ಪ್ರೇಮಿಗಳ ದಿನದಂದೇ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿದ ಪವಿತ್ರಾ ಗೌಡ

author-image
Bheemappa
Updated On
ಪ್ರೇಮಿಗಳ ದಿನದಂದೇ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಮಾಡಿದ ಪವಿತ್ರಾ ಗೌಡ
Advertisment
  • ಪುನಃ ಸ್ಟುಡಿಯೋ ಪ್ರಾರಂಭ ಹಿನ್ನೆಲೆ, ಪವಿತ್ರಾ ಮನೆಯಲ್ಲಿ ಖುಷಿ
  • ಸ್ಟುಡಿಯೋ ರೀಲಾಂಚ್​ಗೆ ಸ್ಪೆಷಲ್ ಗೆಸ್ಟ್ ಯಾರಾದ್ರು ಬಂದಿದ್ರಾ?
  • ಎರಡು ವರ್ಷಗಳ ಹಿಂದೆಯೇ ಪ್ರಾರಂಭ ಮಾಡಿದ್ದ ಸ್ಟುಡಿಯೋ

ಬೆಂಗಳೂರು: ವ್ಯಾಲೆಂಟೈನ್ಸ್ ಡೇಯಂದೇ ನಟಿ ಪವಿತ್ರಾ ಗೌಡ ಅವರು ರೆಡ್​ ಕಾರ್ಪೆಟ್​ ಸ್ಟುಡಿಯೋವನ್ನು ಪುನಃ ಆರಂಭಿಸಿದ್ದಾರೆ. ಪವಿತ್ರಾ ಅವರು ಜೈಲಿಗೆ ಹೋದ ಮೇಲೆ ಸಿಲಿಕಾನ್ ಸಿಟಿಯ ಆರ್​ಆರ್ ನಗರದಲ್ಲಿರುವ ರೆಡ್​ ಕಾರ್ಪೆಟ್​ ಸ್ಟುಡಿಯೋ ಮುಚ್ಚಿತ್ತು. ಆದರೆ ಈಗ ಮತ್ತೆ ಆರಂಭಿಸಲಾಗಿದೆ.

publive-image

ರೇಣುಕಾಸ್ವಾಮಿ ಪ್ರಕಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದರು. ಜೈಲಿಗೆ ಹೋದ ಮೇಲೆ ಕಳೆದ 8 ತಿಂಗಳಿನಿಂದ ಮುಚ್ಚಿ ಹೋಗಿದ್ದ ರೆಡ್​ ಕಾರ್ಪೆಟ್​ ಸ್ಟುಡಿಯೋವನ್ನು ಈಗ ಪುನಃ ಪ್ರಾರಂಭ ಮಾಡಲಾಗಿದೆ. ಜೈಲಿನಿಂದ ಹೊರ ಬಂದವರೇ ಪವಿತ್ರಾ ಅವರು ವ್ಯಾಪಾರದ​ ಕಡೆಗೆ ಒಲವು ತೋರಿದ್ದಾರೆ.

2 ವರ್ಷದ ಹಿಂದೆ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಪವಿತ್ರಾ ಗೌಡ ಅವರು ಲಾಂಚ್ ಮಾಡಿದ್ದರು. ಈ ವೇಳೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​ ನಟಿಯರಾದ ರಕ್ಷಿತಾ ಪ್ರೇಮ್, ಮೇಘಾ ಶೆಟ್ಟಿ, ನಿಶ್ವಿಕಾ ನಾಯ್ಡು ಹಾಗೂ ಅಮೂಲ್ಯ ಅವರು ಆಗಮಿಸಿದ್ದರು. ಆದರೆ ಇಂದು ರೀ ಲಾಂಚ್ ಮಾಡಬೇಕಾದರೆ ಯಾವ ಸ್ಪೆಷಲ್ ಗೆಸ್ಟ್ ಇರಲಿಲ್ಲ.

ಇದನ್ನೂ ಓದಿ:ಭಾರತೀಯ ಅಂಚೆ ಇಲಾಖೆ ಇಂದ ಭರ್ಜರಿ ಗುಡ್​ನ್ಯೂಸ್​.. 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ

publive-image

ರೆಡ್ ಕಾರ್ಪೆಟ್ ಸ್ಟುಡಿಯೋದ ರೀಲಾಂಚ್ ಕಾರ್ಯಕ್ರಮಕ್ಕೆ ಪವಿತ್ರಾ ಗೌಡ ಅವರು ಸಿಲ್ಕ್ ಸೀರೆ ಧರಿಸಿ, ರೇಂಜ್ ರೋವರ್ ಕಾರ್‌ನಲ್ಲಿ ಬಂದಿದ್ದರು. ಪವಿತ್ರಾ ಗೌಡ, ಸ್ಟುಡಿಯೋದಲ್ಲಿ ಕಾರ್ಯಸಿದ್ಧಿ ಹೋಮ, ಗಣಹೋಮ ಮಾಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ಸ್ಟುಡಿಯೋ ರೀ ಲಾಂಚ್ ಹಿನ್ನೆಲೆಯಲ್ಲಿ ಪವಿತ್ರಾ ಅವರ ಮನೆಯಲ್ಲಿ ಸಂತಸದ ವಾತಾವರಣ ಮೂಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment