/newsfirstlive-kannada/media/post_attachments/wp-content/uploads/2024/06/Darshan-Pavithra-Gowda-Arrest.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ರನ್ನು ಪವಿತ್ರಾಗೌಡ ಗೆಳತಿ ಸಮತಾ ಭೇಟಿಯಾಗಿದ್ದಾಳೆ. ಪವಿತ್ರಾಗೌಡ ಜಾಮೀನು ಪ್ರಕ್ರಿಯೆ ಬಗ್ಗೆ ಸಮತಾ ಚರ್ಚೆ ನಡೆಸಿದ್ದಾಳೆ ಎನ್ನಲಾಗ್ತಿದೆ. ಆದ್ರೆ ಸಮತಾ ಭೇಟಿ ಬಗ್ಗೆ ದರ್ಶನ್ ಆಪ್ತವಲಯ ಅಸಮಾಧಾನಗೊಂಡಿದೆ. ಆಪ್ತ ಗೆಳತಿಯಾಗಿರುವ ಸಮತಾ ಕಾರಣಕ್ಕೆ ನಟ ಧನ್ವೀರ್ಗೆ ದರ್ಶನ್ ಭೇಟಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಾರು ಈ ಸಮತಾ?
ಒಂದೇ ಆತ್ಮ ಎರಡು ದೇಹದಂತಿದ್ದಾರೆ. ಜೈಲಿನ ಬುಕ್ನಲ್ಲಿ ಸಮತಾ ಎಂದು ಉಲ್ಲೇಖಿಸಿ ಎಂಟ್ರಿ ಹಾಕಿ ದರ್ಶನ್ ಭೇಟಿಯಾಗಿದ್ದಾಳೆ. ದರ್ಶನ್-ಸಮತಾ ಭೇಟಿ ವಿಚಾರ ತೀವ್ರ ಕುತೂಹಲ ಕೆರಳಿಸಿದೆ. ಆಕೆ ದರ್ಶನ್ ಭೇಟಿ ಮಾಡಿದ ಉದ್ದೇಶ ಏನು ಅನ್ನೋದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಟ ದರ್ಶನ್ ಜೈಲಿಗೋದ ದಿನದಿಂದ ಹಲವರು ಜೈಲಿಗೆ ಭೇಟಿ ನೀಡ್ತಿದ್ದು ಜೈಲು ಸಿಬ್ಬಂದಿ ಜೈಲಿನಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಸೆಲೆಬ್ರಿಟಿ ದರ್ಶನ್ಗೆ ಒಂದು ನ್ಯಾಯ ಉಳಿದ ಬಂಧಿಗಳಿಗೆ ಮತ್ತೊಂದು ನ್ಯಾಯನಾ ಎಂಬ ಪ್ರಶ್ನೆ ಮೂಡಿದೆ.
ಜೈಲಿನ ನಿಯಮಗಳೇನು?
ಜೈಲಲ್ಲಿ ರಜಾ ದಿನಗಳಲ್ಲಿ ಯಾರ ಭೇಟಿಗೂ ಅವಕಾಶ ಇರುವುದಿಲ್ಲ. ಜೈಲಾಧಿಕಾರಿ ಅವಕಾಶ ನೀಡಿದ್ರೆ ಮಾತ್ರ ರೆಕಾರ್ಡ್ ಮಾಡ್ಬೇಕು, ವಾರದಲ್ಲಿ ಎರಡು ದಿನ ಮಾತ್ರ ಸ್ನೇಹಿತರು, ಕುಟುಂಬಸ್ಥರ ಭೇಟಿಗೆ ಅವಕಾಶವಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ 2 ಬಾರಿ ಮಾತನಾಡಲು ಅವಕಾಶ ನೀಡಲಾಗುತ್ತೆ. ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಬಾರಿ ಭೇಟಿಗೆ ಅವಕಾಶ ಇದೆ, ಇನ್ನು ಬಂಧಿಗಳು ತಮ್ಮ ವಕೀಲರನ್ನ ಭೇಟಿ ಮಾಡಲು ಅವಕಾಶ ನೀಡುತ್ತೆ.. ಆದರೆ ನಟ ದರ್ಶನ್ ವಿಚಾರದಲ್ಲಿ ಯಾವುದೇ ಕಾನೂನು ಪಾಲಿಸ್ತಿಲ್ಲ ಎನ್ನಲಾಗಿದೆ. ದರ್ಶನ್ ಜೈಲು ಸೇರಿದ ಕೆಲವೇ ದಿನಗಳಲ್ಲಿ ಹಲವರು ಜೈಲಿಗೆ ಭೇಟಿ ನೀಡಿದ್ದು ಜೈಲು ಸಿಬ್ಬಂದಿ ಮೇಲೆ ಅನುಮಾನ ಮೂಡಿದೆ.
ಈ ಮಧ್ಯೆ ಆರೋಪಿ ಪವಿತ್ರಾಗೌಡ ಕುಟುಂಬಸ್ಥರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಪವಿತ್ರಾ ತಾಯಿ-ತಂದೆ, ಸಹೋದರ ಪವಿತ್ರಾಗಾಗಿ ಬಟ್ಟೆ ಮತ್ತು ಹಣ್ಣುಗಳನ್ನ ಕೊಂಡೊಯ್ದಿದ್ದಾರೆ. ಬ್ಯಾಗ್ನಲ್ಲಿ ಅಗತ್ಯ ವಸ್ತುಗಳನ್ನ ತೆಗೆದುಕೊಂಟು ಜೈಲಿನೊಳಗೆ ಹೋಗುತ್ತಿರುವುದು ಕಂಡು ಬಂದಿದೆ. ಜೈಲಿನಲ್ಲಿ ಸಮತಾ ಜೊತೆ ಮಾತಾಡಲು ದರ್ಶನ್ ಒಪ್ಪಿಗೆ ಸೂಚಿಸಿದ್ದು, ಇಬ್ಬರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ:ಜೈಲಲ್ಲೂ ರೂಲ್ಸ್ ಬ್ರೇಕ್? ದರ್ಶನ್ ಭೇಟಿಯಾಗಿದ್ದೇಕೆ ಪವಿತ್ರಾ ಗೌಡ ಸ್ನೇಹಿತೆ; ಈ ಸಮತಾ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ