/newsfirstlive-kannada/media/post_attachments/wp-content/uploads/2024/06/pavithra3.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೂ, ನಾಲ್ಕು ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ. ಕೊಲೆ ಕೇಸ್ನಲ್ಲಿ ಜೈಲು ಪಾಲಾದ A1 ಆರೋಪಿ ಪವಿತ್ರಾ ಗೌಡರನ್ನು ನೋಡಲು ಕುಟುಂಬಸ್ಥರು ಆಗಮಿಸಿದ್ದಾರೆ. ಜೊತೆಗೆ ಪರಪ್ಪನ ಅಗ್ರಹಾರದಲ್ಲಿರೋ ಪವಿತ್ರಾ ಗೌಡಗೆ ಬ್ಯಾಗ್ವೊಂದನ್ನು ತಂದು ಕೊಟ್ಟಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್ ಮಾತು; ಹೇಳಿದ್ದೇನು?
ಹೌದು, ನಿನ್ನೆಯಷ್ಟೇ ನಟ ದರ್ಶನ್ನನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೈಲಿಗೆ ಭೇಟಿ ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಪವಿತ್ರಾ ಗೌಡ ಅವರ ಕುಟುಂಬಸ್ಥರು ಪರಪ್ಪರ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಜೊತೆಗೆ ಪವಿತ್ರಾ ಗೌಡ ಅವರಿಗೆ ಕೊಡಲೆಂದು ಒಂದು ಬ್ಯಾಂಗ್ ತುಂಬಾ ವಸ್ತುಗಳ ತಂದು ಕೊಟ್ಟಿದ್ದಾರೆ. ಪೋಷಕರಿಗೆ ಫೋನ್ ಮಾಡಿ ಪವಿತ್ರಾ ಗೌಡ ಕೆಲವೊಂದು ವಸ್ತುಗಳನ್ನು ತರಲು ಹೇಳಿದ್ದರಂತೆ.
ಹೀಗಾಗಿ ಪೋಷಕರು ಜೈಲಿನ ಒಳಗೆ ಹೋದ ಬಳಿಕ ಬ್ಯಾಗ್ವೊಂದನ್ನು ಆರೋಪಿ ಪವಿತ್ರಾ ಗೌಡಗೆ ಕೊಟ್ಟಿದ್ದಾರೆ. ಆದರೆ ಆ ಬ್ಯಾಗ್ನಲ್ಲಿ ಬಟ್ಟೆ ಮತ್ತು ಮೇಕಪ್ ಸೆಟ್ ಇದೆ ಎಂದು ಶಂಕಿಸಲಾಗಿದೆ. ಇನ್ನು, ಪವಿತ್ರಾ ಗೌಡ ಪೋಷಕರ ಜೊತೆಗೆ ತಾಯಿಯನ್ನು ನೋಡಲು ಪುತ್ರಿ ಖುಷಿ ಗೌಡ ಕೂಡ ಜೈಲಿಗೆ ಬಂದಿದ್ದರು. ಪವಿತ್ರಾ ಗೌಡ ಅವರ ತಾಯಿ ಜೊತೆಗೆ ಮಗಳು ಖುಷಿ ಗೌಡ ಹೋಗಿ ಅಮ್ಮನನ್ನು ಭೇಟಿ ಮಾಡಿದ್ದಾರೆ. ಬಳಿಕ ಪವಿತ್ರಾ ಗೌಡರನ್ನು ಭೇಟಿಯಾದ ತಾಯಿ ಧೈರ್ಯ ತುಂಬಿದ್ದಾರಂತೆ. ಈ ಹಿಂದೆ ಪವಿತ್ರಾ ಗೌಡ ನೋಡಲು ಜೈಲಿಗೆ ಬಂದಿದ್ದ ಸಹೋದರರ ಕ್ಯಾಮೆರಾ ಕಂಡು ನಿಮಗೆ ಮಾಡೋಕೆ ಕೆಲಸ ಇಲ್ವಾ ಎಂದು ಧಿಮಾಕಿನ ಮಾತಾಡಿದ್ರು. ಇಂದು ಮಾಸ್ಕ್ ಧರಿಸಿ ಮುಖ ಮುಚ್ಚಿಕೊಂಡು ಆಗಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ