ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಾಪಸ್ ಪಡೆದಿದ್ದೇಕೆ?
ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಪವಿತ್ರ
ರೇಣುಕಾಸ್ವಾಮಿ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ
ಬೆಂಗಳೂರು: ಹೈಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪವಿತ್ರಗೌಡ ಹಿಂಪಡೆದಿದ್ದಾರೆ. ರೇಣುಕಾಸ್ವಾಮಿ ಕೇಸ್ನಲ್ಲಿ ಪವಿತ್ರಗೌಡ ಎ-1 ಆಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಕೋರ್ಟ್ನಲ್ಲಿ ಏನಾಯ್ತು?
ಜೈಲಿನಿಂದ ಆಚೆ ಬರಲು ಪವಿತ್ರ ಗೌಡ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದರ್ಶನ್ ಭೇಟಿಯಾದ ಸುಶಾಂತ್ ನಾಯ್ಡು; ಯಾರಿವರು..?
ಅದರಂತೆ ಇಂದು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಪವಿತ್ರ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಹಾಗೂ ಸರ್ಕಾರದ ಪರ ಎಸ್ಪಿಪಿ ಪಿ ಪ್ರಸನ್ನ ಕುಮಾರ್ ವಾದಿಸಿದರು. ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿ.. ಪ್ರಕರಣದಲ್ಲಿ ಈಗಷ್ಟೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ನಾವು ಅರ್ಜಿಯನ್ನು ಹಿಂಪಡೆಯುತ್ತೇವೆ. ನೀವು ನಮಗೆ ಅಧೀನ ನ್ಯಾಯಾಲಯದ ಮುಂದೆ ಹಾಜರಾಗಲು ನಿರ್ದೇಶನ ನೀಡಬೇಕು ಎಂದು ಕೋರ್ಟ್ಗೆ ಮನವಿ ಮಾಡಿಕೊಂಡರು.
ನೀವು ಹಿಂಪಡೆಯುವುದಾದ್ರೆ, ನಾನು ಹೇಗೆ ಆದೇಶ ಮಾಡಬೇಕು? ನೀವು ಬೇಕಾದ್ರೆ ಹಿಂಪಡೆದುಕೊಳ್ಳಿ, ಇಲ್ಲಾ ಪ್ರತಿವಾದಿಗಳಿಗೆ ನೋಟಿಸ್ ನೀಡಲಾಗತ್ತದೆ ಎಂದು ಕೋರ್ಟ್ ಹೇಳಿತು. ಸರಿ ನಾವು ಹಿಂಪಡೆಯುತ್ತೇವೆ, ಅಧೀನ ನ್ಯಾಯಾಲಯದ ಮುಂದೆ ಹೋಗಲು ನಿರ್ದೇಶನ ನೀಡಿ ಎಂದು ಪವಿತ್ರ ಗೌಡ ಪರ ವಕೀಲರು ಮನವಿ ಮಾಡಿಕೊಂಡರು. ಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿತು. ಆ ಮೂಲಕ ಜಾಮೀನು ಅರ್ಜಿಯನ್ನು ಪವಿತ್ರ ಗೌಡ ಹಿಂಪಡೆದಿದ್ದಾರೆ. ಅಧೀನ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ