6 ತಿಂಗಳು ಪ್ರೀತಿಯ ಶ್ವಾನಗಳಿಂದ ದೂರವಿದ್ದ ಪವಿತ್ರಾಗೌಡ.. ಈಗ ಮರಳಿಗೆ ಗೂಡಿಗೆ ಬರಲಿವೆ ನೆಚ್ಚಿನ ನಾಯಿಗಳು

author-image
Gopal Kulkarni
Updated On
6 ತಿಂಗಳು ಪ್ರೀತಿಯ ಶ್ವಾನಗಳಿಂದ ದೂರವಿದ್ದ ಪವಿತ್ರಾಗೌಡ.. ಈಗ ಮರಳಿಗೆ ಗೂಡಿಗೆ ಬರಲಿವೆ ನೆಚ್ಚಿನ ನಾಯಿಗಳು
Advertisment
  • 6 ತಿಂಗಳ‌ ಬಳಿಕ ಪರಪ್ಪನ ಪಂಜರದಿಂದ ಹೊರ ಬಂದ ಪವಿತ್ರಾ
  • ನಟ ದರ್ಶನ್ ಮನೆಯಲ್ಲಿದೆ ಪವಿತ್ರಾ ಗೌಡ ಸಾಕು ಶ್ವಾನಗಳು
  • ಶ್ವಾನಗಳನ್ನ ಮತ್ತೆ ತಮ್ಮ ಮನೆಗೆ ಶಿಫ್ಟ್ ಮಾಡಿಸಲು ತಯಾರಿ

ರೇಣುಕಾಸ್ವಾಮಿ ಕೇಸ್​ನಲ್ಲಿ 6 ತಿಂಗಳುಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಪಂಜರದ ಗಿಳಿಯಾಗಿದ್ದ ಪವಿತ್ರಾಗೌಡ, ಸದ್ಯ ಬೇಲ್ ಮೇಲೆ ಆಚೆ ಬಂದಿದ್ದಾರೆ. ಸದ್ಯ ಮನೆಗೆ ಬಂದಿರುವ ಪವಿತ್ರಾಗೌಡ ತಮ್ಮ ಸಾಕು ಶ್ವಾನಗಳನ್ನು ಮತ್ತೆ ಮನೆಗೆ ಶಿಫ್ಟ್ ಮಾಡಲು ತಯಾರಿ ನಡೆಸಿದ್ದಾರೆ. ತಮ್ಮ ಸಿಬ್ಬಂದಿ ಮೂಲಕ ಮತ್ತೆ ಮನೆಗೆ ಕರೆತರುವಂತೆ ಸೂಚನೆ ನೀಡಿದ್ದಾರೆ. ಸದ್ಯ ನಟ ದರ್ಶನ್​ ಮನೆಯಲ್ಲಿ ಪವಿತ್ರಾಗೌಡಳ ಮೆಚ್ಚಿನ ಶ್ವಾನಗಳು ಇವೆ ಎಂದು ನ್ಯೂಸ್​ಫಸ್ಟ್​ಗೆ ಪೀಪಲ್ ಫಾರ್ ಅನಿಮಲ್ ಟೀಂ ಮಾಹಿತಿ ನೀಡಿದೆ.

ಇದನ್ನೂ ಓದಿ:ಜೈಲಿನಿಂದ ರಿಲೀಸಾದ ಕೂಡಲೇ ದರ್ಶನ್​​ ಹೆಸರಲ್ಲಿ ಅರ್ಚನೆ; ಕುಲದೇವರ ಬಳಿ ಪವಿತ್ರಾ ಕೇಳಿಕೊಂಡಿದ್ದು ಇಷ್ಟು!

ಶ್ವಾನಪ್ರಿಯೆಯಾಗಿದ್ದ ಕೊಲೆ ಆರೋಪಿ ಪವಿತ್ರಾಗೌಡ ಮನೆಯಲ್ಲಿ ಮೂರು ತಳಿಯ ಶ್ವಾನಗಳಿದ್ದವು. 3ರ ಪೈಕಿ ಒಂದು ಶ್ವಾನವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದರು. ಬಿಳಿ ಫ್ರೆಂಚ್ ಬುಲ್​ಡಾಗ್ ಮತ್ತು ಬೆಲ್ಜಿಯನ್ ಮಾಲಿನೋಯಿಸ್​ ಈ ಎರಡು ನಾಯಿಗಳನ್ನು ಪವನ್ ನೋಡಿಕೊಳ್ಳುತ್ತಿದ್ದ.ಈ ಎರಡೂ ನಾಯಿಗಳನ್ನು ಪವನ್ ವಾಕಿಂಗ್​ ಕರೆದುಕೊಂಡು ಹೋಗುವುದು ಊಟಕ್ಕೆ ಹಾಕುವುದು ಮಾಡುತ್ತಿದ್ದ, ಯಾವಾಗ ರೇಣುಕಾಸ್ವಾಮಿ ಕೇಸ್​ನಲ್ಲಿ ಪವಿತ್ರಾ ಮತ್ತು ಪವನ್ ಅರೆಸ್ಟ್​ ಆದ್ರೊ ಅವುಗಳನ್ನು ಯಾರು ನೋಡಿಕೊಳ್ಳುವವರು ಇಲ್ಲದೇ ಶ್ವಾನಗಳು ಸೋರಗಿ ಹೋಗಿದ್ದವು.

ಸರಿಯಾಗಿ ಆಹಾರ ಇಲ್ಲದೇ ಬಲಹೀನವಾಗಿದ್ದ ಶ್ವಾನಗಳ ಬಗ್ಗೆ ಪೀಪಲ್ ಫಾರ್ ಎನಿಮಲ್ ಟೀಂಗೆ ಗೊತ್ತಾಗಿದೆ. ಕೂಡಲೇ ಅಲರ್ಟ್ ಆದ ಟೀಂ, ಈ ಬಗ್ಗೆ ಆರ್​.ಆರ್​.ನಗರದ ಪೊಲೀಸರ ಗಮನಕ್ಕೆ ತಂದಿದೆ. ಪೀಪಲ್ ಫಾರ್ ಅನಿಮಲ್​ನ ಲೀನಾ ಹಾಗೂ ಹರೀಶ್​ ಬಿಬಿಎಂಪಿ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಆ ಶ್ವಾನಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ದರ್ಶನ್ ಮನೆಯಲ್ಲಿರುವ ಶ್ವಾನಗಳನ್ನು ತಮ್ಮ ಮನೆಗೆ ವಾಪಸ್ ತರಿಸಿಕೊಳ್ಳಲು ಪವಿತ್ರಾಗೌಡ ತಯಾರಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment