/newsfirstlive-kannada/media/post_attachments/wp-content/uploads/2025/04/pawan-kalyan.jpg)
ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರನಿಗೆ ಗಾಯಗಳಾಗಿವೆ. ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2023/06/pavan-kalyan.jpg)
ವರದಿಗಳ ಪ್ರಕಾರ, ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರಂತೆ. ಪ್ರಸ್ತುತವಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಚಿಕಿತ್ಸೆ ನೀಡಲಾಗುತ್ತಿದೆಯಂತೆ.
/newsfirstlive-kannada/media/post_attachments/wp-content/uploads/2025/04/pawan-kalyan1.jpg)
ಸದ್ಯ ಡಿಸಿಎಂ ಪವನ್ ಕಲ್ಯಾಣ್ ಅವರು ವಿಶಾಖಪಟ್ಟಣಂನಲ್ಲಿ ಇದ್ದಾರೆ. ಕಾರ್ಯಕ್ರಮವನ್ನ ಮುಗಿಸಿ ಸಿಂಗಪೂರ್​ಗೆ ಪ್ರಯಾಣ ಬೆಳಸಲಿದ್ದಾರಂತೆ. ಮಾರ್ಕ್ ಶಂಕರ್ ಆನಾ ಲೆನೆವಾ ಮತ್ತು ಪವನ್ ಕಲ್ಯಾಣ್ ದಂಪತಿ ಪುತ್ರನಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us