ಮಗಳ ಕೈಹಿಡಿದು ಮಂತ್ರಾಲಯಕ್ಕೆ ಬಂದ ಪವಿತ್ರ ಗೌಡ.. ಇನ್​ಸ್ಟಾಗ್ರಾಮ್​​ನಲ್ಲಿ ಏನೆಂದು ಬರೆದುಕೊಂಡಿದ್ದಾರೆ..?

author-image
Veena Gangani
ಮಗಳ ಕೈಹಿಡಿದು ಮಂತ್ರಾಲಯಕ್ಕೆ ಬಂದ ಪವಿತ್ರ ಗೌಡ.. ಇನ್​ಸ್ಟಾಗ್ರಾಮ್​​ನಲ್ಲಿ ಏನೆಂದು ಬರೆದುಕೊಂಡಿದ್ದಾರೆ..?
Advertisment
  • ಪವಿತ್ರ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ
  • ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್​ ಆಗಿರೋ ಪವಿತ್ರ ಗೌಡ
  • ಮಗಳ ಜೊತೆಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದ ನಟಿ

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಪವಿತ್ರಾ ಗೌಡ, ಟೆಂಪಲ್​ ರನ್​ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಮಗಳ ಜೊತೆಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಅಪ್ಪನಾಗೋ ಖುಷಿಯಲ್ಲಿರೋ ವಾಸುಕಿ ವೈಭವ್​ಗೆ ಕ್ಯೂಟ್ ಸರ್​ಪ್ರೈಸ್​ ಕೊಟ್ಟ ಅರುಣ್​ ಸಾಗರ್ ದಂಪತಿ

publive-image

ಹಸಿರು ಬಣ್ಣದ ಸೀರೆಯನ್ನು ತೊಟ್ಟು ಮಂತ್ರಾಲಯಕ್ಕೆ ಭೇಟಿ ಕೊಟ್ಟ ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ನಟಿ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಪವಿತ್ರಾ ಗೌಡ ಸದ್ಯ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ತಾವು ಡಿಸೈನರ್ ಮಾಡಿರುವ ಒಟ್ಟೆಗಳನ್ನು ಪ್ರದರ್ಶನ ಕೂಡ ಇಡುತ್ತಾರೆ.

ಅಷ್ಟೇ ಅಲ್ಲದೇ ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಅವರಷ್ಟೇ ಅಲ್ಲದೇ ಪವಿತ್ರಾ ಗೌಡ ಅವರ ಮಗಳು ಖುಷಿ ಕೂಡ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಅವರು ಇಂದು ಮಂತ್ರಾಲಯಕ್ಕೆ ಭೇಟಿ ಕೊಟ್ಟ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಓಂ ಶ್ರೀ ರಾಘವೇಂದ್ರಾಯ ನಮಃ ಎನ್ನುವ ಮಂತ್ರವನ್ನು ಕ್ಯಾಪ್ಶನ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment