/newsfirstlive-kannada/media/post_attachments/wp-content/uploads/2024/06/DARSHAN-23.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರೋ ಮೂರನೇ ಆರೋಪಿ ಪವನ್ ತಾಯಿ ಜಯಲಕ್ಷ್ಮಮ್ಮ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಕಣ್ಣೀರು ಇಟ್ಟಿದ್ದಾರೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಪಿತೂರಿ ಮಾಡಿ ಕೇಸ್ನಲ್ಲಿ ಸಿಕ್ಕಿಸಿ ಹಾಕ್ತಿದ್ದಾರೆ.
ನನ್ನ ಮಗ ತುಂಬಾ ಒಳ್ಳೆಯವನು. ನಾವು ಕೂಡ ಹಸುಗಳನ್ನು ಕಟ್ಟಿಕೊಂಡು ಸಂಸಾರ ಸಾಗಿಸುತ್ತಿದ್ದೇವೆ. ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಕಳೆದ 12 ವರ್ಷಗಳಿಂದ ದರ್ಶನ್ ಜೊತೆಯಲ್ಲಿದ್ದಾನೆ. ದರ್ಶನ್ ಅವರೇ ಅವನನ್ನು ಎಂಕಾಂ ಓದಿಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ.. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಸರಣಿ ಅಪಘಾತ
ತಿಂಗಳಿಗೊಮ್ಮೆ ಊರಿಗೆ ಬಂದು ಹೋಗ್ತಿದ್ದ. ಅವರ ಮನೆಯಲ್ಲೇ ಕೆಲಸ ಮಾಡೊಕೊಂಡು ಇದ್ದ. ನಮ್ಮ ಮಗ ಕೊಲೆ ಮಾಡುವಂತಹ ವ್ಯಕ್ತಿ ಅಲ್ಲ. ನಮ್ಮ ಮಗನ ಬಗ್ಗೆ ನಂಬಿಕೆ ಇದೆ, ಅವನು ಇಂತಹ ಕೆಲಸ ಮಾಡಿಲ್ಲ ಎಂದು ರಾಮನಗರದ ಚನ್ನಪಟ್ಟಣ ತಾಲೂಕಿನ ಅಕ್ಕೂರು ಗ್ರಾಮದಲ್ಲಿ ಪವನ್ ತಾಯಿ ಕಣ್ಣೀರು ಇಡುತ್ತಿದ್ದಾರೆ.
ಇದನ್ನೂ ಓದಿ:‘ಅಲ್ಲಿ ಏನಾಗ್ತಿದೆ ಅನ್ನೋದು ನನಗೆ ಗೊತ್ತೇ ಇಲ್ಲ, ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಮತ್ತೊಂದು ಹೇಳಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ