ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಪವಿತ್ರಾ ಗೌಡ ಮಗಳು ಖುಷಿ ಗೌಡ; ವಿಡಿಯೋ ಸಖತ್‌ ವೈರಲ್‌!

author-image
Veena Gangani
Updated On
ಅಮ್ಮನ ಆಸೆ ಈಡೇರಿಸಲು ಪಣತೊಟ್ಟ ಪವಿತ್ರಾ ಗೌಡ ಮಗಳು ಖುಷಿ ಗೌಡ; ವಿಡಿಯೋ ಸಖತ್‌ ವೈರಲ್‌!
Advertisment
  • ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ನಟಿ ಪವಿತ್ರಾ ಗೌಡ
  • ಸಾಮಾಜಿಕ ಜಾಲತಾಣದಲ್ಲಿ ​ವೈರಲ್ ಆದ ಖುಷಿ ಗೌಡ ವಿಡಿಯೋ
  • ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡ್ತಾ ಇದ್ದರು

ಚಿತ್ರದುರ್ಗ ಮೂಲದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿ ಜೈಲುವಾಸ ಅನುಭವಿಸುತ್ತಿರುವಾಗಲೇ ಪವಿತ್ರಾ ಗೌಡ ಮಗಳ ಬ್ಯೂಟಿಫುಲ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ:‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್​ನಲ್ಲಿ ಏನಿದೆ..?

publive-image

ಹೌದು, ಸ್ಯಾಂಡಲ್‌ವುಡ್‌ ನಟಿ ಹಾಗೂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲಿಗೆ ಹೋಗುವ ಮುನ್ನ ನಟಿ ಪವಿತ್ರಾ ಗೌಡ ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿದ್ದರು. ಆದರೆ ಕೊಲೆ ಕೇಸ್​ನಲ್ಲಿ ಜೈಲು ಸೇರಿದ ಬಳಿಕ ಆ ಬ್ಯುಸಿನೆಸ್ ಅರ್ಧಕ್ಕೆ ನಿಂತಿಲ್ಲ. ಬದಲಿಗೆ ಅಮ್ಮನ ಫ್ಯಾಷನ್‌ ಬೋಟಿಕ್‌ ಬ್ಯೂಸಿನೆಸ್​ ಅನ್ನು ಮಗಳು ಖುಷಿ ನೋಡಿಕೊಳ್ಳುತ್ತಿದ್ದಾರೆ.

publive-image

ಜೈಲಿಗೆ ಸೇರಿದ ಅಮ್ಮನನ್ನು ನೋಡಲು ಪುತ್ರಿ ಖುಷಿ ಗೌಡ ಆಗಾಗ  ಪರಪ್ಪನ ಅಗ್ರಹಾರಕ್ಕೆ ಹೋಗಿದ್ದರು. ಪವಿತ್ರಾ ಗೌಡ ಮಗಳು ಖುಷಿ ಗೌಡಗೆ ಈಗ ದೊಡ್ಡ ಜವಾಬ್ದಾರಿ ಇದೆ. ತಾಯಿ ನಡೆಸುತ್ತಿದ್ದ ಫ್ಯಾಷನ್‌ ಬೋಟಿಕ್‌ ಅನ್ನು ಮಗಳು ಖುಷಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್‌ ಕಾರ್ಪೆಟ್‌ 777 ಶಾಪ್ ಅನ್ನು ಖುಷಿ ಗೌಡ ನೋಡಿಕೊಳ್ಳುತ್ತಿದ್ದಾರೆ.

ಇದರ ಜೊತೆಗೆ ಖುಷಿ ಗೌಡ ಈ ಹಿಂದೆ ಟ್ರೆಡಿಷನಲ್‌ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದರು. ಲಂಗಾ ದಾವಣಿಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ವಾವ್​ ಖುಷಿ ಪುಟ್ಟ ಸೂಪರ್​, ಯಾವಾಗಲೂ ಖುಷಿ ಖುಷಿಯಿಂದ ಇರು, ದೊಡ್ಡ ಜವಾಬ್ದಾರಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment