newsfirstkannada.com

VIDEO: ದರ್ಶನ್​ ಬದುಕಿಗೆ ಶನಿಯಾಗಿ ಬಂದಳು ಪವಿತ್ರಾ.. ಶಿಷ್ಯನ ಬಗ್ಗೆ ಬೇಸರ ಹೊರಹಾಕಿದ ಅಡ್ಡಂಡ ಕಾರ್ಯಪ್ಪ

Share :

Published June 15, 2024 at 2:35pm

    ಆರೋಪಿಯಾಗಿ ದರ್ಶನ್​​ನನ್ನು ಕಂಡಾಗ ನನಗೆ ದುಃಖ ಆಯ್ತು

    ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದ ಅಡ್ಡಂಡ ಕಾರ್ಯಪ್ಪ

    ಮೈಸೂರಿಗೂ ಕೆಟ್ಟ ಹೆಸರು ಬಂತು ಎಂದ ರಂಗಾಯಣದ ಮಾಜಿ ನಿರ್ದೇಶಕ

ಕೊಲೆ ಆರೋಪಿಯಾಗಿ ದರ್ಶನ್​​ನನ್ನು ಕಂಡಾಗ ನನಗೆ ತುಂಬ ದುಃಖ ಆಯ್ತು. ಒಬ್ಬ ನಟನಿಗೆ ಈ ಸ್ಥಿತಿ ಬರಬಾರದಾಗಿತ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬೇಸರ ಹೊರಹಾಕಿದ್ದಾರೆ.

ನಟ ದರ್ಶನ್​ಗೆ ಮೊಟ್ಟಮೊದಲು ಬಣ್ಣ ಹಚ್ಚಿದ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ನ್ಯೂಸ್​ಫಸ್ಟ್​ ಜೊತೆಗೆ ಮಾತನಾಡಿದ್ದು, ಶಿಷ್ಯನನ್ನು ಆರೋಪಿ ಸ್ಥಾನದಲ್ಲಿ ಕಂಡು ಬೇಸರ ಹೊರಹಾಕಿದ್ದಾರೆ. ಒಬ್ಬ ನಟ ಜೈಲಿಗೆ ಹೋಗಬಹುದು. ಆದರೆ ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಿರೋದು ಬಹಳ ದುಃಖ ಆಗಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ದರ್ಶನ್​ ಮೈಸೂರಿನಲ್ಲಿ ಹುಟ್ಟಿ ಬೆಳದವರು. ಮೈಸೂರು ಒಂದು ಸಾಂಸ್ಕೃತಿಕ ನಗರ. ಮೈಸೂರಿಗೂ ಕೆಟ್ಟ ಹೆಸರು ಬಂತು. ಅವನಿಗೆ ಶನಿಯಾಗಿ ಬಂದಿದ್ದೇ ಪವಿತ್ರಾ ಗೌಡ. ಆಕೆ ದರ್ಶನ್​ ಬದುಕಿಗೆ ಶನಿಯಾಗಿ ಬಂದಳು. ಅವಳು ಮದುವೆಯಾಗಿ, ಅವಳಿಗೊಂದು ಮಗು ಇದೆ. ಡಿವೋರ್ಸ್​ ಆಗಿ ಅವಳ ಬದುಕನ್ನು ನೋಡಿಕೊಂಡು ಬಂದಳು. ಅವಳು ಗಂಡನನ್ನು ಬಿಟ್ಟು ಬಂದಳು. ಗಂಡನು ಬಿಟ್ಟ. ದರ್ಶನ್​ಗೂ ಒಂದು ಹೆಂಡತಿ ಇದ್ದಾಳಲ್ಲ. ಸ್ಫುರದ್ರೂಪಿ ಮಗ ಇದ್ದಾನಲ್ಲ. ಇದು ಖಾಸಗಿ ಲೈಫ್​ ಅಂತಾ ಹೇಳ್ತಾರೆ. ಒಬ್ಬ ನಟ ಎಷ್ಟು ಬೇಕಾದ್ರು ಇಟ್ಟುಕೊಳ್ಳಬಹುದಾ? ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿಯದ್ದೂ ಕೂಡ ಮಿತಿಮೀರಿದ ವಾಂಛೆ. ಅದು ಕೊಲೆಯಲ್ಲಿ ಅವಸನವಾಯ್ತು ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದರ್ಶನ್​ ಬದುಕಿಗೆ ಶನಿಯಾಗಿ ಬಂದಳು ಪವಿತ್ರಾ.. ಶಿಷ್ಯನ ಬಗ್ಗೆ ಬೇಸರ ಹೊರಹಾಕಿದ ಅಡ್ಡಂಡ ಕಾರ್ಯಪ್ಪ

https://newsfirstlive.com/wp-content/uploads/2024/06/darshan-6-2.jpg

Load More