/newsfirstlive-kannada/media/post_attachments/wp-content/uploads/2025/01/PAVITRA_GOWDA-1.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿರುವ ಎ1 ಆರೋಪಿ ಪವಿತ್ರಾ ಗೌಡ, ಪ್ರಯಾಗರಾಜ್ನ 2025ರ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ, ಮೌನಿ ಅಮಾವಾಸ್ಯೆಯ ದಿನ ಶಾಹಿ ಸ್ನಾನ ಮಾಡಿದ್ದಾರೆ.
ಪವಿತ್ರಾ ಗೌಡ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಸ್ನೇಹಿತೆಯರೊಂದಿಗೆ ಭೇಟಿ ನೀಡಿದ್ದಾರೆ. ಮೌನಿ ಅಮಾವಾಸ್ಯೆ ದಿನವೇ ಕುಂಭಮೇಳಕ್ಕೆ ತೆರಳಿದ್ದು ಅಲ್ಲಿ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನವನ್ನು ಮಾಡಿದ್ದಾರೆ. ದೇವರಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಹಣೆಗೆ ಭಂಡಾರ ಬಳಿದು, ಕೈಯಲ್ಲಿ ಹೂವುಗಳನ್ನು ಹಿಡಿದು ಫೋಟೋಗೆ ಪೋಸ್ ಕೂಡ ಕೊಟ್ಟಿದ್ದಾರೆ.
ಪ್ರಯಾಗರಾಜ್ಗೆ ಭೇಟಿ ನೀಡಿದ್ದ ವೇಳೆ ಪವಿತ್ರಾ ಗೌಡ ಅವರು ಬೋಟ್ನಲ್ಲಿ ಜಾಲಿಯಾಗಿ ಹೋಗಿ ಎಂಜಾಯ್ ಮಾಡಿದ್ದಾರೆ. ನೂರಾರು ಹಕ್ಕಿಗಳು ಅವರ ಬೋಟ್ ಸುತ್ತ ಮುತ್ತಿಕೊಂಡಿದ್ದವು. ಅಲ್ಲಿನ ಟೀ ಸ್ಟಾಲ್ವೊಂದರಲ್ಲಿ ಚಹಾ ಸವಿದಿದ್ದಾರೆ. ಸದ್ಯ ಈ ಸಂಬಂಧದ ವಿಡಿಯೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕಿರುವುದಕ್ಕೆ ನಾನೇ ಧನ್ಯಾಳು. ಎಲ್ಲಾ ನೆಗೆಟಿವ್ನಿಂದ ಮುಕ್ತನಾಗಿದ್ದೇನೆ ಎಂದು ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಸೋನಿಯಾ ವಿರುದ್ಧ ರಾಷ್ಟ್ರಪತಿಗೆ ಅವಮಾನ ಮಾಡಿದ ಆರೋಪ.. ಟೀಕಿಸುವ ಭರದಲ್ಲಿ ಹೇಳಿದ್ದೇನು?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಗೌಡ ಡಿಸೆಂಬರ್ 17 ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದರು. ಆ ನಂತರ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಕೆ ಮಾಡಿದ್ದರು.
ಜೈಲಿನಿಂದ ಹೊರ ಬಂದ ಮೇಲೆ ದೇವಾಲಯದ ಹೊರಂಗಾಣದಲ್ಲಿ ಸ್ನಾನ ಮಾಡಿದ್ದರು. ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಹಾಗೂ ಇತರ 5 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ