/newsfirstlive-kannada/media/post_attachments/wp-content/uploads/2024/12/Aishwarya-Gowda-Arrest-Case.jpg)
ಬೆಂಗಳೂರು: ಕೆಜಿಗಟ್ಟಲೇ ಚಿನ್ನ ವಂಚಿಸಿದ್ದ ಐಶ್ವರ್ಯಗೌಡ ಅವರಿಂದ ಪೊಲೀಸರಿಗೆ ಸಿಕ್ಕಿದ್ದು ಗ್ರಾಂ ಲೆಕ್ಕದಷ್ಟು ಬಂಗಾರ ಮಾತ್ರ. ಈ ಬೆನ್ನಲ್ಲೇ ಸ್ಟಾರ್ ನಟ ಒಬ್ಬರ ಸಿನಿಮಾ ಮಾಡಬೇಕು ಎಂದು ಓಡಾಡುತ್ತಿದ್ದ ಐಶ್ವರ್ಯ ಕೇಸಲ್ಲಿ ಈಗ ಪಟ್ಟಣಗೆರೆ ಶೆಡ್ ಹೆಸರು ಕೇಳಿ ಬಂದಿದೆ.
ರಾಜಕಾರಣಿಗಳು ಆಯ್ತು. ಈಗ ಐಶ್ವರ್ಯ ನಂಟು ಕನ್ನಡ ಸಿನಿ ತಾರೆಯರ ಜೊತೆ ಬೆಸೆದಿದೆ. 14 ಕೆಜಿ ಗೋಲ್ಡ್ ಕೇಸ್‌ನಲ್ಲಿ ಅಂದರ್ ಆಗಿ ಬೇಲ್ ಮೇಲೆ ಹೊರಗಿರೋ ಐಶ್ವರ್ಯ ಅಸಲಿ ಮುಖ ಒಂದೊಂದಾಗಿ ಬಯಲಿಗೆ ಬರುತ್ತಿದೆ. ಸಿನಿಮಾ ಹೆಸರಲ್ಲೂ ಐಶ್ವರ್ಯ ದಂಪತಿ ವಂಚಿಸಿರೋ ಆರೋಪ ಇದೆ.
ಸ್ಟಾರ್ ನಟನೊಬ್ಬ ಸಿನಿಮಾ ಮಾಡ್ತೀನಿ ಎಂದಿದ್ದ ಐಶ್ವರ್ಯ
ಸಿನಿಮಾದಲ್ಲಿ ಚಾನ್ಸ್ ಕೊಡಿಸ್ತೀನಿ ಅಂತಾ ಐಶ್ವರ್ಯ ದಂಪತಿ ಹಲವರಿಗೆ ವಂಚಿಸಿರೋ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ಐಶ್ವರ್ಯ ಸಿನಿ ತಾರೆಯರ ಜೊತೆಯೂ ನಂಟು ಹೊಂದಿದ್ದಳು ಅನ್ನೋದು ಬಯಲಾಗಿದೆ. ಸಿನಿಮಾ ತಾರೆಯರಿಗೆ ಬಿಸ್ಕೆಟ್ ಹಾಕ್ತಿದ್ದ ಐಶ್ವರ್ಯ ಪ್ಲಾನ್‌ಗೆ ನಟ ಧರ್ಮನೇ ಸಾಥ್ ಕೊಟ್ಟಿದ್ದರಂತೆ.
ಆರೋಪಿ ಐಶ್ವರ್ಯ ಸ್ಟಾರ್ ನಟನೊಬ್ಬನ ಸಿನಿಮಾ ಮಾಡ್ತಿನೆಂದು ಓಡಾಡುತ್ತಿದ್ದಳು. ಪಟ್ಟಣಗೆರೆ ಶೆಡ್‌ನಲ್ಲಿ ಮೊದಲ ಬಾರಿ ನಟನ ಭೇಟಿಯಾಗಿದ್ದಳು. ಸ್ಟಾರ್ ನಟನನ್ನು ಐಶ್ವರ್ಯಗೌಡಗೆ ಧರ್ಮ ಭೇಟಿ ಮಾಡಿಸಿದ್ದ. ನಟನ ಸಿನಿಮಾ ಚಿತ್ರೀಕರಣಕ್ಕೆ ಐಶ್ವರ್ಯ 5 ಐಷಾರಾಮಿ ಕಾರು ಕೊಟ್ಟಿದ್ದಳು. ಇದಾದ ನಂತರ ಇಬ್ಬರ ನಡುವಿನ ಸ್ನೇಹ ಸಂಬಂಧ ಹೆಚ್ಚಾಗಿತ್ತು. ಇನ್ನು, ಕಿರುತೆರೆ ನಟಿಯರು ಹಾಗೂ ಸ್ಟಾರ್ ನಟನಿಗೆ ಐಶ್ವರ್ಯ ದುಬಾರಿ ಗಿಫ್ಟ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಟಾರ್ ನಟ ಮತ್ತು ಕಿರುತೆರೆ ನಟಿಯರಿಗೆ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ.
ಇನ್ನು, 2021ರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಸ್ಎಲ್ವಿವಿ ಪ್ರೊಡಕ್ಷನ್ ಎಂದು ಐಶ್ವರ್ಯ ದಂಪತಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ. ವಂಚನೆ ಉದ್ದೇಶದಿಂದಲೇ ರಿಜಿಸ್ಟ್ರೇಷನ್ ಮಾಡ್ಕೊಂಡ್ರಾ ಎಂಬ ಅನುಮಾನ ವ್ಯಕ್ತವಾಗಿದೆ.
ಆರೋಪಿ ಐಶ್ವರ್ಯ ಮೇಲಿರೋದು 14 ಕೆಜಿಗೂ ಅಧಿಕ ಚಿನ್ನ ಪಡೆದ ಆರೋಪ. ಆದ್ರೆ, ಪೊಲೀಸ್ರು ಈವರೆಗೆ ರಿಕವರಿ ಮಾಡಿದ್ದು ಬರೀ 100 ಗ್ರಾಂ ಚಿನ್ನ ಅಷ್ಟೇ.
ಉಳಿದ ಚಿನ್ನ ಎಲ್ಲೋಯ್ತು?
ವನಿತಾಳಿಂದ ಆರೋಪಿ ಐಶ್ವರ್ಯ 14 ಕೆಜಿ 660 ಗ್ರಾಂ ಚಿನ್ನ ಪಡೆದಿದ್ದಳು. ಶಿಲ್ಪಗೌಡರಿಂದ 430 ಗ್ರಾಂ ಚಿನ್ನ & 3 ಕೋಟಿ 25 ಲಕ್ಷ ಪಡೆದಿದ್ದಳು. ಜ.1ಕ್ಕೆ ಆರ್.ಆರ್.ನಗರದ ಮನೆ ಮೇಲೆ ರೇಡ್ ಮಾಡಿ ಪೊಲೀಸರು ಸರ್ಚ್ ಮಾಡಿದ್ರು. ಈ ವೇಳೆ 100 ಗ್ರಾಂ ಚಿನ್ನ ಮಾತ್ರ ಪತ್ತೆಯಾಗಿದ್ದು, ಉಳಿದ 14 ಕೆಜಿ 900 ಗ್ರಾಂ ಚಿನ್ನಾಭರಣದ ಸುಳಿವಿಲ್ಲ. ದೂರು ದಾಖಲಾಗುವ ಸುಳಿವು ಸಿಕ್ತಿದ್ದಂತೆ ಬೇರೆಡೆ ಚಿನ್ನವನ್ನ ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:ರೋಹಿತ್ ಕೆಟ್ಟ ಫಾರ್ಮ್ನಲ್ಲಿದ್ರೂ ಆಡಿಸಬೇಕಿತ್ತು; ತಂಡದಿಂದ ಕೈ ಬಿಟ್ಟಿದ್ದಕ್ಕೆ BCCI ವಿರುದ್ಧ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ