/newsfirstlive-kannada/media/post_attachments/wp-content/uploads/2024/09/PAVITRA_DARSHAN.jpg)
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್​ನಿಂದ ಜಾಮೀನು ಪಡೆದಿರುವ ಪವಿತ್ರಗೌಡ ಇವತ್ತು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಇದೇ ಪ್ರಕರಣದಲ್ಲಿ ಲಾಕ್ ಆಗಿರುವ ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ಪ್ರದೂಷ್ ಕೂಡ ರಿಲೀಸ್ ಆಗುವ ಸಾಧ್ಯತೆ ಇದೆ.
ಕಳೆದ ಶುಕ್ರವಾರ ಹೈಕೋರ್ಟ್​ನಲ್ಲಿ ದರ್ಶನ್, ಪವಿತ್ರಗೌಡ ಸೇರಿ ಒಟ್ಟು 7 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಆದೇಶದ ಪ್ರತಿ ಜೈಲು ತಲುಪಿದ ಬಳಿಕ ಇವರೆಲ್ಲ ರಿಲೀಸ್ ಆಗಲಿದ್ದಾರೆ. ಕಳೆದ ಆರು ತಿಂಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ಶಿವಮೊಗ್ಗ ಜೈಲಿನಲ್ಲಿ ಜಗದೀಶ್, ಲಕ್ಷ್ಮಣ್ ಇದ್ದರೆ, ಕಲಬುರಗಿ ಜೈಲಿನಲ್ಲಿ ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರದೂಷ್ ಮತ್ತು ಅನುಕುಮಾರ್ ಇದ್ದಾರೆ.
ಪವಿತ್ರಗೌಡಗೂ ಬಿಡುಗಡೆ ಭಾಗ್ಯ
ಪ್ರಕರಣದ ಮೊದಲ ಆರೋಪಿ ಆಗಿರುವ ಪವಿತ್ರಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೂನ್ 11 ರಂದು ಅರೆಸ್ಟ್​ ಆಗಿದ್ದ ಪವಿತ್ರಾಗೌಡ, ಜೂನ್ 20 ರಂದು ಜೈಲು ಸೇರಿದ್ದರು. ಬರೋಬ್ಬರಿ ಆರು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಬಳ್ಳಾರಿ ಜೈಲು ಸೇರಿದ್ದ ದರ್ಶನ್, ಈಗಾಗಲೇ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:6 ವಿಕೆಟ್ ಪಡೆದ ಬುಮ್ರಾ; ಟೀಂ ಇಂಡಿಯಾಗೆ ಬೃಹತ್ ಸವಾಲು, ಆರಂಭದಲ್ಲಿ ಇಬ್ಬರು ಔಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us