/newsfirstlive-kannada/media/post_attachments/wp-content/uploads/2025/03/PRAKAJ-RAJ-AND-PAWAN-KLALYAN.jpg)
ಸದ್ಯ ಹಿಂದಿ ಹೇರಿಕೆ ಎಂಬ ಒಂದು ಪದ ರಾಜಕೀಯವಾಗಿ ದೊಡ್ಡ ಸದ್ದನ್ನು ಮಾಡುತ್ತಿದೆ. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ದೇವನಾಗರಿ ಲಿಪಿಯ ರೂಪಾಯಿಯನ್ನು ಪರಿಚಯಿಸುವ ಮೂಲಕ ಉರಿಯುವ ಬೆಂಕಿಗೆ ತಪ್ಪವನ್ನು ಸುರಿದಿದ್ದಾರೆ. ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷ ಸೂತ್ರದ ಬಗ್ಗೆ ದೊಡ್ಡ ಮಟ್ಟದಲ್ಲಿ ಪರ ವಿರೋಧದ ಮಾತುಗಳು ಆಚೆ ಬರುತ್ತಿವೆ. ಇದೇ ವಿಚಾರವಾದ ಆಂಧ್ರಪ್ರದೇಶದ ಡಿಸಿಎಂ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ:ಒಮನ್ ದೇಶದ ರಾಯಭಾರಿಯನ್ನು ಬಂಧಿಸಿದ್ರಾ ಪೊಲೀಸರು? ಇದರ ಹಿಂದಿರುವ ಸತ್ಯವೇನು ಗೊತ್ತಾ?
ಪ್ರಕಾಶ್ ರಾಜ್, ಪವನ್ ಕಲ್ಯಾಣ್ ವಿರುದ್ಧ ಹೇಳಿದ ಹೇಳಿಕೆಗೆ ಈಗ ಪವನ್ ಕಲ್ಯಾಣ್ ತಿರುಗೇಟು ಕೊಟ್ಟಿದ್ದಾರೆ. ರಾಜಕೀಯ ಉದ್ದೇಶದಿಂದಾಗಿ ಮಾತ್ರ ತ್ರಿಭಾಷ ಸೂತ್ರವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ಪವನ್ ಕಲ್ಯಾಣ್ ವಿರುದ್ಧ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಪವನ್ ಕಲ್ಯಾಣ್, ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದಾಗಲಿ ಅಥವಾ ಕುರುಡತನದಿಂದ ಅದನ್ನು ವಿರೋಧಿಸುವುದಾಗಲಿ ಎರಡು ಕೂಡ ಭಾರತದ ರಾಷ್ಟ್ರೀಯ ಪರಂಪರೆಯ ಏಕೀಕರಣದ ಉದ್ದೇಶದ ಗುರಿಗೆ ಸಹಾಯಕವಾಗಿ ನಿಲ್ಲುವುದಿಲ್ಲ.
Either imposing a language forcibly or opposing a language blindly; both doesn’t help to achieve the objective of National &Cultural integration of our Bharat.
I had never opposed Hindi as a language. I only opposed making it compulsory. When the NEP 2020 itself does not…
— Pawan Kalyan (@PawanKalyan) March 15, 2025
">March 15, 2025
ನಾನು ಎಂದಿಗೂ ಕೂಡ ಹಿಂದಿ ಭಾಷೆಯನ್ನು ವಿರೊಧ ಮಾಡಿಲ್ಲ. ನಾನು ಅದನ್ನು ಕಡ್ಡಾಯ ಮಾಡುವ ವಿಚಾರವನ್ನು ವಿರೋಧಿಸಿದ್ದೇನೆ. 2020ರಲ್ಲಿ ಎನ್ಇಪಿ ಹಿಂದಿ ಹೇರಿಕೆಯನ್ನು ಮಾಡಿಲ್ಲ. ಸುಮ್ಮನೇ ತಪ್ಪು ಮಾಹಿತಿಗಳನ್ನು ಹೇರುವುದರಿಂದ ಜನರ ದಿಕ್ಕು ತಪ್ಪಿಸುವ ಕಾರ್ಯವಾಗುತ್ತದೆ ಹೊರತು ಮತ್ತೇನೂ ಆಗುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಭಾರತದ ಯಾವುದೇ ವಿದ್ಯಾರ್ಥಿಯೂ ಎರಡು ಭಾಷೆಗಳನ್ನು ಕಲಿಯಲು ಆಯ್ಕೆ ಮಾಡಿಕೊಳ್ಳಬಹುದು. ಅದು ಕೂಡ ವಿದೇಶಗಳ ಭಾಷೆಗಳನ್ನು ಸೇರಿಸಿ. ಅವರಿಗೆ ಒಂದು ವೇಳೆ ಹಿಂದಿ ಕಲಿಯಲು ಆಸಕ್ತಿ ಇಲ್ಲದೇ ಇದ್ದ ಪಕ್ಷದಲ್ಲಿ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ, ಮರಾಠಿ, ಸಂಸ್ಕೃತ ಹೀಗೆ ಯಾವುದೇ ಭಾರತೀಯ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲ ಟ್ರೈನ್ ಹೈಜಾಕ್ ನಡೆದಿದ್ದು ಯಾವಾಗ? ಮಾಡಿದ್ದು ಯಾರು? ಹೇಗಿತ್ತು ಆಪರೇಷನ್?
ಬಹು ಭಾಷಾ ನೀತಿಯು ವಿದ್ಯಾರ್ಥಿಗಳಲ್ಲಿ ದೇಶದ ಒಗ್ಗಟ್ಟನ್ನು ಬೆಸೆಯುವ ಹಾಗೂ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನೀಡಿರುವ ಒಂದು ಆಯ್ಕೆ ಮತ್ತು ಭಾರತದ ಭಾಷಾ ವೈವಿದ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುವ ನೀತಿ ಎಂದು ಗುಡುಗಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್, ಹಿಂದಿ ಭಾಷೆಯನ್ನು ಹೇರಿಕೆ ಮಾಡಬೇಡಿ ಎನ್ನುವುದು ಮತ್ತೊಂದು ಭಾಷೆಯನ್ನು ದ್ವೇಷಿಸಿದಂತೆ ಅಲ್ಲ. ಇದು ನಮ್ಮ ಮಾತೃಭಾಷೆಯನ್ನು ಕಾಪಾಡುವ ಹಾಗೂ ನಮ್ಮ ಪರಂಪರೆಯ ಗುರುತನ್ನು ಆತ್ಮಗೌರವದೊಂದಿಗೆ ಕಾಪಾಡುವ ಕಾರ್ಯ. ಇದನ್ನು ಯಾರಾದರೂ ಪವನ್ ಕಲ್ಯಾಣ್ ಅವರಿಗೆ ತಿಳಿಸಿ ಎಂದು ಪ್ರಕಾಶ್ ರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ