Advertisment

ರಕ್ತ ಚರಿತ್ರೆಯ ಪಟ್ಟಣಗೆರೆ ಶೆಡ್​​​​​​​​​ನಲ್ಲಿ ಮತ್ತೊಂದು ಅನುಮಾನ.. RTO ಅಸ್ತ್ರ ಪ್ರಯೋಗಿಸಿದ ಪೊಲೀಸರು..!

author-image
Ganesh
Updated On
ನಟ ದರ್ಶನ್​ ಗ್ಯಾಂಗ್​ನಿಂದ ಕೊಲೆ ಕೇಸ್​​.. ಪೊಲೀಸರಿಗೆ ಮೊದಲೇ ಸಿಕ್ಕಿತ್ತು ಸ್ಫೋಟಕ ಸುಳಿವು!
Advertisment
  • ರೇಣುಕಾಸ್ವಾಮಿ ಹತ್ಯೆಯಾದ ಸ್ಥಳ ಪಟ್ಟಣಗೆರೆ ಶೆಡ್
  • ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್
  • ತನಿಖೆ ವೇಳೆ ಪೊಲೀಸರಿಗೆ ಹಲವು ಅನುಮಾನ ಕಾಡಿದೆ ​​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ‌ ನಂತ್ರ ಪಟ್ಟಣಗೆರೆ ಶೆಡ್​ನ‌ ಕರಾಳ ರಹಸ್ಯಗಳು ಒಂದೊಂದೇ ಹೊರ ಬರ್ತಿವೆ. ಶೆಡ್‌ ಸೀಕ್ರೆಟ್ ಬಗೆದಷ್ಟು ಬಯಲಾಗ್ತಿದೆ. ಇದೀಗ ಪಾತಳದಲ್ಲಿ ಸ್ಟನ್ ಆಗಿರುವ ಮತ್ತೊಂದು ರಹಸ್ಯದ ಮೂಟೆಯನ್ನ ಬಿಚ್ಚಲು ಪೊಲೀಸರು ಆರ್​ಟಿಓ ಅಸ್ತ್ರ ಪ್ರಯೋಗಿಸಿದ್ದಾರೆ.

Advertisment

ಇದನ್ನೂ ಓದಿ:ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರರು ಎಂದರೆ ಭಯ.. ರೋಹಿತ್, ಕೊಹ್ಲಿ, ಬೂಮ್ರಾ, ಪಂತ್ ಅಲ್ಲವೇ ಅಲ್ಲ..!

publive-image

ಭೀಕರ ಕೊಲೆಗೆ ಸಾಕ್ಷಿಯಾದ ಪಟ್ಟಣಗೆರೆಯ ಶೆಡ್, ರಾಜ್ಯಾದ್ಯಂದ ಸದ್ದು ಮಾಡ್ತಿದೆ. ರಹಸ್ಯಗಳನ್ನು ಹೊದ್ದು ನಿಂತಿರುವ ಐದು ಎಕರೆ ಜಾಗದಲ್ಲಿ, ಸೀಜ್ ಆದ ಸಾವಿರಾರು ವಾಹನಗಳನ್ನ ಇಡಲಾಗಿದೆ. ಬ್ಯಾಂಕ್​ಗಳಿಗೆ ಲೋನ್ ಕಟ್ಟದ ವಾಹನಗಳನ್ನ ಸೀಜ್ ಮಾಡಲಾಗಿದೆಯಂತೆ. ಆದ್ರೆ ರೇಣುಕಾಸ್ವಾಮಿ ಕೊಲೆ ನಂತ್ರ ನಮ್ಮ ಸೂಪರ್ ಕಾಪ್, ವಾಹನಗಳ ತನಿಖೆಗೂ ಇಳಿದಿದ್ದಾರೆ. ಅಮಾಯಕರ ವಾಹನಗಳನ್ನು ರೌಡಿಸಂ ಮಾಡಿ ಒನ್ ಟು ಡಬಲ್ ಹಣ ಕೇಳಿ ವಾಹನಗಳನ್ನು ಸೀಜ್ ಮಾಡಲಾಗಿದೆ ಅಂತಾ ದೂರುಗಳು ಕೇಳಿ ಬರ್ತಿದ್ದು ಪೊಲೀಸ್ರು ಮತ್ತೆ ಅಖಾಡಕ್ಕೆ ಇಳಿದಿರುವ ವಿಚಾರ ಹೊರ ಬಿದ್ದಿದೆ.

ಇದನ್ನೂ ಓದಿ:ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್​​ಗೆ ಹೋಗಲು ಇದೆ ಅವಕಾಶ..!

Advertisment

publive-image

ಬೈಕ್, ಆಟೋ, ಕಾರು, ಲಾರಿ ಬಸ್ ಜೆಸಿಬಿ ಹೀಗೆ ಎಲ್ಲಾ ಬಗೆಯ ಸಾವಿರಾರು ವಾಹನಗಳನ್ನು ಸೀಜ್ ಮಾಡಲಾಗಿದೆ. ಬ್ಯಾಂಕ್​ನಿಂದ ಲೋನ್ ಪಡೆದು ಲೋನ್ ಕಟ್ಟದ ವಾಹನಗಳನ್ನು ಸೀಜ್ ಮಾಡಿ, ಅದನ್ನ ಪ್ರಕರಣ ಎ10 ಮುಂದಾಳತ್ವದಲ್ಲಿ ಇಲ್ಲಿ ತಂದು ಇಡಲಾಗ್ತಿತ್ತು. ಆದ್ರಿವರು ಟೈಮ್ ಟು ಟೈಮ್ ಸಾಲ ಪಾವತಿ ಮಾಡಿದವರ ವಾಹನಗಳನ್ನು ಸೀಜ್ ಮಾಡಿದ್ದಾರಂತೆ. ಅಮಾಯಕರ ಕಂಡ್ರೆ ಬ್ಯಾಂಕ್ ಸಾಲಕ್ಕಿಂತ ದುಪ್ಪಟ್ಟು ಹಣ ನೀಡುವಂತೆ ಕಿರುಕುಳ ಕೊಟ್ಟು ವಾಹನಗಳನ್ನು ಸೀಜ್ ಮಾಡಿದ್ದಾರೆ ಎಂಬ ಆರೋಪಗಳಿವೆ.

ಇದನ್ನೂ ಓದಿ:Rain Alert ಜೂನ್ 29ವರೆಗೆ ಭಾರೀ ಮಳೆ.. ರಾಜ್ಯದ ಎರಡು ಭಾಗಗಳಿಗೆ ಪ್ರತ್ಯೇಕ ಎಚ್ಚರಿಕೆ..!

publive-image

ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಬೆನ್ನತ್ತಿ ಹೊರಟ ಪೊಲೀಸರ ತನಿಖೆಯಲ್ಲಿ ವಿಚಾರ ಕೂಡ ಬೆಳಕಿಗೆ ಬಂದಿದೆ. ಸದ್ಯ ಆರ್​ಟಿಓ ಸಹಾಯದೊಂದಿಗೆ ವಾಹನಗಳ ಮಾಲೀಕರ ಸಂಪರ್ಕ ಮಾಡಿ, ಅಸಲಿ ಸತ್ಯ ತಿಳಿಯುವ ಕೆಲ್ಸವನ್ನು ಪೊಲೀಸ್ರು ಮಾಡ್ತಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ರೌಡಿಸಂ ಮಾಡಿ , ಬ್ಯಾಂಕ್ ಸಾಲ ಪಾವತಿ ಮಾಡಿದವರ ವಾಹನಗಳನ್ನ ಸೀಜ್ ಮಾಡಿದ್ರೆ ಆರೋಪಿಗಳ ವಿರುದ್ಧ ಮತ್ತೆ ಕೇಸ್ ಜಡಿಯಲು ಡಿಪಾರ್ಟ್ಮೆಂಟ್ ತೀರ್ಮಾನಿಸಿದ್ದು, ತನಿಖೆಯ ನಂತರ ಶೆಡ್ನ ಅದ್ಯಾವ್ಯಾಯ ಸೀಕ್ರೆಟ್ ಹೊರ ಬರುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.

Advertisment

ಇದನ್ನೂ ಓದಿ:ಒಂದಲ್ಲ.. ಆಸ್ಟ್ರೇಲಿಯಾ ವಿರುದ್ಧ ಒಟ್ಟು 3 ಲೆಕ್ಕ ಚುಕ್ತಾ ಬಾಕಿ ಇದೆ.. ಇಂದು ಪ್ರತೀಕಾರದ ಮ್ಯಾಚ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment