/newsfirstlive-kannada/media/post_attachments/wp-content/uploads/2025/07/Pawan-Kalyan-Hari-Hara-Veera-Mallu.jpg)
ಇವತ್ತು ಹರಿ ಹರ ವೀರಮಲ್ಲು ಚಿತ್ರ ಬಿಡುಗಡೆಯಾಗ್ತಿದೆ. ಪವನ್ ಕಲ್ಯಾಣ್ ಚಿತ್ರಕ್ಕೆ ಹಾಕಿದ್ದ ಬ್ಯಾನರ್‌ನಲ್ಲಿ ಕನ್ನಡ ಇಲ್ಲ ಅಂತ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಕಿತ್ತು ಹಾಕಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟವಾಡಿದ್ದಾರೆ.
ತೆಲುಗಿನ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಬಹಳ ವರ್ಷಗಳ ಬಳಿಕ ಇವತ್ತು ರಿಲೀಸ್ ಆಗ್ತಿದೆ. ಹರಿ ಹರ ವೀರಮಲ್ಲು.. ಪವನ್ ಕಲ್ಯಾಣ್ ವೃತ್ತಿ ಬದುಕಿನಲ್ಲೇ ವಿಶಿಷ್ಠ ಸಿನಿಮಾ.. ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋಗಾಗಿ ಎದುರು ನೋಡ್ತಿದ್ದಾರೆ. ಬೆಂಗಳೂರಿನ ಮಡಿವಾಳ ಸಮೀಪವಿರುವ ಸಂಧ್ಯಾ ಚಿತ್ರಮಂದಿರಲ್ಲಿ ಹರಿ ಹರ ವೀರಮಲ್ಲು ಸಿನಿಮಾದ ದೊಡ್ಡ ಬ್ಯಾನರ್‌ಗಳನ್ನ ಹಾಕಿದ್ರು. ಒಂದೇ ಒಂದು ಕನ್ನಡದ ಬ್ಯಾನರ್ ಇರಲಿಲ್ಲ. ಈ ಕಾರಣಕ್ಕೆ ಆಕ್ರೋಶಗೊಂಡ ಕನ್ನಡ ಪರ ಸಂಘಟನೆಗಳು ಥಿಯೇಟರ್‌ಗೆ ಮುಗ್ಗಿ ಬ್ಯಾನರ್ ಅನ್ನ ಹರಿದು ಹಾಕಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಮೊದಲು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ.. ಜೈಸ್ವಾಲ್, ಸುದರ್ಶನ್ ಹೋರಾಟಕ್ಕೆ ಬ್ರಿಟಿಷರು ಸುಸ್ತು..!
ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಟ್ಟು ತೆಲುಗು ಬ್ಯಾನರ್‌ಗಳನ್ನು ಕಿತ್ತಾಕಿದ ಬಳಿಕ ಫ್ಯಾನ್ಸ್ ಎಚ್ಚೆತ್ತುಕೊಂಡಿದ್ದಾರೆ. ಸಂಧ್ಯಾ ಚಿತ್ರಮಂದಿರದ ಮುಂದೆ ಕನ್ನಡದ ಬ್ಯಾನರ್‌ಗಳನ್ನು ಹಾಕಲಾಗಿದೆ. ನಿನ್ನೆ ಮಧ್ಯಾಹ್ನ ಇದೆಲ್ಲಾ ಆದ್ರೆ.. ಇದಕ್ಕೆ ಕೌಂಟರ್ ಎನ್ನುವಂತೆ ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟವಾಡಿದ್ದಾರೆ. ಸಂಜೆ ಅಷ್ಟೊತ್ತಿಗಾಗ್ಲೇ ಸಂಧ್ಯಾ ಥಿಯೇಟರ್ ಮುಂದೆ ಡಿಜೆ ಸೌಂಡ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.
ರೂಲ್ಸ್ ಬ್ರೇಕ್ ಮಾಡಿ ಪವನ್ ಕಲ್ಯಾಣ್ ಫ್ಯಾನ್ಸ್ ಸಂಭ್ರಮ
ಇವತ್ತು ಹರಿಹರ ವೀರಮಲ್ಲು ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗ್ತಾ ಇದೆ. ಆಂಧ್ರ, ತೆಲಂಗಾಣ ಸೇರಿ ಬೆಂಗಳೂರಲ್ಲೂ ಪ್ರೀಮಿಯರ್ ಶೋ ಮಾಡಲಾಗ್ತಿದೆ. ನಿನ್ನೆ ಬೆಂಗಳೂರಿನ ಸಂಧ್ಯಾ ಥಿಯೇಟರ್ನಲ್ಲಿ ಸೆಲೆಬ್ರೇಷನ್ ಭಾರೀ ಜೋರಾಗಿತ್ತು. ಡಿಜೆ.. ಸೌಂಡ್ ಸಿಸ್ಟಂ.. ಲೈಟಿಂಗ್ ಹಾಕಬೇಡಿ ಅಂತ ಮಡಿವಾಳ ಪೊಲೀಸರ ಸೂಚನೆ ಇತ್ತು.. ಪೊಲೀಸರ ಆದೇಶಕ್ಕೂ ಮೀರಿ ತೆಲುಗು ಸಿನಿಮಾಗೆ ಡಿಜೆ ಹಾಕಿ ಪವನ್ ಫ್ಯಾನ್ಸ್ ಸಂಭ್ರಮ ಮಾಡಿದ್ದಾರೆ.. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಧಾ, ಕೃಷ್ಣನ ಗೆಟಪ್ನಲ್ಲಿ ಭವ್ಯಾ ಗೌಡ, ಕಿರಣ್ ರಾಜ್… ಕರ್ಣನ ಒಂದೊಂದು ಸೀನ್ಗೂ ವೀಕ್ಷಕರು ಫಿದಾ!
ಥಿಯೇಟರ್ನಲ್ಲಿ ಕಾಲ್ತುಳಿತ.. ಸಾವು.. ನೋವುಗಳನ್ನ ನಾವು ಈಗಾಗ್ಲೇ ನೋಡಿದ್ದೀವಿ.. ಇಷ್ಟು ಜನ ಒಂದೆಡೆ ಸೇರಿ ಡಿಜೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲಿ, ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಯಾರು ಹೊಣೆ ಅನ್ನೋ ಟಾಕ್ ಶುರುವಾಗಿದೆ. ಪರ್ಮಿಷನ್ ಇಲ್ಲದಿದ್ರು ಥಿಯೇಟರ್ ಮುಂದೆ ಡಿಜೆ ಹಾಕಿದ್ದ ಬಗ್ಗೆ ಮಡಿವಾಳ ಪೊಲೀಸರು ಯಾವ ಕ್ರಮ ಕೈಗೊಳ್ತಾರೋ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ