/newsfirstlive-kannada/media/post_attachments/wp-content/uploads/2025/05/pavitra-gowda7.jpg)
ಇತ್ತೀಚೆಗಷ್ಟೇ ಪವಿತ್ರಾ ಗೌಡ, ದರ್ಶನ್ ಸೇರಿ 16 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗಿದ್ದರು. ಇಬ್ಬರು ನ್ಯಾಯಾಲಯದಲ್ಲಿ ಭೇಟಿಯಾಗಿದ್ದರು. ಕೋರ್ಟ್ನಲ್ಲಿ ದರ್ಶನ್ ಭೇಟಿಯಾಗಿ ಒಂದು ದಿನದ ಬಳಿಕ ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾಲ, ತಾಳ್ಮೆ, ಮೌನದ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ
ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಪವಿತ್ರಾ ಗೌಡ ಆಗಾಗ ಹೊಸ ಹೊಸ ಫೋಟೋಗಳು ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದ್ರೆ ಇದೀಗ ಸ್ಟೋರಿಯಲ್ಲಿ ಸಮಯ, ತಾಳ್ಮೆ, ಮೌನದ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದಾರೆ.
ಒಂದು ಸ್ಟೋರಿಯಲ್ಲಿ ಸಮಯ ಮತ್ತು ತಾಳ್ಮೆ ತುಂಬಾ ಮುಖ್ಯ.. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಅತ್ಯುತ್ತಮ ಉತ್ತರ.. ಪ್ರತಿಯೊಂದು ಸನ್ನಿವೇಶದಲ್ಲೂ ನಗುವುದು ಅತ್ಯುತ್ತಮ ಪ್ರತಿಕ್ರಿಯೆ ಅಂತ ಹಾಕಿಕೊಂಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪದಿನ ನಟಿಸಿ ನೋಡು, ನಿನ್ನವರು ಯಾರು ಎಂದು ತಿಳಿಯುತ್ತದೆ. ತಾಳ್ಮೆ ತುಂಬಾ ಮುಖ್ಯ ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದಾರೆ. ಆದ್ರೆ ಇದೀಗ ಈ ಪೋಸ್ಟ್ ಹಾಕಿರುವುದು ಸಾಕಷ್ಟು ಕುತೂಹಲವನ್ನು ಉಂಟು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ