newsfirstkannada.com

VIDEO: ‘ಪವನ್ ಅಲ್ಲ ಇವ್ರು ಬಿರುಗಾಳಿ’- ಪವನ್ ಕಲ್ಯಾಣ್ ಹೊಗಳಿದ ಮೋದಿ; NDA ಸಭೆಯಲ್ಲಿ ಆಗಿದ್ದೇನು?

Share :

Published June 7, 2024 at 9:13pm

    ಮೋದಿಯನ್ನ ಮನಸಾರೆ ಹೊಗಳಿದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು 

    ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ನಿಂದಲೂ ಮೋದಿಗೆ ಬೆಂಬಲ ಘೋಷಣೆ

    ನರೇಂದ್ರ ಮೋದಿಗೆ ಆಡಳಿತದ ‘ಪವರ್’ ಕೊಟ್ಟ ಪವನ್ ಕಲ್ಯಾಣ

ನವದೆಹಲಿ: ಹಳೇ ಸಂಸತ್ ಭವನದ ಮೂಲೆ ಮೂಲೆಯಲ್ಲೂ ಮೋದಿ ಎಂಬ ಉದ್ಘೋಷ. ಮಾತು ಮಾತಿನಲ್ಲಿ ನಮೋ ಬಗ್ಗೆ ಹೊಗಳಿಕೆಯ ಮಂತ್ರಘೋಷ. ಎಲ್ಲಾ ಮಿತ್ರಪಕ್ಷಗಳ ನಾಯಕರಲ್ಲಿ ಕಂಡಿದ್ದು ಮೋದಿ ಮೇಲಿನ ವಿಶ್ವಾಸ.

ನ್ಯಾಶನಲ್ ಡೆಮಾಕ್ರಟಿಕ್‌ ಅಲೆಯನ್ಸ್‌ನ ಒಗ್ಗಟ್ಟು ಲೋಕಸಭೆಯಲ್ಲಿ ಮತ್ತೆ ಪ್ರದರ್ಶನವಾಗಿದೆ. ಮಿತ್ರಪಕ್ಷಗಳ ಮಧ್ಯೆ ಮೋದಿ ದಿ ಲೀಡರ್ ಆಗಿ ಮತ್ತೆ ಹೊರಹೊಮ್ಮಿದ್ದಾರೆ. ಎಲ್ಲಾ ನಾಯಕರು ನರೇಂದ್ರ ಮೋದಿಗೆ ಬಹುಪರಾಕ್ ಹೇಳುತ್ತಾ ಮತ್ತೆ ಪ್ರಧಾನಿ ಹುದ್ದೆಗೆ ಏರಲು ಬೆಂಬಲ ಘೋಷಿಸಿದ್ರು. ಈ ಮೂಲಕ ನಮೋ ತ್ರಿವಿಕ್ರಮನಂತೆ ದೇಶದ ಗದ್ದುಗೆ ಏರೋದು ಖಚಿತವಾಗಿದೆ.

ಎನ್‌ಡಿಎಗೆ ಬೆಂಬಲ ಘೋಷಿಸಿದ ತೆಲುಗು ದೇಶಂ ಪಾರ್ಟಿ
ಮೋದಿಯನ್ನ ಮನಸಾರೆ ಹೊಗಳಿದ ಚಂದ್ರಬಾಬು ನಾಯ್ಡು 
ಇವತ್ತು ಎನ್‌ಡಿಎ ಸಂಸದೀಯ ನಾಯಕನ ಆಯ್ಕೆ ಪ್ರಕ್ರಿಯೆ ನಡೀತು. ಎಲ್ಲಾ ಅಂದುಕೊಂಡಂತೆ ಮೋದಿ ಮತ್ತೊಮ್ಮೆ ಸಂಸದೀಯ ನಾಯಕನಾಗಿ ಹೊರಹೊಮ್ಮಿದ್ದರು. ಎಲ್ಲಾ ಮಿತ್ರಪಕ್ಷಗಳ ನಾಯಕರು ಸರ್ವಾನುಮತದಿಂದ ಮೋದಿಗೆ ಮಣೆ ಹಾಕಿದ್ರು. ಇದೇ ವೇಳೆ ಎನ್‌ಡಿಎ ಮಿತ್ರಕೂಟದಲ್ಲಿ ಕಿಂಗ್‌ ಮೇಕರ್ ಎನಿಸಿಕೊಂಡಿರೋ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ಮೋದಿ ನಾಯಕತ್ವಕ್ಕೆ ಉಘೇ.. ಉಘೇ ಅಂದ್ರು. ಜೊತೆಗೆ ಮೋದಿಯನ್ನ ಮನಸಾರೆ ಹೊಗಳುತ್ತಾ ಮೋದಿಯನ್ನ ಸಂಸದೀಯ ಲೀಡರ್‌ ಆಗಿ ಒಪ್ಪಿಕೊಂಡ್ರು.

ಇಂದು ಭಾರತ ಒಬ್ಬ ಉತ್ತಮ ನಾಯಕನ್ನ ನೋಡ್ತಿದೆ. ಒಳ್ಳೆಯ ಟೈಮ್‌ನಲ್ಲಿ ಅಂದ್ರೆ ಇದು ನರೇಂದ್ರ ಮೋದಿ. ಅವರು (ಎನ್‌ಟಿಆರ್) ಯಾವಾಗಲೂ ಸ್ಪಷ್ಟವಾಗಿ ಹೇಳುತ್ತಿದ್ದರು. ನನಗೆ ಯಾವುದೇ ಇಸಂ ಇಲ್ಲ. ನನಗೆ ಇರೋದು ಒಂದೇ ಇಸಂ ಅದು ಹ್ಯೂಮನಿಸಂ. ಇದು ಎನ್‌ಟಿಆರ್. ಈ ರೀತಿಯ ದೃಷ್ಟಿಕೋನ ಹೊಂದಿರುವವರು ನರೇಂದ್ರ ಮೋದಿ.
ಚಂದ್ರಬಾಬು ನಾಯ್ಡು, ಟಿಡಿಪಿ ಮುಖ್ಯಸ್ಥ 

ಜೆಡಿಎಸ್‌ನಿಂದಲೂ ನರೇಂದ್ರ ಮೋದಿಗೆ ಬೆಂಬಲ ಸೂಚನೆ
ಬಿಜೆಪಿಯ ದೋಸ್ತಿ ಪಕ್ಷ ಜೆಡಿಎಸ್ ಕೂಡ ನರೇಂದ್ರ ಮೋದಿ ನಾಯಕತ್ವಕ್ಕೆ ತಲೆಬಾಗಿದೆ. ಮೋದಿ ಜೊತೆ ಹೆಜ್ಜೆ ಹಾಕೋದಾಗಿ ಹೆಚ್‌.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಜೊತೆ ಮೋದಿಯ 10 ವರ್ಷಗಳ ಸಾಧನೆಯನ್ನ ಕೊಂಡಾಡಿದ್ದಾರೆ.

ಈ ದೇಶಕ್ಕಾಗಿ ಕಳೆದ 10 ವರ್ಷದಿಂದ ನರೇಂದ್ರ ಮೋದಿಯವರು ಸೇವೆ ನೀಡುತ್ತಿದ್ದಾರೆ. ಹೀಗಾಗಿ ನಮ್ಮ ಪಾರ್ಟಿ ಮತ್ತು ನಾನು ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತಿದ್ದೇವೆ.
ಹೆಚ್‌.ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

ಮೋದಿಗೆ ಆಡಳಿತದ ‘ಪವರ್’ ಕೊಟ್ಟ ಪವನ್ ಕಲ್ಯಾಣ!
ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಎನ್‌ಡಿಎ ಭಾಗವಾಗಿರೋ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್ ಮೋದಿಗೆ ಜೈಕಾರ ಹಾಕಿದ್ದಾರೆ. ನಮೋ ನಮ್ಮ ನಾಯಕ ಅಂತ ಒಪ್ಪಿಕೊಂಡಿದ್ದಾರೆ.

ಕಾಶ್ಮೀರದಿಂದ ಕನ್ಯಾಕುಮಾರಿ. ಕಾಮಾಕ್ಯದಿಂದ ದ್ವಾರಕದವರೆಗೂ ನೀವು ಎಲ್ಲರಿಗೂ ಸ್ಫೂರ್ತಿ ಸರ್. ನೀವು ಎಲ್ಲರಿಗೂ ಸ್ಫೂರ್ತಿ. ನಾವೆಲ್ಲರೂ ನಿಮ್ಮ ಹಿಂದೆ ಇರ್ತೀವಿ. ನಾವೆಲ್ಲರೂ ನಿಮ್ಮ ಹಿಂದೆ ಇರ್ತೀವಿ. ನಾನು ಬೆಂಬಲ ನೀಡುತ್ತಿದ್ದೇನೆ. ನರೇಂದ್ರ ಮೋದಿಯವರು ಎನ್‌ಡಿಎ ಪಾರ್ಲಿಮೆಂಟರಿ ಪಾರ್ಟಿ ಲೀಡರ್ ಆಗಲು.
ಪವನ್ ಕಲ್ಯಾಣ್, ಜನಸೇನಾ ಪಾರ್ಟಿ ಮುಖ್ಯಸ್ಥ 

ಪವನ್ ಕಲ್ಯಾಣ್‌ರನ್ನ ಬಿರುಗಾಳಿ ಎಂದ ‘ನಮೋ’

ಎನ್‌ಡಿಎ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ ಎಲ್ಲಾ ನಾಯಕರ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಜೊತೆಗೆ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ರನ್ನ ಪವನ್‌ ಅಲ್ಲ ಬಿರುಗಾಳಿ ಅಂತ ಹೊಗಳಿದ್ದು ವಿಶೇಷವಾಗಿತ್ತು.

ಆಂಧ್ರದಲ್ಲಿ ನಾನು ಬಾಬು ಅವರಿಗೆ ಹೇಳಿದ್ದೆ ನಮಗೆ ಇತಿಹಾಸದಲ್ಲೇ ಇಲ್ಲಿ ಅತಿ ದೊಡ್ಡ ಗೆಲುವಾಗಲಿದೆ ಅಂತ. ನೀವಿಲ್ಲಿ ನೋಡ್ತಿದೀರಲ್ಲ ಪವನ್‌ರನ್ನ. ಇವರು ಪವನ್ ಅಲ್ಲ. ಬಿರುಗಾಳಿ.
ನರೇಂದ್ರ ಮೋದಿ, ಹಂಗಾಮಿ ಪ್ರಧಾನಿ

ಎಲ್ಲಾ ಮಿತ್ರಕೂಟಗಳ ವಿಶ್ವಾಸಗಳಿಸಿರೋ ನರೇಂದ್ರ ಮೋದಿ ಇದೇ ಭಾನುವಾರ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ‘ಪವನ್ ಅಲ್ಲ ಇವ್ರು ಬಿರುಗಾಳಿ’- ಪವನ್ ಕಲ್ಯಾಣ್ ಹೊಗಳಿದ ಮೋದಿ; NDA ಸಭೆಯಲ್ಲಿ ಆಗಿದ್ದೇನು?

https://newsfirstlive.com/wp-content/uploads/2024/06/pm-modi.jpg

Load More