/newsfirstlive-kannada/media/post_attachments/wp-content/uploads/2024/06/pavitra1.jpg)
ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಎ1 ಆರೋಪಿಯಾಗಿರೋ ಪವಿತ್ರಾ ಗೌಡ ನಿನ್ನೆ ಅಸ್ವಸ್ಥರಾಗಿದ್ದರು. ಆ ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೀಗ ಪವಿತ್ರಾ ಗೌಡ ಹೇಗಿದ್ದಾರೆ ಗೊತ್ತಾ? ಏನಾಗಿದೆ? ಇಲ್ಲಿದೆ ಮಾಹಿತಿ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪವಿತ್ರಾ ಗೌಡ, ನಟ ದರ್ಶನ್ ಆ್ಯಂಡ್ ಗ್ಯಾಂಗ್ ಸದ್ಯ ಕಸ್ಟಡಿಯಲ್ಲಿದೆ. ಆದರೆ ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆರೋಪಿ ಎ1 ಪವಿತ್ರಾ ಗೌಡ ನಿನ್ನೆ ಅಸ್ವಸ್ಥರಾಗಿದ್ದರು. ಹೀಗಾಗಿ ವೈದ್ಯರು ಅನ್ನಪೂರ್ಣೇಶ್ವರಿ ನಗರದ ಠಾಣೆಗೆ ಬಂದು ಚಿಕಿತ್ಸೆ ನೀಡಿ ವಾಪಸ್ ಆಗಿದ್ದರು.
/newsfirstlive-kannada/media/post_attachments/wp-content/uploads/2024/06/Pavithra-Gowda-Darshan.jpg)
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ.. ಪೊಲೀಸರ​ ಮುಂದೆ ದರ್ಶನ್​ ಕೊನೆಗೂ ಬಾಯ್ಬಿಟ್ರು ಈ ಸತ್ಯ!
ಆದರೆ ಮತ್ತೆ ಪವಿತ್ರಾ ಗೌಡ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಕೆಯನ್ನ ಪೊಲೀಸರು, ವೈದ್ಯರೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಕೊಡಿಸಿ ಪುನಃ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಅವರು ಆರೋಗ್ಯವಾಗಿ ಇದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us