ಇಷ್ಟೆಲ್ಲಾ ಆಗಿದ್ದು ನನ್ನಿಂದ.. ಪೊಲೀಸ್​​ ಕಸ್ಟಡಿಯಲ್ಲಿ ಪಶ್ಚಾತ್ತಾಪ ಪಡುತ್ತಿರುವ ಪವಿತ್ರಾ

author-image
Bheemappa
Updated On
ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?
Advertisment
  • ಕೊಲೆ, ತನಿಖೆಯ ಬಳಿಕ ನಟಿ ಪವಿತ್ರಾ ಗೌಡಗೆ ಪಶ್ಚಾತ್ತಾಪ
  • ಇಷ್ಟೆಲ್ಲಾ ಆಗಿದ್ದು ತನ್ನಿಂದ ಎಂದು ಪಶ್ಚಾತ್ತಾಪ ಪಡುತ್ತಿರೋ ನಟಿ
  • ಈ ಮೆಸೇಜ್ ವಿಚಾರ ಬೇರೆಯವರ ಕಿವಿಗೆ ಬೀಳಬಾರದಿತ್ತು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಹಾಗೂ ಗ್ಯಾಂಗ್​ ಅರೆಸ್ಟ್​ ಆಗಿದ್ದಾರೆ. ಸದ್ಯ ತನಿಖೆ ಚುರುಕಾಗಿ ಮುಂದುವರೆಯುತ್ತಿದೆ. ಇಂದು ಸ್ಥಳ ಮಹಜರಿಗಾಗಿ ಕೊಲೆ ಆರೋಪಿಗಳ ಟೀಂ ಚಿತ್ರದುರ್ಗಕ್ಕೆ ತೆರಳಲಿದ್ದಾರೆ. ಆದರೀಗ ಇಷ್ಟೆಲ್ಲಾ ಅವಾಂತರ ಬೆಳಕಿಗೆ ಬಂದ ನಂತರ ನಟಿ ಪವಿತ್ರಾ ಗೌಡ ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಇಷ್ಟೆಲ್ಲಾ ಆಗಿದ್ದು ತನ್ನಿಂದ ಎಂದು ಅಳಲುತೋಡಿಕೊಳ್ಳುತ್ತಿದ್ದಾರೆ.  

publive-image

ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ವಿಚಾರ ದರ್ಶನ್ ಗೆ ಗೊತ್ತಾಗಬಾರದಿತ್ತು. ಈ ಮೆಸೇಜ್ ವಿಚಾರ ಬೇರೆಯವರ ಕಿವಿಗೆ ಬೀಳಬಾರದಿತ್ತು. ನಾನೇ ಪೊಲೀಸರಿಗೆ ದೂರು ನೀಡಿ ಸರಿಪಡಿಸಿಕೊಳ್ಳಬೇಕಿತ್ತು. ಈ ವಿಚಾರ ಗೊತ್ತಾಗಿ ಇಷ್ಟೆಲ್ಲ ಅನಾಹುತ ನಡೆದುಹೋಯ್ತು. ಇಲ್ಲ ಅಂದಿದ್ರೆ ನಾವು ಈಗ ಆರಾಮಾಗಿರಬಹುದಿತ್ತು. ಕೊಲೆ ಹಂತಕ್ಕೆ ಈ ವಿಚಾರ ಹೋಗ್ತಾ ಇರಲಿಲ್ಲ ಎಂದು ಪವಿತ್ರ ಗೌಡ ಪೊಲೀಸ್ ಕಸ್ಟಡಿಯಲ್ಲಿ ಘಟನೆ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿ! ಹಣದ ವ್ಯವಹಾರ ನೋಡಿಕೊಂಡಿದ್ದೇ ಆತ

publive-image

ಮೃತದೇಹ ವಿಲೇವಾರಿಗೆ ಲಕ್ಷ ಲಕ್ಷ ಡೀಲ್

ಕೊಲೆ ನಡೆದ ಬಳಿಕ ನಟ ದರ್ಶನ್ ನಿಂದ 30 ಲಕ್ಷ ಹಣ ಪಡೆಯಲಾಗಿತ್ತು. ಪ್ರದೋಶ್, ಮತ್ತು ದೀಪಕ್ ಹಣದ ವ್ಯವಹಾರವನ್ನು ನೋಡಿಕೊಂಡಿದ್ರು. ದೀಪಕ್ ಎಂಬಾತ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರ ಹತ್ತಿರದ ಸಂಬಂಧಿಯಾಗಿದ್ದು, ಇನ್ನು ಉಳಿದಂತೆ ಕೋರ್ಟ್ ಬೇಲ್ ಆಗುವವರೆಗೂ ಖರ್ಚು ವೆಚ್ಚ ನೋಡಿಕೊಂಡು ಕುಟುಂಬಕ್ಕೂ ಹಣ ನೀಡೋದಾಗಿ ತಿಳಿಸಿದ್ದರಂತೆ.

publive-image

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆಯ ತನಿಖೆ ಮತ್ತಷ್ಟು ಚುರುಕು.. ಇಂದು ಚಿತ್ರದುರ್ಗದತ್ತ ದರ್ಶನ್​ ಮತ್ತು ಗ್ಯಾಂಗ್​.. ಅಪ್ಡೇಟ್ಸ್ ಹೀಗಿದೆ

A13 ದೀಪಕ್ ನಿಂದ ನಿಖಿಲ್ ಕಾರ್ತಿಕ್, ಕೇಶವಮೂರ್ತಿಗೆ ತಲಾ ಐದು ಲಕ್ಷ ಹಣ ನೀಡಲಾಗಿತ್ತು. ಸದ್ಯ ಆರೋಪಿಗಳು ಹಣ ಪಡೆದಿರುವ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿದ್ದಾರೆ. ಹೀಗಾಗಿ ಆರೋಪಿಗಳು ಪಡೆದುಕೊಂಡಿರುವ ತಲಾ ಐದು ಲಕ್ಷ ಹಣವನ್ನು ಜಫ್ತಿ ಮಾಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment