ಚಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಆಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠ, ಸರ್ಕಾರದ ಆದೇಶವನ್ನು ರದ್ದು ಮಾಡಿದೆ. ಬಿಹಾರದ ಮೀಸಲಾತಿ ಕಾಯಿದೆಯು ಸಂವಿಧಾನದ 14, 15, 16 ನೇ ವಿಧಿಗೆ ಅಲ್ಟ್ರಾ ವೈರಸ್, ಸಮಾನತೆಗೆ ವಿರುದ್ಧ ಎಂದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ:ದರ್ಶನ್ ಕೇಸ್ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!
ಬಿಹಾರ ಜನಸಂಖ್ಯೆ ಮತ್ತು ಉದ್ಯೋಗ
ಬಿಹಾರ ಸರ್ಕಾರ ಕಳೆದ ವರ್ಷ ರಾಜ್ಯದ ಆರ್ಥಿಕ ಮತ್ತು ಶೈಕ್ಷಣಿಕ ಅಂಕಿ-ಅಂಶಗಳನ್ನು ಮಂಡಿಸಿತ್ತು. ಸರ್ಕಾರಿ ಉದ್ಯೋಗಗಳಲ್ಲಿ ಪ್ರತಿ ವರ್ಗದ ಪಾಲು ಎಷ್ಟು ಎಂದು ಸರ್ಕಾರ ಹೇಳಿದೆ. ಸಾಮಾನ್ಯ ವರ್ಗದ ಜನಸಂಖ್ಯೆಯಲ್ಲಿ ಪ್ರತಿಶತ 15 ಮತ್ತು ಗರಿಷ್ಠ 6, 41, 281 ಜನ ಸರ್ಕಾರಿ ಉದ್ಯೋಗಗಳನ್ನು ಹೊಂದಿದ್ದಾರೆ. ಉದ್ಯೋಗದಲ್ಲಿ ಶೇ. 63 ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗ ಎರಡನೇ ಸ್ಥಾನದಲ್ಲಿದೆ. ಹಿಂದುಳಿದ ವರ್ಗಗಳ ಒಟ್ಟ 6, 21 481 ಉದ್ಯೋಗಗಳಿವೆ. ಮೂರನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಇದೆ. ಎಸ್ಸಿ ವರ್ಗದಲ್ಲಿ 2,9104 ಉದ್ಯೋಗಗಳಿವೆ. ಪರಿಶಿಷ್ಟ ಪಂಗಡದ ವರ್ಗವು ಕಡಿಮೆ ಸಂಖ್ಯೆಯ ಸರ್ಕಾರಿ ನೌಕರಿ ಹೊಂದಿದೆ. ಈ ವರ್ಗವು ಒಟ್ಟು 30, 164 ಸರ್ಕಾರಿ ಉದ್ಯೋಗ ಹೊಂದಿದೆ. ಬಿಹಾರದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇಕಡಾ 1.68.
ಇದನ್ನೂ ಓದಿ:ನಟ ದರ್ಶನ್ ಜೊತೆ ಮಾತಾಡಿಕೊಂಡು ಬಂದ್ವಿ -ಜಾಮೀನು ಬಗ್ಗೆ ವಕೀಲರು ಹೇಳಿದ್ದೇನು..?
ಯಾರಿಗೆ ಎಷ್ಟು ಮೀಸಲಾತಿ..?
ಪ್ರಸ್ತುತ ದೇಶದಲ್ಲಿ ಶೇ.49.5 ರಷ್ಟು ಮೀಸಲಾತಿ ಇದೆ. ಒಬಿಸಿ ಶೇಕಡಾ 27 ರಷ್ಟು ಮೀಸಲಾತಿ ಪಡೆಯುತ್ತದೆ. ಎಸ್ಸಿ ಶೇಕಡಾ 15, ಎಸ್ಟಿ 7.5 ಮೀಸಲಾತಿಯನ್ನು ಪಡೆಯುತ್ತದೆ. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೆ ಸೇರಿದ ಜನರು ಸಹ ಶೇಕಡಾ 10 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ