Advertisment

ರೇಣುಕಾಸ್ವಾಮಿ ಪ್ರಕರಣ.. ಕಾಣದ ಕೈಗಳ ಕುತಂತ್ರ ಎಂದಿದ್ದೇಕೆ ಪವಿತ್ರಾಗೌಡ.. ಪೋಸ್ಟ್ ಹಿಂದಿನ ಕಾರಣವೇನು?

author-image
Gopal Kulkarni
Updated On
ರೇಣುಕಾಸ್ವಾಮಿ ಪ್ರಕರಣ.. ಕಾಣದ ಕೈಗಳ ಕುತಂತ್ರ ಎಂದಿದ್ದೇಕೆ ಪವಿತ್ರಾಗೌಡ.. ಪೋಸ್ಟ್ ಹಿಂದಿನ ಕಾರಣವೇನು?
Advertisment
  • ‘ಕಾಣದ ಕೈಗಳಿಂದ ಕುತಂತ್ರ’.. ಪವಿತ್ರಾ ಗೌಡ ಪೋಸ್ಟ್​​
  • ಭಗವದ್ಗೀತೆ ಸಂದೇಶ ಹಾಕಿ ಪವಿತ್ರಾ ಗೌಡ ವಾರ್ನಿಂಗ್​?
  • ಗನ್​ ಲೈಸೆನ್ಸ್​​​ ರದ್ದು ಪ್ರಶ್ನಿಸಿ ದರ್ಶನ್​ ಅರ್ಜಿ ಸಲ್ಲಿಕೆ

ಪವಿತ್ರಾ ಗೌಡ, ರೇಣುಕಾಸ್ವಾಮಿ ಪ್ರಕರಣದ ಮೇನ್​ ಕ್ಯಾರೆಕ್ಟರ್​, 6 ತಿಂಗಳು ಜೈಲು ವನವಾಸ ಅನುಭವಿಸಿ ಜಾಮೀನಿನ ಮೇಲೆ ರಿಲೀಸ್​​ ಆಗಿದ್ದಾರೆ. ಜೊತೆಗೆ ಕೋರ್ಟ್​ನಿಂದ ಅನುಮತಿ ಪಡೆದು ಹೊರ ರಾಜ್ಯಗಳಿಗೂ ಪ್ರಯಾಣಿಸ್ತಿದ್ದು.. ಟೆಂಪಲ್​ ರನ್​​​ ಶುರು ಮಾಡಿದ್ದಾರೆ. ಜೈಲಿನಿಂದ ಬಂದ ಬಳಿಕ ಸೈಲೆಂಟ್​ ಆಗಿದ್ದ ಪವಿತ್ರಾಗೌಡ.. ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡತೊಡಗಿದ್ದಾರೆ. ಅದರಲ್ಲೂ ಅರ್ಜುನನಿಗೆ ಕೃಷ್ಣ ಹೇಳುವ ಭಗವದ್ಗೀತೆಯ ಸಂದೇಶವನ್ನು ಉಲ್ಲೇಖಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

Advertisment

publive-image

‘ಕಾಣದ ಕೈಗಳಿಂದ ಕುತಂತ್ರ’.. ಪವಿತ್ರಾ ಗೌಡ ಪೋಸ್ಟ್​​
ಜೈಲಿನಿಂದ ರಿಲೀಸ್​​ ಆಗಿರುವ ಪವಿತ್ರಾ ಮೊದಲಿನ ಹಾಗೇ ಸೋಶಿಯಲ್​ ಮೀಡಿಯಾದಲ್ಲಿ ಅಷ್ಟಾಗಿ ಆ್ಯಕ್ಟೀವ್​​ ಇಲ್ಲ.. ಹೀಗಿದ್ದರೂ ಕೂಡಾ ಪವಿತ್ರಾ ಗೌಡ ಆಗಾಗ ಫೋಟೋ ಅಥವಾ ಸ್ಟೋರಿ ವಿಡಿಯೋಗಳನ್ನು ಶೇರ್​ ಮಾಡ್ತಿರ್ತಾರೆ. ಇದೀಗ ಪವಿತ್ರಾ ಗೌಡ ತಮ್ಮ ಇನ್​ಸ್ಟಾ ಖಾತೆಯಲ್ಲಿ, ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು ನಿಮ್ಮ ಕಣ್ಣೀರಿನ ಎಲ್ಲಾ ಹನಿಗಳಿಗೆ ನ್ಯಾಯ ನೀಡುವನು" ಎಂದು ಬರೆದಿರುವ ಫೋಟೋವನ್ನು ಪೋಸ್ಟ್​​ ಮಾಡಿದ್ದಾರೆ.

ಭಗವದ್ಗೀತೆ ಸಂದೇಶ ಹಾಕಿ ಪವಿತ್ರಾ ಗೌಡ ವಾರ್ನಿಂಗ್​?
ಸದ್ಯ, ಪವಿತ್ರಾ ಗೌಡ ಪೋಸ್ಟ್​​​​ ವೈರಲ್​ ಆಗ್ತಿದೆ.. ಹಾಗೇ ಸಾಕಷ್ಟು ಕೂತುಹಲ ಮೂಡಿಸ್ತಿದ್ದು, ಭಗವದ್ಗೀತೆ ಸಂದೇಶ ಹಾಕಿ ಪವಿತ್ರಾ ಗೌಡ ವಾರ್ನಿಂಗ್​ ಕೊಟ್ರಾ ಅಥವಾ ತಮ್ಮ ತಪ್ಪಿನ ಅರಿವಾಗಿ ಈ ರೀತಿ ಪೋಸ್ಟ್​ ಹಾಕಿದ್ದಾರೆ ಎಂಬ ಚರ್ಚೆ ಕೂಡ ಶುರುವಾಗಿದೆ.

publive-image

ಗನ್​ಗಾಗಿ ನಟ ದರ್ಶನ್​ ಕಾನೂನು ಹೋರಾಟ
ಕೊಲೆ ಆರೋಪಿ ನಟ ದರ್ಶನ್​​​​ ತಮ್ಮ ಗನ್​ಗಾಗಿ ಕಾನೂನು ಹೋರಾಟ ಮುಂದುವರಿಸಿದ್ದಾರೆ.. ಇತ್ತೀಚಿಗಷ್ಟೇ ಆರ್​ ಆರ್​ ನಗರ ಪೊಲೀಸ್ರು, ದರ್ಶನ್​​ ಗನ್​​ನ ವಶಪಡಿಸಿಕೊಂಡು, ಗನ್​ ಲೈಸೆನ್ಸ್​​ ರದ್ದು ಪಡಿಸಿದ್ರು. ಇದೀಗ ನಟ ದರ್ಶನ್​​​ ಲೈಸೆನ್ಸ್​​​ ರದ್ದು ಪ್ರಶ್ನಿಸಿ ​ಹೈಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.

Advertisment

ನಟ ದರ್ಶನ್​ ಇತ್ತೀಚಿಗಷ್ಟೇ, ನಾನೊಬ್ಬ ನಟನಾಗಿರೋದ್ರಿಂದ ನನಗೆ ಗನ್ ಅವಶ್ಯಕತೆ ತುಂಬಾ ಇದೆ.. ನಾನು ಹೋದ ಕಡೆ.. ಬಂದ ಕಡೆ ಸಾಕಷ್ಟು ಜನ ಸೇರಿರ್ತಾರೆ.. ನನ್ನ ಆತ್ಮ ರಕ್ಷಣೆಗಾಗಿ ಗನ್ ಬೇಕು ಅಂತ ಪೊಲೀಸರಿಗೆ ಮನವಿ ಮಾಡಿದ್ರು. ಆದ್ರೆ ದರ್ಶನ್ ಕೊಟ್ಟ ಕಾರಣಗಳನ್ನ ಪರಿಗಣಿಸದ ಪೊಲೀಸರು, ಕೊಲೆ ಕೇಸ್​ನಲ್ಲಿ ಎ2 ಆಗಿರುವ ದರ್ಶನ್​, ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ.. ಆರೋಪ ಮುಕ್ತವಾಗೋವರೆಗೂ ಗನ್ ಬಳಸುವಂತಿಲ್ಲ ಎಂದು ದರ್ಶನ್​ ಬಳಿಯಿದ್ದ ಎರಡು ಗನ್​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ರು..

ಸದ್ಯ, ಗನ್​​ ಲೆಸೆನ್ಸ್​​​ ರದ್ದು ಪ್ರಶ್ನಿಸಿ ದರ್ಶನ್​ ಕೋರ್ಟ್​ ಮೆಟ್ಟಿಲೇರಿದ್ದು, ದರ್ಶನ್​​​ ಅರ್ಜಿ ವಿಚಾರಣೆ ಆಗುತ್ತೋ ಇಲ್ವೋ ಅನ್ನೋದನ್ನ ಕಾದು ನೋಡಬೇಕಿದೆ. ಮತ್ತೊಂದೆಡೆ ಪವಿತ್ರಾಗೌಡ ಭಗವದ್ಗೀತೆಯ ಸಂದೇಶದ ಮೂಲಕ ಯಾರಿಗೆ ವಾರ್ನಿಂಗ್​ ಕೊಟ್ಟಿದ್ದಾರೆ ಅನ್ನೋದನ್ನ ಕಾಲವೇ ಉತ್ತರಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment