/newsfirstlive-kannada/media/post_attachments/wp-content/uploads/2024/09/PAVITRA_DARSHAN.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲು ಸೇರಿ 120 ದಿನಗಳು ಆಗಿದ್ದು ಸೆಂಟ್ರಲ್ ಜೈಲಿನಲ್ಲಿ ಅವರಿಗೆ ಒಂಟಿತನ ಕಾಡುತ್ತಿದೆ.
ಪವಿತ್ರಾಗೌಡಗೆ ಜೈಲಿನ ಕಠಿಣ ನಿಯಮಗಳು ನುಂಗಲಾರದ ತುತ್ತಾಗಿವೆ. ಮತ್ತೊಂದು ಕಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಎಲ್ಲ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ನಟ ದರ್ಶನ್ರನ್ನ ಬಳ್ಳಾರಿ ಕೇಂದ್ರಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಘಟನೆ ನಡೆದ ಮೇಲೆ ದರ್ಶನ್ ಅಂತರ ಕಾಯ್ದುಕೊಂಡಿರುವ ಕುರಿತು ಪವಿತ್ರಾಗೌಡಗೆ ಬೇಸರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೊಬೈಲ್ ನೋಡಿಕೊಂಡು ಕುಳಿತ ಸ್ಟೇಷನ್ ಮಾಸ್ಟರ್.. ಆಟೊಗೆ ರೈಲು ಡಿಕ್ಕಿ; ತಂದೆ, ಮಕ್ಕಳು ಗಂಭೀರ
ಆಗಾಗ ಕೋರ್ಟ್ ವಿಸಿ ಇದ್ದಾಗ ದರ್ಶನ್, ಪವಿತ್ರಾಗೌಡ ಕಣ್ಣಿಗೆ ಬೀಳುತ್ತಿದ್ದರು. ಬಳ್ಳಾರಿ ಜೈಲಿಗೆ ಹೋದ ಮೇಲೆ ಅದು ಕೂಡ ಇಲ್ಲವಾಗಿದೆ. 20 ಮಂದಿ ವಿಚಾರಣಾಧೀನ ಕೈದಿಗಳ ಜೊತೆಯಲ್ಲಿದ್ದರೂ ಹೊರಗಡೆ ಓಡಾಟಕ್ಕೆ ಮೊದಲು ಅವಕಾಶವಿತ್ತು. ಆದ್ರೀಗ ದರ್ಶನ್ ರಾಜಾತಿಥ್ಯ ಕೇಸ್ ಆದ ಬಳಿಕ ತುಂಬಾ ಕಠಿಣ ನಿಯಮಗಳು ಜೈಲಿನಲ್ಲಿ ಪಾಲನೆ ಮಾಡಲಾಗುತ್ತಿದೆ. ಹೀಗಾಗಿ ಪವಿತ್ರಾಗೌಡ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇಂದು ಥಿಯೇಟರ್ಗಳಲ್ಲಿ ‘ಮಾರ್ಟಿನ್’ ಹವಾ.. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಬ್ಬರ ಜೋರು
ಅಕ್ಟೋಬರ್ 14 ರಂದು ಜಾಮೀನು ಅರ್ಜಿ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು ಅಂದು ಏನಾಗುತ್ತೋ ಎನ್ನುವ ಟೆನ್ಷನ್ನಲ್ಲಿ ಪವಿತ್ರಾ ಇದ್ದಾರೆ. ಈ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚಿಸಿದ್ದಾರೆ. ತನ್ನ ಜಾಮೀನು ಆದೇಶ ಏನಾಗುತ್ತೋ ಎಂಬ ಆತಂಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ಪವಿತ್ರಾಗೌಡ ಆರೋಗ್ಯದಲ್ಲಿ ಸಮಸ್ಯೆಯಾಗಿದ್ದು, ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ