/newsfirstlive-kannada/media/post_attachments/wp-content/uploads/2025/06/pavitra-gowda.jpg)
ನಟಿ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದಲ್ಲಾ ಒಂದು ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ.. ಗೋವಿನ ಕೆಚ್ಚಲು ಕೊಯ್ದು ವಿಕೃತಿ..
ಇದೀಗ ಪವಿತ್ರಾ ಗೌಡ ಅವರ ಮತ್ತೊಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು, ಪವಿತ್ರಾ ಗೌಡ ಅವರು ಆರ್ಆರ್ ನಗರದಲ್ಲಿರೋ ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿಗೆ ಭೇಟಿ ಕೊಟ್ಟಿದ್ದಾರೆ. ಇದೇ ವಿಡಿಯೋವನ್ನು ಪ್ರದೀಪ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಅಕ್ಕಾ ನೀನು ಯಾವಾಗಲೂ ಸಂತೋಷವಾಗಿರಬೇಕೆಂದು ನಾನು ಬಯಸುತ್ತೇನೆ ಅಂತ ಬರೆದುಕೊಂಡಿದ್ದಾರೆ.
View this post on Instagram
ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿ ವಿಶೇಷತೆ ಏನು?
ಭಾರತದ ಫಸ್ಟ್ ಸ್ಟ್ರೀಮ್ ರೆಸ್ಟೋರೆಂಟ್ ರಾಜರಾಜೇಶ್ವರಿ ನಗರದಲ್ಲಿದೆ. ಅದಕ್ಕೆ ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿಯಲ್ಲಿ ಎಂದು ಹೆಸರು ಇಡಲಾಗಿದೆ. ಈ ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿಯ ವಿಶೇಷತೆ ಏನೆಂದರೆ ಖುದ್ದು ನಟ ದರ್ಶನ್ ಅವರು ಕ್ಯಾಮೆರಾದಲ್ಲಿ ಸೆರೆ ಹಿಡಿದ ಪ್ರಾಣಿಗಳ ಹಾಗೂ ಪಕ್ಷಿಗಳ ಫೋಟೋಗಳ ಫ್ರೇಮ್ಗಳನ್ನು ಅಳವಡಿಸಲಾಗಿದೆ. ಈ ಡಿ ಬಾಸ್ ಸಫಾರಿ ರೆಸ್ಟೋರೆಂಟ್ಗೆ ಆಗಾಗ ದರ್ಶನ್ ಅವರು ಹೋಗುತ್ತಾ ಇರುತ್ತಾರೆ. ಹೀಗಾಗಿ ಈ ರೆಸ್ಟೋರೆಂಟ್ನಲ್ಲಿ ಆನೆ, ಚಿರತೆ, ಹಲವಾರು ವಿಧಧ ಪಕ್ಷಿಗಳ ಫೋಟೋಗಳನ್ನು ಖುದ್ದು ದರ್ಶನ್ ಅವರೇ ಕ್ಲಿಕ್ಕಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ಗಮನ ಸೆಳೆಯುವ ಸಲುವಾಗಿ ಹೀಗೆ ಮಾಡಿದ್ದಾರೆ ಮಾಲೀಕರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ