ದರ್ಶನ್ ಹೆಸರಲ್ಲಿ ಅರ್ಚನೆ.. ಜೈಲಿಂದ ಮನೆಗೆ ಹೋಗೋ ಮುಂಚೆಯೇ ಹರಕೆ ತೀರಿಸಿದ್ದೇಕೆ ಪವಿತ್ರಾ ಗೌಡ?

author-image
admin
Updated On
ದರ್ಶನ್‌ಗೆ ಸುಪ್ರೀಂಕೋರ್ಟ್‌ ಸಂಕಷ್ಟಕ್ಕಿಂತ ತುಂಬಾ ಅಪಾಯಕಾರಿ ಈ ಮಾಫಿ ಸಾಕ್ಷಿ; ಏನಿದು? ಮುಂದೇನಾಗುತ್ತೆ?
Advertisment
  • ವಜ್ರ ಮುನೇಶ್ವರ ದೇವಾಲಯದಲ್ಲಿ ಹರಕೆ ತೀರಿಸಿದ ಪವಿತ್ರಾ ಗೌಡ
  • ಅರ್ಚನೆಗೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಸೇರಿಸಿದ ತಾಯಿ
  • 6 ತಿಂಗಳ ಜೈಲು ವಾಸದ ಬಳಿಕ ಬಿಡುಗಡೆಯಾದ ಪವಿತ್ರಾಗೆ ನಿಟ್ಟುಸಿರು

ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟಿ ಪವಿತ್ರಾ ಗೌಡ ಅವರಿಗೆ ಇಂದು ಬಂಧನದಿಂದ ಮುಕ್ತಿ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಪವಿತ್ರಾ ಗೌಡ ಅವರು ಸೀದಾ ಮನೆಗೆ ತೆರಳದೇ ವಜ್ರ ಮುನೇಶ್ವರ ದೇವಸ್ಥಾನದಲ್ಲಿ ನಟ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ.

ಕನಕಪುರ ರಸ್ತೆಯ ತಲಘಟ್ಟಪುರದಲ್ಲಿರುವ ವಜ್ರ ಮುನೇಶ್ವರ ದೇವಸ್ಥಾನಕ್ಕೆ ತೆರಳಿದ ಪವಿತ್ರಾ ಗೌಡ ಅವರು ತೀರ್ಥಸ್ನಾನ ಮಾಡಿದರು. ದೇವರಿಗೆ ಹೂವು, ಕಾಯಿ, ಆಗರಬತ್ತಿ, ನಿಂಬೆಹಣ್ಣು ಸಮೇತ ವಿಶೇಷ ಪೂಜೆ ಮಾಡಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗ್ತಿದ್ದಂತೆ ಪ್ರದೂಷ್​ ಹೇಳಿದ್ದೇನು..? 

ಪವಿತ್ರಾ ಗೌಡ ಅವರು ವಜ್ರಮುನೇಶ್ವರ ದೇವಾಲಯದಲ್ಲಿ ಕುಟುಂಬದ ಹೆಸರಲ್ಲಿ ಅರ್ಚನೆ ಮಾಡಿಸಿದರು. ಈ ವೇಳೆ ಕೊನೆಯಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಪವಿತ್ರಾ ತಾಯಿ ಭಾಗ್ಯಮ್ಮನವರು ಪೂಜಾರಿಗಳಿಗೆ ಹೇಳಿದರು. ಹೀಗಾಗಿ ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಲಾಗಿದೆ.

publive-image

ಹರಕೆ ತೀರಿಸಿದ ಭಾಗ್ಯಮ್ಮ!
ರೇಣುಕಾಸ್ವಾಮಿ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಅವರು ಇನ್ನೂ BGS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದರೆ ಜೈಲಿನಿಂದ ರಿಲೀಸ್ ಆದ ಪವಿತ್ರಾ ಗೌಡ ಅವರು ದರ್ಶನ್ ಹೆಸರಲ್ಲಿ ಅರ್ಚನೆ ಮಾಡಿಸಿ ದೇವರಲ್ಲಿ ಬೇಡಿಕೊಂಡಿದ್ದಾರೆ. ಪವಿತ್ರಾ ಗೌಡ ಅವರ ಮುಖದಲ್ಲಿ ಈಗ ನೆಮ್ಮದಿ, ನಗು ಖುಷಿ ಮೂಡಿದೆ.

publive-image

ವಜ್ರಮುನೇಶ್ವರ ಪವಿತ್ರಾಗೌಡ ಅವರ ತಾಯಿ ಭಾಗ್ಯಮ್ಮ ಅವರ ಮನೆ ದೇವರು ಆಗಿದೆ. ಹೀಗಾಗಿ ವಜ್ರ ಮುನೇಶ್ವರನ ಮೇಲೆ ಪವಿತ್ರಾ ತಾಯಿಗೆ ವಿಶೇಷ ನಂಬಿಕೆ. ಭಾಗ್ಯಮ್ಮನವರು ಸಂಕಟ ಬಂದಾಗ ಸಮಸ್ಯೆ ನಿವಾರಣೆಗೆ ಸದಾ ವಜ್ರ ಮುನೆಶ್ವರನ ಮೊರೆ ಹೋಗ್ತಿದ್ದರು. ಈ ಹಿಂದೆ ಕಣ್ಣಿನ ಸಮಸ್ಯೆ ಆದಾಗ ಕೂಡ ಪಾದಯಾತ್ರೆ ಮಾಡುವ ಹರಕೆ ಹೊತ್ತಿದ್ರಂತೆ. ಮಗಳು ಸೆರೆಮನೆ ವಾಸ ಮಾಡುವಾಗಲೂ ಮುನೇಶ್ವರ ದೇವರಿಗೆ ಭಾಗ್ಯಮ್ಮ ಹರಕೆ ಮಾಡಿಕೊಂಡಿದ್ದರು. ಮಗಳಿಗೆ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆಯಲ್ಲಿ ಮನೆಗೆ ಕರೆದು ಕೊಂಡು ಬರೋ ಮುಂಚೆಯೇ ಮಗಳ ಕೈಲಿ ಆ ಹರಕೆ ತೀರಿಸಿದ್ದಾರೆ.

ಪವಿತ್ರಾ ಗೌಡ ಜೈಲಿನಿಂದ ರಿಲೀಸ್ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಖುಷಿ ದುಪ್ಪಟ್ಟು ಆಗಿದೆ. 6 ತಿಂಗಳ ಬಳಿಕ ಜೈಲಿನಿಂದ ಪವಿತ್ರಾ ಗೌಡ ಬರುತ್ತಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಏರ್ಪಟ್ಟಿದೆ. ಇಂದು ಮನೆ ದೇವರ ಎಲ್ಲ ಕಾರ್ಯಗಳನ್ನು ಮುಗಿಸಿದ ಬಳಿಕ ತಮ್ಮ ನಿವಾಸದ ಕಡೆಗೆ ತೆರಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment