ಸುದೀಪ್​​ ನಟನೆ ಮೇಲೆ ಭಾರೀ ಪ್ರಭಾವ ಬೀರಿದ್ದ ತಾಯಿ ಸರೋಜಾ; ಆ ಘಟನೆ ನೆನೆದ ಪವನ್​ ಕಲ್ಯಾಣ್​​

author-image
Veena Gangani
Updated On
ಸುದೀಪ್​​ ನಟನೆ ಮೇಲೆ ಭಾರೀ ಪ್ರಭಾವ ಬೀರಿದ್ದ ತಾಯಿ ಸರೋಜಾ; ಆ ಘಟನೆ ನೆನೆದ ಪವನ್​ ಕಲ್ಯಾಣ್​​
Advertisment
  • ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್​​ ತಾಯಿ ವಿಧಿವಶ
  • ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ ಕಿಚ್ಚನ ತಾಯಿ ಸರೋಜಾ
  • ಕಿಚ್ಚ ಸುದೀಪ್​​ ತಾಯಿ ನಿಧನಕ್ಕೆ ಕಂಬನಿ ಮಿಡಿದ ಸ್ಟಾರ್ ನಟ

ಸ್ಯಾಂಡಲ್​ವುಡ್​ ಖ್ಯಾತ​ ನಟ ಕಿಚ್ಚ ಸುದೀಪ್​ ತಾಯಿ ನಿಧನರಾಗಿದ್ದಾರೆ. ಬಾದ್​​ ಷಾ ಸುದೀಪ್​ ತಾಯಿ ಸರೋಜರವರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಉಸಿರು ನಿಲ್ಲಿಸಿದ್ದಾರೆ. ಸರೋಜಾರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರಂತೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಇದನ್ನೂ ಓದಿ: ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿಯನ್ನು ತಬ್ಬಿ ಅತ್ತ ಸುದೀಪ್​.. ಅಮ್ಮನನ್ನು ಕಳೆದುಕೊಂಡ ಮಾಣಿಕ್ಯ

publive-image

ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿಚ್ಚ ಸುದೀಪ್​ ತಾಯಿ ಇಂದು ಬೆಳಗ್ಗೆ 7:04 ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ನಟ ಸುದೀಪ್​ ಅವರ ತಾಯಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್​ವುಡ್​ ನಟ ಹಾಗೂ ನಟಿಯರು, ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ಸೇರಿದಂತೆ ಸಾಕಷ್ಟು ಮಂದಿ ಅಂತಿಮ ದರ್ಶನಕ್ಕೆ ನಿವಾಸಕ್ಕೆ ಬರುತ್ತಿದ್ದಾರೆ. ಇನ್ನು ಸುದೀಪ್ ತಾಯಿಯ ನಿಧನಕ್ಕೆ ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್​ ಅವರು ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.


">October 20, 2024

ಕನ್ನಡದಲ್ಲೇ ಪತ್ರ ಬರೆದು ಸುದೀಪ್ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಖ್ಯಾತ ನಟ ಶ್ರೀ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ. ಶ್ರೀಮತಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ತಮ್ಮ ನಟನೆಯ ಮೇಲೆ ತಾಯಿಯ ಪ್ರಭಾವ ಮತ್ತು ಪ್ರೋತ್ಸಾಹವಿದೆ ಎಂದು ಶ್ರೀ ಸುದೀಪ್ ಅವರು ಹೇಳಿದ್ದರು. ತಾಯಿಯನ್ನು ಕಳೆದುಕೊಂಡ ಸುದೀಪ್ ಅವರು ಬೇಗ ಚೇತರಿಸಿಕೊಳ್ಳಬೇಕು. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment