ನಿದ್ದೆ ಬರ್ತಿಲ್ಲ ನಂಗೆ.. ಜೈಲಿನಲ್ಲಿ ಗಳಗಳನೇ ಕಣ್ಣೀರಿಟ್ಟ ಪವಿತ್ರಾ ಗೌಡ; ದರ್ಶನ್‌ಗೆ ಪತ್ನಿಯೇ ಧೈರ್ಯಲಕ್ಷ್ಮಿ; ಆಗಿದ್ದೇನು?

author-image
Veena Gangani
Updated On
ಪದೇ ಪದೇ ಸಿಗರೇಟ್‌ ಕೇಳಿದ್ದಕ್ಕೆ ದರ್ಶನ್‌ಗೆ ವಾರ್ನಿಂಗ್‌; ಕೊನೆಗೂ ಅಶ್ಲೀಲ ಮೆಸೇಜ್ ಸೀಕ್ರೆಟ್‌ ರಿವೀಲ್‌!
Advertisment
  • ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟ ನಟ ದರ್ಶನ್ ಪರ ವಕೀಲ
  • ಜೈಲಿನಲ್ಲಿದ್ದ ಮಗಳು ಪವಿತ್ರಾ ಗೌಡ ಭೇಟಿಯಾದ ಕುಟುಂಬಸ್ಥರು
  • ರೇಣುಕಾ ಕೊಲೆ ಕೇಸ್​​ನಲ್ಲಿ A2 ಆರೋಪಿಯಾಗಿರುವ ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಆಗ್ರಹಾರ ಜೈಲು ಪಾಲಾಗಿರೋ ನಟ ದರ್ಶನ್​​ ಇನ್ನೂ ಜಾಮೀನಿಗೆ ಅರ್ಜಿ ಹಾಕಿಲ್ಲ. ಇವತ್ತು ದರ್ಶನ್‌​ ನೋಡಲು ಕುಟುಂಬಸ್ಥರು ಜೈಲಿಗೆ ಭೇಟಿ ನೀಡಿದ್ರು. ದರ್ಶನ್​​ ಸಹೋದರ ದಿನಕರ್​ ಜೈಲಿಗೆ ಆಗಮಿಸಿ ಆಣ್ಣನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು, ಅತ್ತ ದರ್ಶನ್​ ಪರ ವಕೀಲ ದರ್ಶನ್​ ಬಿಡುಗಡೆಗಾಗಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಮೊರೆ ಹೋಗಿದ್ದಾರೆ.

publive-image

ಇದನ್ನೂ ಓದಿ: ​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌

ಕೊಲೆ ಕೇಸ್​​ನಲ್ಲಿ A2 ಆರೋಪಿಯಾಗಿರುವ ದರ್ಶನ್​ರನ್ನ ಹೊರ ತರಲು ಪತ್ನಿ ವಿಜಯಲಕ್ಷ್ಮೀ ತಮ್ಮ ಹೋರಾಟವನ್ನ ಮುಂದುವರಿಸಿದ್ದಾರೆ. ದರ್ಶನ್ ಭೇಟಿಗೆ ಯಾವಾಗ ಅವಕಾಶ ಸಿಗುತ್ತೋ ಅಂತ ಭಕಪಕ್ಷಿಯಂತೆ ಕಾಯೋ ವಿಜಯಲಕ್ಷ್ಮಿ, ದರ್ಶನ್​ರನ್ನು ನೋಡಲು ಜೈಲಿನತ್ತ ಓಡೋಡಿ ಬರ್ತಿದ್ದಾರೆ. ಈ ಬಾರಿ, ವಿಜಯಲಕ್ಷ್ಮಿ ಜೊತೆ ದರ್ಶನ್ ಸಹೋದರ ದಿನಕರ್ ತೂಗುದೀಪ ಅಣ್ಣನನ್ನು ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದು, ಜೈಲಿನಲ್ಲಿರುವ ಅಣ್ಣನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

publive-image

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದುವರಿದಿದ್ದು, ದರ್ಶನ್​ ಪರ ವಕೀಲ ಧರ್ಮಸ್ಥಳ ಶ್ರೀ ಮಂಜುನಾಥನ ಮೊರೆ ಹೋಗಿದ್ದಾರೆ. ನಿನ್ನೆ ಧರ್ಮಸ್ಥಳಕ್ಕೆ ದರ್ಶನ್​​ ಪರ ವಕೀಲ ನಾರಾಯಣ ಸ್ವಾಮಿ ಮತ್ತು ತಂಡ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಿಡುಗಡೆಗೆ ದಾರಿ ತೋರಿಸು ಅಂತ ಬೇಡಿಕೊಂಡಿದ್ದಾರೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸ್ನೇಹಿತೆ ಸಮತಾಳನ್ನ ಮತ್ತೆ ವಿಚಾರಣೆ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೆ ಎಲೆಕ್ಟ್ರಿಕ್ ಶಾಕ್ ಡಿವೈಸ್ ಬಳಸಿದ್ದರು ಎನ್ನಲಾಗ್ತಿದೆ. ಈ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿಗೆ ಸಮತಾ ಹಣ ನೀಡಿದ್ದರು ಎಂದು ತಿಳಿದು ಬಂದಿದ್ದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಮತಾಗೆ ಪೊಲೀಸರು ನೋಟಿಸ್​​ ನೀಡಿ ಎರಡನೇ ಬಾರಿ ವಿಚಾರಣೆ ನಡೆಸಿದ್ದಾರೆ.

publive-image

ಇನ್ನು, ಜೈಲಿನಲ್ಲಿರುವ ಪವಿತ್ರಾ ಗೌಡ ತಂದೆ ತಾಯಿ ಹಾಗೂ ಸಂಬಂಧಿಕರು ಕೂಡ ಜೈಲಿಗೆ ಭೇಟಿ ನೀಡಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಪೊಲೀಸ್​ ಕಸ್ಟಡಿಯಲ್ಲಿರುವ ಪವಿತ್ರಾ ಗೌಡ ಆರೋಗ್ಯ ಹದಗೆಟ್ಟಿದ್ದು, ಮಗಳ ಆರೋಗ್ಯದ ಬಗ್ಗೆ ತಂದೆ ತಾಯಿ ಮಾಹಿತಿ ಪಡೆದಿದ್ದಾರೆ. ಇನ್ನು, ಜೈಲಿಗೆ ಬಂದ ತಾಯಿಯನ್ನು ನೋಡುತ್ತಿದ್ದಂತೆ ಪವಿತ್ರಾ ಕಣ್ಣೀರಿಟ್ಟಿದ್ದಾಳೆ. ಜೈಲೂಟ ಒಗ್ಗುತ್ತಿಲ್ಲ ನಿದ್ರೆ ಬರುತ್ತಿಲ್ಲ ಎಂದು ಗಳಗಳನೆ ಅತ್ತಿದ್ದಾಳೆ. ಒಟ್ಟಾರೆ ಮನೆ ಮಂದಿಯನ್ನ ಭೇಟಿ ಮಾಡಿದ ಬಳಿಕ ನಟ ದರ್ಶನ್ ಸದ್ಯ ಮೊದಲಿದ್ದ ಪರಿಸ್ಥಿತಿಗಿಂತ ಚೆನ್ನಾಗಿದ್ದಾರೆ ಅಂತ ತಿಳಿದು ಬಂದಿದ್ದು, ಮೊದಲಿಗಿಂತ ನಿರಾಳರಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment