newsfirstkannada.com

ಪವಿತ್ರಾ ಜಯರಾಂಗೆ ಬ್ರೈನ್ ಸ್ಟ್ರೋಕ್.. ಅಪಘಾತದ ಸ್ಥಳದಲ್ಲಿ ಆಗಿದ್ದೇನು? ಕೊನೆಯದಾಗಿ ನಟಿ ಹೇಳಿದ್ದೇನು?

Share :

Published May 13, 2024 at 9:26pm

Update May 13, 2024 at 9:19pm

    ಪವಿತ್ರಾ ಜಯರಾಂ ಅಕಾಲಿಕ ಮರಣ, ಗ್ರಾಮದಲ್ಲಿ ನೀರವ ಮೌನ

    ಕಾರಿನಲ್ಲಿದ್ದ ಮೂವರು ಸೇಫ್‌ ಹಿಂದಿದ್ದ ನಟಿ ಪವಿತ್ರಾ ದಾರುಣ ಸಾವು

    ಪವಿತ್ರಾ ಜಯರಾಂ ಬಣ್ಣದ ಲೋಕಕ್ಕೂ ಬಂದಿದ್ದು ಕೂಡ ಅನಿರೀಕ್ಷಿತ

ಪವಿತ್ರಾ ಜಯರಾಂ ಸ್ಟಾರ್ ನಟಿಯ ಬದುಕು ದುರಂತ ಅಂತ್ಯ ಕಂಡಿದೆ. ಅಧ್ಯಾಯ 16ನೇ ವಯಸ್ಸಿಗೆ ಮದ್ವೆ! 2 ಮಕ್ಕಳು ! ಕೊನೆಗೆ ಡಿವೋರ್ಸ್! ಕುಟುಂಬಕ್ಕಾಗಿ ಗಾರ್ಮೆಂಟ್ಸ್‌ನಲ್ಲಿ ಕೆಲಸ. ಹೀಗೆ ಬದುಕಿನುದ್ದಕ್ಕೂ ಸಂಕಷ್ಟಗಳ ಸರಮಾಲೆಯಲ್ಲಿ ಬಂಧಿಯಾಗಿದ್ದ ಪವಿತ್ರಾ ಜೀವನದ ಒಂದು ರೋಚಕ. ಒಂದು ಕಡೆ ಅಮ್ಮನನ್ನ ಕಳೆದುಕೊಂಡ ಮಗಳ ಸಂಕಟ. ಇನ್ನೊಂದೆಡೆ ಸಂಗಾತಿಯಾಗಿ, ಸ್ನೇಹಿತೆಯಾಗಿ, ಬದುಕಿನ ಬಂಡಿಯಲ್ಲಿ ಪ್ರಯಾಣಿಕಳಾಗಿದ್ದವಳನ್ನ ಕಳೆದುಕೊಂಡ ಗೆಳೆಯನ ನೋವು. ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವು ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಅಕ್ಷರಶಃ ನೀರವ ಮೌನ ಆವರಿಸುವಂತೆ ಮಾಡಿತ್ತು.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಪವಿತ್ರಾ ಜೀವನದುದ್ದಕ್ಕೂ ಸವಾಲುಗಳೇ ಇದ್ದವು. ಪ್ರತಿ ಕ್ಷಣಕ್ಕೂ ಒಂದಲ್ಲ ಒಂದು ಕಷ್ಟ. ಜೀವನ ಮುಳ್ಳಿನ ಹಾದಿಯಾಗಿದ್ರೂ ಪವಿತ್ರಾ ಆ ಹಾದಿಯನ್ನೆ ಮೆಟ್ಟಿಲು ಮಾಡ್ಕೊಂಡು ಆಡಿಕೊಂಡವರೆಲ್ಲ ತಿರುಗಿ ನೋಡುವಂತೆ ಬದುಕಿದ್ರು. ಆದ್ರೆ, ಕ್ರೂರಿ ವಿಧಿಯಾಟಕ್ಕೆ ಪವಿತ್ರಾ ಬದುಕಿನ ಪಯಣ ಅರ್ಧಕ್ಕೆ ಮುಗಿದು ಹೋಗಿದೆ. ಭಾನುವಾರ ಶೂಟಿಂಗ್​​ ಇಲ್ಲದೇ ಇರೋ ಕಾರಣ ಪವಿತ್ರಾ ತಮ್ಮ ಹುಟ್ಟೂರು ಮಂಡ್ಯದ ಉಮ್ಮಡಳ್ಳಿಗೆ ಬಂದಿದ್ರು. ಕೆಲಸ ಎಲ್ಲ ಮುಗಿಸಿ ಮಧ್ಯಾಹ್ನದ ಹೊತ್ತಿಗೆ ಪವಿತ್ರಾ, ಪತಿ ಚಂದ್ರಕಾಂತ್‌, ಪವಿತ್ರಾ ಅಕ್ಕನ ಮಗಳು ಮತ್ತು ಡ್ರೈವರ್ ಬೆಂಗಳೂರಿನಿಂದ ಹೈದರಾಬಾದ್​ ಕಡೆ ಪ್ರಯಾಣ ಬೆಳೆಸಿದ್ರು. ಆದ್ರೆ, ಆಂಧ್ರದ ಮೆಹಬೂಬ್‌ನಗರ ಜಿಲ್ಲೆಯ ಶೇರಿಪಲ್ಲಿ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರಿಗೆ ಬಸ್​ ಡಿಕ್ಕಿ ಹೊಡೆದಿದೆ.

ರಣ ಭೀಕರ ಅಪಘಾತದಿಂದ ಪವಿತ್ರಾ ಜಯರಾಂ ಸ್ಥಳದಲ್ಲೇ ಉಸಿರು ಚೆಲ್ಲಿದ್ರೆ, ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಭೀರ ಗಾಯಗಳು ಆಗಿದ್ದವು. ಮಧ್ಯಾಹ್ನ 2.30ರ ಹೊತ್ತಿಗೆ ಪವಿತ್ರಾ ಹೈದ್ರಾಬಾದ್​ನತ್ತ ಹೊರಟಿದ್ರು. ದುರಂತ ಏನಂದ್ರೆ ಸಂಜೆಯಾಗೋ ಹೊತ್ತಿಗೆ ಜೋರಾದ ಮಳೆ ಶುರುವಾಗಿದೆ. ಮೂರು ಗಂಟೆಯವರೆಗೂ ಬಿಟ್ಟು ಬಿಡದೇ ಮಳೆ ಸುರಿದಿದೆ. ಹೀಗಾಗಿ ಪವಿತ್ರಾ ಜಯರಾಂ ಮೂರು ಗಂಟೆ ಟ್ರಾಫಿಕ್​ನಲ್ಲೇ ಸಿಲುಕಿಕೊಂಡಿದ್ರು. ಮೂರು ಗಂಟೆ ಟ್ರಾಫಿಕ್​ನಲ್ಲಿ ನಿಂತು ಎಲ್ಲರಿಗೂ ಸುಸ್ತಾಗಿತ್ತು, ಅದೇ ಸುಸ್ತಿನಲ್ಲೇ ಪ್ರಯಾಣ ಮುಂದುವರಿಸಿದ್ದಾರೆ. ಆದ್ರೆ ಮೆಹಬೂಬ್ ನಗರದ ಶೆರಿಪಳ್ಳಿ ಅನ್ನೋ ಊರಿನ ಬಳಿ ಬಂದಾಗ ಪವಿತ್ರಾ ಇದ್ದ ಕಾರಿಗೆ ಬಸ್​ ರಭಸವಾಗಿ ಡಿಕ್ಕಿ ಹೊಡೆದಿದೆ. ರಭಸವಾಗಿ ಬಸ್​ ಗುದ್ದಿದ್ರೂ ಕಾರಲ್ಲಿದ್ದವರಿಗೆ ಗಂಭೀರ ಗಾಯಗಳೇನಾಗಿರಲಿಲ್ಲ. ಆದ್ರೆ ಪವಿತ್ರಾ ಮಾತ್ರ ಅಪಘಾತದಿಂದ ಶಾಕ್​ಗೆ ಒಳಗಾಗಿದ್ರು. ಅಪಘಾತವಾದ ಬಳಿಕ ಜೊತೆಯಲ್ಲಿದ್ದ ಗೆಳೆಯ ಚಂದ್ರಕಾಂತ್​ಗೆ ಪವಿತ್ರಾ ಏನಾಯ್ತು? ಏನಾಯ್ತು ಅಂತ ಕೇಳಿದ್ದಾರೆ. ಹಾಗೆ ಮಾತಾಡುತ್ತಾ ಮಾತಾಡ್ತಾನೆ ಪವಿತ್ರ ಪ್ರಜ್ಞೆ ತಪ್ಪಿದ್ದಾರೆ.

ಇದನ್ನೂ ಓದಿ: ಕುಡುಗೋಲಿನಿಂದ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ.. ತ್ರಿಬಲ್ ಮರ್ಡರ್ ಬೆನ್ನಲ್ಲೇ ಮತ್ತೆ ಬೆಚ್ಚಿಬಿದ್ದ ಶಿವಮೊಗ್ಗ

ಅಪಘಾತವಾಗ್ತಿದ್ದಂತೆ ಸ್ಥಳೀಯರೆಲ್ಲ ಸೇರಿ ಪವಿತ್ರಾ ಮತ್ತು ಆಕೆ ಗೆಳೆಯರನ್ನ ಕಾರಿನಿಂದ ರಕ್ಷಣೆ ಮಾಡಿದ್ದಾರೆ. ಆದ್ರೆ ಅಷ್ಟೋತ್ತಿಗಾಗಲೇ ಅಪಘಾತದ ಶಾಕ್​ನಿಂದ ಪವಿತ್ರಾ ಪ್ರಜ್ಞೆ ತಪ್ಪಿದ್ರು. ತಕ್ಷಣವೇ ಆ್ಯಂಬುಲೆನ್ಸ್​ಗೆ ಕರೆ ಮಾಡಲಾಗಿದೆ. ದುರಂತ ಏನಂದ್ರೆ ಬರೋಬ್ಬರಿ 20 ನಿಮಿಷ ತಡವಾಗಿ ಆ್ಯಂಬುಲೆನ್ಸ್​ ಆ್ಯಕ್ಸಿಡೆಂಟ್ ನಡೆದ ಸ್ಥಳಕ್ಕೆ ಬಂದಿದೆ. ಬಳಿಕ ಪವಿತ್ರಾರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದ್ರೆ ಅಷ್ಟೋತ್ತಿಗಾಗಲೇ ಸಮಯ ಕಳೆದು ಹೋಗಿತ್ತು. ಆಸ್ಪತ್ರೆ ವೈದ್ಯರು ಪವಿತ್ರಾಗೆ ಬ್ರೈನ್ ಸ್ಟ್ರೋಕ್ ಆಗಿದೆ ಅಂತ ಹೇಳಿದ್ರು. ಭೀಕರ ಅಪಘಾತದ ಶಾಕ್​​ನಿಂದಲೇ ಪವಿತ್ರಾ ಹೃದಯದ ಬಡಿತ ನಿಂತು ಹೋಗಿತ್ತು.

ಆ್ಯಕ್ಸಿಡೆಂಟ್ ರೂಪದಲ್ಲಿ ಬಂದ ಜವರಾಯ ಪವಿತ್ರ ಉಸಿರು ಕಸಿದು ಕೊಂಡುಬಿಟ್ಟಿದ್ದ. ಬದುಕಿಗೆ ಎದುರಾದ ಚಾಲೆಂಜ್​ಗಳನ್ನೆಲ್ಲ ಫೇಸ್ ಮಾಡಿದ್ದ ಪವಿತ್ರಾ ವಿಧಿಯೊಡ್ಡಿದ್ದ ಚಾಲೆಂಜ್​​ನಲ್ಲಿ ಪ್ರಾಣ ಕಳೆದುಕೊಂಡಿದ್ರು. ಇಲ್ಲಿ ಒಂದು ವಿಚಾರ ಹೇಳಲೇಬೇಕು ಈ ಅಪಘಾತದಲ್ಲಿ ಕಾರ್​​ನಲ್ಲಿದ್ದ ಪವಿತ್ರಾಗಾಗಲೀ, ಅಥವಾ ಆಕೆ ಜೊತೆ ಪ್ರಯಾಣ ಮಾಡ್ತಿದ್ದವರಿಗಾಗಲೇ ಗಂಭೀರ ಗಾಯಗಳೇನು ಆಗಿಲ್ಲ. ಹೀಗಾಗಿ ಪವಿತ್ರಾ ಮೈಂಡ್​ ಸಿಕ್ಕಾಪಟ್ಟೆ ಟೈಯರ್ಡ್ ಆಗಿತ್ತು. ಇಂಥಾ ಸಮಯದಲ್ಲಿ ಏಕಾಏಕಿ ಬಸ್​ ಬಂದು ಪವಿತ್ರಾ ಕಾರ್​ಗೆ ಗುದ್ದಿದೆ. ಆ ದೃಶ್ಯ ನೋಡ್ತಿದ್ದಂತೆ ಪವಿತ್ರಾಗೆ ಶಾಕ್​ ಆಗಿದೆ. ಆ ಶಾಕ್​​ನಲ್ಲೇ ಎದೆ ಬಡಿತ ನಿಂತು ಪ್ರಾಣ ಪಕ್ಷಿ ಹಾರಿ ಹೋಗಿದೆ. ಕಾರಿನಲ್ಲಿ ನಾವು ನಾಲ್ವರು ಪ್ರಯಾಣ ಮಾಡುತ್ತಿದ್ದೇವು. ಡ್ರೈವರ್, ಪವಿತ್ರ ಅವರ ಸಹೋದರಿಯ ಮಗಳು ಇದ್ದರು. ನಾನು ಡ್ರೈವರ್​ನ ಹಿಂಬದಿಯಲ್ಲಿ ಕೂತಿದ್ದೆ. ಪವಿತ್ರ ನನ್ನ ಪಕ್ಕ ಕೂತಿದ್ದರು. ಪ್ರಯಾಣದ ವೇಳೆ ನಾವು ನಿದ್ರೆಗೆ ಜಾರಿದ್ದೇವು. ನಮ್ಮ ಡ್ರೈವರ್ 60 ಫೀಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಸರ್ಕಾರದ ಆರ್​ಟಿಸಿ ಬಸ್​ ಬಂದಿದೆ. ಈ ವೇಳೆ ಎದರುಗಡೆಯಿಂದ ಬಂದ ಸ್ಕಾರ್ಪಿಯೋಗೆ ಕಾರು ಡಿಕ್ಕಿ ಆಯ್ತು‌. ಬ್ರೇಕ್ ಹಾಕಿದ ಹಿನ್ನಲೆ ಬಲಗಡೆಗೆ ಕಾರು ವಾಲಿತು. ಇದರಿಂದ ಎದುರುಗಡೆ ಇದ್ದ ಬಸ್​ಗೆ ನಮ್ಮ ಕಾರು ಡಿಕ್ಕಿ ಹೊಡೆದಿದೆ. ನಿಜ ಹೇಳಬೇಕು ಎಂದರೆ ಪವಿತ್ರ ಬಿಟ್ಟು ಬೇರೆ ಯಾರಿಗೂ ಏನೂ ಆಗಿಲ್ಲ. ನನ್ನ ಕೈಗೆ ಗಾಯವಾಗಿದೆ. ತಲೆಗೂ ಪೆಟ್ಟು ಆಗಿದೆ. ಅಪಘಾತದ ಭೀಕರತೆಯಿಂದ ಅವಳು ಆಘಾತದಲ್ಲಿದ್ದಳು. ಉಸಿರು ಕಟ್ಟಿದ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸಿದಳು. ಏನಾಯ್ತು? ಏನಾಯ್ತು? ಎನ್ನುತ್ತ ಉಸಿರಾಡೋದನ್ನೇ ನಿಲ್ಲಿಸಿಬಿಟ್ಟಳು.

– ಚಂದುಗೌಡ

ಪವಿತ್ರಾ ಜಯರಾಂ ಅಕಾಲಿಕ ಮರಣ! ಗ್ರಾಮದಲ್ಲಿ ನೀರವ ಮೌನ

ಟಾಲಿವುಡ್​ ಕಿರುತೆರೆಯಲ್ಲಿ ಪವಿತ್ರಾ ಹೆಸರು ಮಾಡಿದ್ರು. ಪವಿತ್ರಾ ಹುಟ್ಟಿದ್ದು ಬೆಳೆದಿದ್ದು ಎಲ್ಲ ಕರ್ನಾಟಕದಲ್ಲೇ. ಹೀಗಾಗಿ ಪವಿತ್ರಾ ಜಯರಾಂ ಅಂತ್ಯಕ್ರಿಯೆಯನ್ನ ಹುಟ್ಟುರಾದ ಉಮ್ಮಡಹಳ್ಳಿಯಲ್ಲಿ ನೇರವೇರಿಸಲಾಗಿದೆ. ಜೀವನದ ಚದುರಂಗದಾಟದಲ್ಲಿ ಗೆದ್ದು ಬೀಗಿದ್ದ ಪವಿತ್ರಾ ಅಕಾಲಿಕ ಮರಣ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿತ್ತು. ಭಾನುವಾರ ಮದರ್ಸ್​ ಡೇ. ಇತ್ತ ಪವಿತ್ರಾ ಕೂಡ ತಾಯಿಯ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ರು, ಆದ್ರೆ ಅಮ್ಮಂದಿರ ದಿನವೇ ಪವಿತ್ರಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ರು. ಅಮ್ಮಂದಿರ ದಿನದಂದೇ ಪವಿತ್ರಾ ಮುದ್ದಾದ ಮಕ್ಕಳನನ್ನ ಅಗಲಿಬಿಟ್ಟಿದ್ರು. ಪರಿಣಾಮ ಅಮ್ಮನ್ನ ಕಳೆದುಕೊಂಡ ಮಗಳ ದುಃಖ ಹೇಳತೀರದಾಗಿತ್ತು. ಅಮ್ಮ ನನ್ನ ಬಿಟ್ಟೋಗ್ಬೇಡಮ್ಮ ಅಂತ ಮಗಳು ಚಿರನಿದ್ರೆಗೆ ಜಾರಿದ ಅಮ್ಮನೆದುರು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.

ಇನ್ನು, ಪವಿತ್ರ ಜಯರಾಂ ಅಕಾಲಿಕ ಸಾವಿನ ನೋವು ಆಕೆ ಜೊತೆಯಲ್ಲಿ ಕೆಲಸ ಮಾಡಿದ್ದ ಸಹ ನಟರಿಗೂ ಅರಗಿಸಿಕೊಳ್ಳಲಾಗ್ತಿಲ್ಲ. ಪವಿತ್ರಾಗೆ ಬಿಗ್ ಬ್ರೇಕ್ ಕೊಟ್ಟ ಸಿರೀಯಲ್ ತ್ರಿನಯನಿ, ಈ ಸೀರಿಯಲ್​ನಲ್ಲಿ ಪವಿತ್ರಾ ಜೊತೆ ಕೆಲಸ ಮಾಡಿದ್ದ ನಟ ಚಂದುಗೌಡ ಪವಿತ್ರಾ ಜೊತೆಗಿನ ಒಡನಾಟವನ್ನ ನೆನಪಿಸಿಕೊಂಡಿದ್ದಾರೆ. ಜೀವನದ ಯಾತ್ರೆಯಲ್ಲಿ ಅದೆಷ್ಟು ಸವಾಲುಗಳಿದ್ವು. ದಿನಕ್ಕೊಂದು ಕಷ್ಟ. ಬದುಕಿನ ದಾರಿ ಏನು ಅಂತಲೂ ಗೊತ್ತಿಲ್ಲದ ಹುಡುಗಿ ಕಿರುತೆರೆ ಲೋಕದಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ಳು. ಎಲ್ಲವನ್ನು ಮೆಟ್ಟಿ ನಿಂತು ಇನ್ನೇನು ಜೀವನದಲ್ಲಿ ಒಂದು ಹಂತಕ್ಕೆ ಬಂದಾಗ ಪವಿತ್ರಾ ಬದುಕಿನ ಯಾತ್ರೆ ಮುಗಿದಿರೋದು ನಿಜಕ್ಕೂ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಜಯರಾಂಗೆ ಬ್ರೈನ್ ಸ್ಟ್ರೋಕ್.. ಅಪಘಾತದ ಸ್ಥಳದಲ್ಲಿ ಆಗಿದ್ದೇನು? ಕೊನೆಯದಾಗಿ ನಟಿ ಹೇಳಿದ್ದೇನು?

https://newsfirstlive.com/wp-content/uploads/2024/05/pavitra5.jpg

Load More