newsfirstkannada.com

ನಟ ದರ್ಶನ್ ಅಂಡ್ ಗ್ಯಾಂಗ್ ಕೋರ್ಟ್‌ಗೆ ಹಾಜರು.. ಜಡ್ಜ್ ಕೇಳಿದ ಪ್ರಶ್ನೆಗೆ ಪವಿತ್ರಾ ಗೌಡ ಕಣ್ಣೀರು

Share :

Published June 15, 2024 at 5:02pm

Update June 15, 2024 at 5:04pm

  ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು

  ದರ್ಶನ್‌ಗೆ ಪೊಲೀಸ್‌ ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದು ಕೇಳಿದ ಜಡ್ಜ್‌

  ನ್ಯಾಯಾಧೀಶರು ಪ್ರಶ್ನೆ ಕೇಳುವಾಗ ಕಣ್ಣೀರು ಹಾಕಿದ A1 ಪವಿತ್ರಾ ಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಮತ್ತವರ ಗ್ಯಾಂಗ್‌ ಅನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ದರ್ಶನ್​ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?

ಬಿಗಿ ಭದ್ರತೆಯಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿ ಎಲ್ಲಾ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಸರ್ಕಾರದ ಪರ SPP ಪ್ರಸನ್ನ ಕುಮಾರ್ ಹಾಜರಾಗಿದ್ದು, ಆರೋಪಿಗಳ ಪರ ವಕೀಲರಾದ ಪ್ರವೀಣ್ ತಿಮ್ಮಯ್ಯ, ನಾರಾಯಣಸ್ವಾಮಿ ಸೇರಿ ಅನೇಕರು ಹಾಜರಾಗಿದ್ದಾರೆ.

ಕೋರ್ಟ್‌ಗೆ ಆರೋಪಿಗಳು ಹಾಜರಾದ ಮೇಲೆ ಜಡ್ಜ್ ಮೊದಲಿಗೆ ನಟ ದರ್ಶನ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದು ಕೇಳಿದ್ದಕ್ಕೆ ದರ್ಶನ್ ಅವರು ಇಲ್ಲ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ? 

ಇದೇ ವೇಳೆ ಪವಿತ್ರಾ ಗೌಡ ಅವರಿಗೂ ಕಸ್ಟಡಿಯಲ್ಲಿ ನಿಮಗೆ ತೊಂದರೆ ಏನಾದರೂ ಆಯ್ತಾ ಎಂದು ಕೇಳಿದ್ದಾರೆ. ಆಗ ಪವಿತ್ರಾ ಅವರು ಅಂತಹದ್ದು ಏನು ಇಲ್ಲ ಎಂದು ಉತ್ತರಿಸಿದ್ದಾರೆ. ನ್ಯಾಯಾಧೀಶರು ಪ್ರಶ್ನೆ ಕೇಳುವಾಗ ಪವಿತ್ರಾ ಗೌಡ ಅವರು ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಅಂಡ್ ಗ್ಯಾಂಗ್ ಕೋರ್ಟ್‌ಗೆ ಹಾಜರು.. ಜಡ್ಜ್ ಕೇಳಿದ ಪ್ರಶ್ನೆಗೆ ಪವಿತ್ರಾ ಗೌಡ ಕಣ್ಣೀರು

https://newsfirstlive.com/wp-content/uploads/2024/06/darshan23.jpg

Load More