ಜೈಲಿನಿಂದ ರಿಲೀಸಾದ ಕೂಡಲೇ ದರ್ಶನ್​​ ಹೆಸರಲ್ಲಿ ಅರ್ಚನೆ; ಕುಲದೇವರ ಬಳಿ ಪವಿತ್ರಾ ಕೇಳಿಕೊಂಡಿದ್ದು ಇಷ್ಟು!

author-image
Ganesh Nachikethu
Updated On
ಜೈಲಿನಿಂದ ರಿಲೀಸಾದ ಕೂಡಲೇ ದರ್ಶನ್​​ ಹೆಸರಲ್ಲಿ ಅರ್ಚನೆ; ಕುಲದೇವರ ಬಳಿ ಪವಿತ್ರಾ ಕೇಳಿಕೊಂಡಿದ್ದು ಇಷ್ಟು!
Advertisment
  • ರಿಲೀಸ್​ ಆಗ್ತಿದ್ದಂತೆ ಪವಿತ್ರಾ ಟೆಂಪಲ್​ ರನ್!​
  • ಕುಲ ದೇವರು ವಜ್ರಮುನೇಶ್ವರನಿಗೂ ಪೂಜೆ
  • ದರ್ಶನ್​ ಹೆಸ್ರಲ್ಲಿ ಅರ್ಚನೆ ಮಾಡಿಸಿದ ಪವಿತ್ರಾ

ಬೆಂಗಳೂರು: ರಾಜ್ಯವನ್ನ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾಗಿದ್ದ ಎ1 ಆರೋಪಿ ಪವಿತ್ರಾ ಗೌಡಗೆ 6 ತಿಂಗಳ ಸೆರೆವಾಸ ಬಳಿಕ ಕೊನೆಗೂ ಹೊರಗಿನ ಪ್ರಪಂಚ ನೋಡುವ ಭ್ಯಾಗ ಸಿಕ್ಕಿದೆ. ಶುಕ್ರವಾರವೇ ಬೇಲ್​ ಸಿಕ್ಕಿದ್ರೂ ಅದರ ಪ್ರಕ್ರಿಯೆ ಇವತ್ತು ಮುಗಿದಿದ್ದು, ಪವಿತ್ರಾ ಪರಪ್ಪನ ಪಂಜರದಿಂದ ಹೊರಬಂದಿದ್ದಾರೆ.

ಪರಪ್ಪನ ಅಗ್ರಹಾರದಿಂದ ಎ1 ಪವಿತ್ರಾ ಗೌಡ ರಿಲೀಸ್​

ಅದೊಂದು ಅಶ್ಲೀಲ ಮೇಸೇಜ್. ಪವಿತ್ರಾ ಗೌಡಳ ಜೀವನವನ್ನೇ ಉಲ್ಟಾ ಮಾಡಿ ಬಿಟ್ಟಿತ್ತು. ರೇಣುಕಾಸ್ವಾಮಿ ಕಳುಹಿಸಿದ ಅಶ್ಲೀಲ ಮೇಸೇಜ್​ ಒಂದು ಕೊಲೆಯಲ್ಲಿ ಅಂತ್ಯವಾದ್ರೆ, ಇದಕ್ಕೆಲ್ಲಾ ಸೂತ್ರಧಾರಿಯಾಗಿದ್ದ ಪವಿತ್ರಾಗೌಡ ಎ1 ಆರೋಪಿಯಾಗಿ ಕೊನೆಗೂ ಜೈಲುಪಾಲಾಗಿದ್ದಳು. ಬರೋಬ್ಬರಿ 6 ತಿಂಗಳು ಸೆರೆವಾಸ ಅನುಭವಿಸಿರೋ ಪವಿತ್ರಾ ಬೇಲ್​ಗಾಗಿ ಹಾತೊರೆಯುತ್ತಿದ್ರೂ, ಪ್ರತಿ ಸಲ ಜೈಲಲ್ಲಿ ನಿರಾಸೆಯಾಗ್ತಿತ್ತು. ಆದ್ರೆ, ಕಳೆದ ಶುಕ್ರವಾರ ಕೊನೆಗೂ ಪ್ರವಿತ್ರಾಳಿಗೆ ಜಾಮೀನು ಸಿಕ್ಕೇ ಬಿಟ್ಟಿತ್ತು. ಆದ್ರೆ, ಮಧ್ಯದಲ್ಲಿ ಶನಿವಾರ ಭಾನುವಾರ ಬಂದಿದ್ರಿಂದ ಜಾಮೀನು ಪ್ರಕ್ರಿಯೆ ತಡವಾದ ಕಾರಣ ಇಂದು ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ರಿಲೀಸ್​ ಆಗಿದ್ದಾರೆ. ಪವಿತ್ರಾ ಜೊತೆಯಲ್ಲೇ ಮತ್ತೊಬ್ಬ ಆರೋಪಿ ಪ್ರದೋಶ್​ ಕೂಡ ರಿಲೀಸ್​ ಆಗಿದ್ದಾರೆ.

ಬಿಡುಗಡೆ​ ಆಗ್ತಿದ್ದಂತೆ ಪವಿತ್ರಾ ಗೌಡ ದೇವರ ಮೊರೆ

ಇನ್ನೂ, ಜೈಲಿನಿಂದ ಆಚೆ ಬರುತ್ತಲೇ ಎ1 ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನ ಬಳಿ ಇರುವ ಗುಡಿಗೆ ಪೂಜೆ ಸಲ್ಲಿಸಿದ್ದಾಳೆ. ಜೈಲಿನ ಆವರಣದಲ್ಲಿರೋ ಮುನೇಶ್ವರ ದೇವರಿಗೆ ತಾಯಿ ಭಾಗ್ಯಮ್ಮ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಳು. ಬಳಿಕ ಪವಿತ್ರಾ ತಾನೂ ಧರಿಸಿದ್ದ ಚಪ್ಪಲಿಯನ್ನ ಅಲ್ಲಿಯೇ ಬಿಟ್ಟು ಬೇರೆ ಚಪ್ಪಲಿಯನ್ನ ಹಾಕಿಕೊಂಡು ಹೋಗಿರೋದಾಗಿಯೂ ಮಾಹಿತಿ ಲಭ್ಯವಾಗಿದೆ.

ದರ್ಶನ್​ ಹೆಸರಲ್ಲಿ ಅರ್ಚನೆ ಮಾಡಿಸಿದ ಪವಿತ್ರಾ ತಾಯಿ

ಜೈಲಿನಿಂದ ನೇರವಾಗಿ ಪವಿತ್ರಾ ನೇರವಾಗಿ ಹೋಗಿದ್ದು, ತಲಘಟ್ಟಪುರದಲ್ಲಿರುವ ತಾಯಿ ಭಾಗ್ಯಮ್ಮರ ಕುಲ ದೇವರು ವಜ್ರಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ. ಮಗಳ ಬಿಡುಗಡೆಗಾಗಿ ಭಾಗ್ಯಮ್ಮ ಕುಲದೇವರಿಗೆ ಹರಕೆ ಹೊತ್ತಿದ್ದರಂತೆ. ಹೀಗಾಗಿ ಮಗಳು ರಿಲೀಸ್​ ಆಗ್ತಿದ್ದಂತೆ ಭಾಗ್ಯಮ್ಮ ಸೀದಾ ಕುಲ ದೇವರ ದೇವಸ್ಥಾನಕ್ಕೆ ಕರೆದೊಯ್ದು ಹರಕೆ ತೀರಿಸಿದ್ದಾರೆ. ಇನ್ನೂ ವಜ್ರಮುನೇಶ್ವರ ಸನ್ನಿಧಿಯಲ್ಲಿ ಪವಿತ್ರಾಗೌಡಗೆ ತೀರ್ಥಸ್ನಾನ ಮಾಡಿಸಲಾಯ್ತು. ಬಳಿಕ ಭಾಗ್ಯಮ್ಮ ಮಗಳು ಮತ್ತು ಕುಟುಂಬಸ್ಥರ ಹೆಸ್ರಲ್ಲಿ ಆರ್ಚನೆ ಮಾಡಿಸಿದ್ರು. ಈ ವೇಳೆ ಪವಿತ್ರಾ ತಾಯಿ ದರ್ಶನ್​ ಹೆಸ್ರಲ್ಲೂ ಅರ್ಚನೆ ಮಾಡಿಸಿದ್ದು ವಿಶೇಷವಾಗಿತ್ತು.

ಇನ್ನೂ, ಆರು ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ನಿವಾಸದಲ್ಲಿ, ಇವತ್ತು ಪವಿತ್ರಾಗೌಡ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಲಾಗಿತ್ತು. ಆದ್ರೆ, ಪವಿತ್ರಾ ತಲಘಟ್ಟಪುರದ ವಜ್ರಮುನೇಶ್ವರ ದೇವಸ್ಥಾನದಿಂದ ಸೀದಾ ತಾಯಿ ಮನೆಗೆ ತೆರಳಿದ್ದಾಳೆ. ಇನ್ನೂ ಪವಿತ್ರಾ ರಿಲೀಸ್​ ಆಗಿರೋ ಬಗ್ಗೆ ಪ್ರತಿಕ್ರಿಯಿಸಿರೋ ಲಾಯರ್​ ಶಿಲ್ಪಾ, ಬೇಲ್ ಸಿಕ್ಕು ಹೊರಗೆ ಬಂದಿದ್ರೂ ವಿಚಾರಣೆಗೆ ಹೋಗ್ಬೇಕು ಎಂದು ಹೇಳಿದ್ರು.
ಒಟ್ನಲ್ಲಿ, 6 ತಿಂಗಳಿನಿಂದ ಜೈಲು ಹಕ್ಕಿಯಾಗಿದ್ದ ಪವಿತ್ರಾ ಗೌಡಗೆ ಸಿಕ್ಕಿರೋದು ಜಾಮೀನು ಮಾತ್ರವಷ್ಟೇ. ಇನ್ನೂ, ಕೇಸ್​ನಿಂದ ಕ್ಲೀನ್​ ಚಿಟ್​ ಸಿಕ್ಕಿಲ್ಲ. ಈಗಲು ಪವಿತ್ರಾ ಕೊಲೆ ಕೇಸ್​ನಲ್ಲಿ ಎ1 ಆರೋಪಿಯೇ.

ಇದನ್ನೂ ಓದಿ:ದರ್ಶನ್ ಹೆಸರಲ್ಲಿ ಅರ್ಚನೆ.. ಜೈಲಿಂದ ಮನೆಗೆ ಹೋಗೋ ಮುಂಚೆಯೇ ಹರಕೆ ತೀರಿಸಿದ್ದೇಕೆ ಪವಿತ್ರಾ ಗೌಡ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment