ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ

author-image
AS Harshith
Updated On
ಚಾಪೆ ಮೇಲೆ ನಿದ್ದೆ, ಸೊಳ್ಳೆ ಕಾಟದಿಂದ ಪರದಾಟ.. ಜೈಲಲ್ಲಿ ಪವಿತ್ರಾ ಗೌಡಗೆ ಕರಾಳ ರಾತ್ರಿ
Advertisment
  • A1 ಆರೋಪಿ ಪವಿತ್ರಾ ಗೌಡಗೆ ಮೈಗೆ ಹಿಡಿಸದ ಜೈಲೂಟ
  • ಚಾಪೆಯಲ್ಲಿ ನಿದ್ರಿಸಲಾಗದೆ ಚಡಪಡಿಸುತ್ತಿರುವ ಪವಿತ್ರಾ ಗೌಡ
  • ಇಂದು ಬೆಳಗ್ಗೆ ಬೇಗ ಎದ್ದು ಪವಿತ್ರಾ ಗೌಡ ಏನು ಮಾಡಿದ್ರು ಗೊತ್ತಾ?

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ A1 ಆರೋಪಿಯಾಗಿದ್ದಾರೆ. ಕೊಲೆ ಕೇಸ್​ಗೆ ಸಂಬಂಧಿಸಿ ಜೈಲು ಸೇರಿರುವ ನಟಿ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸದ್ಯ ಪವಿತ್ರಾಗೆ ಜೈಲೂಟ ಮೈಗೆ ಹಿಡಿಸುತ್ತಿಲ್ಲವಂತೆ.

ಒಗ್ಗದ ಜೈಲೂಟ

ಪವಿತ್ರಾ ಗೌಡ ರಾತ್ರಿ ನೀಡಿದ ಮುದ್ದೆ, ಅನ್ನ, ಚಪಾತಿ, ತರಕಾರಿ ಸಾಂಬಾರ್ ಮತ್ತು ಮಜ್ಜಿಗೆಯನ್ನ ಒಲ್ಲದ ಮನಸ್ಸಿನಿಂದ ಸೇವಿಸಿದ್ದಾರೆ. ಪ್ರತಿದಿನ ಬೇಕಾದ ಆಹಾರ ಸೇವಿಸುತ್ತಿದ್ದ ಪವಿತ್ರಾ ಗೌಡ ಜೈಲೂಟದಿಂದ ಬೇಸತ್ತಿದ್ದಾರೆ.

publive-image

ಸೊಳ್ಳೆಕಾಟಕ್ಕೆ ಬೇಸತ್ತ ನಟಿ 

ಐಷಾರಾಮಿ ಜೀವನ ನಡೆಸಿದ್ದ ಪವಿತ್ರಾ ಗೌಡಗೆ ಜೈಲುವಾಸ ನರಕವಾಗಿದೆ. ಚಾಪೆಯಲ್ಲೂ ನಿದ್ರಿಸಲಾಗದೆ ನಟಿ ಚಡಪಡಿಸುತ್ತಿದ್ದಾರಂತೆ. ಮಾತ್ರವಲ್ಲದೆ, ಸೊಳ್ಳೆಗಳ ಕಾಟದಿಂದ ಮತ್ತಷ್ಟು ಬೇಸತ್ತಿದ್ದಾರಂತೆ.

publive-image

ಇನ್ನು ಪವಿತ್ರಾ ಗೌಡ ಸಹಖೈದಿಗಳ ಜೊತೆ ಸಹ ಬೇರೆಯದೆ ಮೌನಕ್ಕೆ ಶರಣಾಗಿದ್ದಾರೆ. ರಾತ್ರಿ ಬೇಗ ಮಲಗಿದರು ಪದೇ ಪದೇ ಎಚ್ಚರಗೊಳ್ಳುತ್ತಿದ್ದಾರಂತೆ.

ಬೆಳಗ್ಗೆ ಬೇಗ ಎದ್ದು ಏನು ಮಾಡಿದ್ರು?

ಇಂದು ಮುಂಜಾನೆ ಬೇಗ ಎದ್ದು ಕಾಫಿ ಕುಡಿದ ಪವಿತ್ರಾ ಗೌಡ ಬಳಿಕ ಪೇಪರ್ ‌ಓದಿದ್ದಾರೆ. ಸದ್ಯ ಜೈಲು ಶಿಕ್ಷೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment