2ನೇ ಮದುವೆಗೆ ರೆಡಿಯಾದ ಪವನ್ ಕಲ್ಯಾಣ್ 2ನೇ ಪತ್ನಿ; ಬಾಳ ಸಂಗಾತಿ ಬಗ್ಗೆ ಭಾವುಕ ಮಾತು!

author-image
admin
Updated On
2ನೇ ಮದುವೆಗೆ ರೆಡಿಯಾದ ಪವನ್ ಕಲ್ಯಾಣ್ 2ನೇ ಪತ್ನಿ; ಬಾಳ ಸಂಗಾತಿ ಬಗ್ಗೆ ಭಾವುಕ ಮಾತು!
Advertisment
  • ಮಾಜಿ ಪತಿಯಿಂದ ದೂರವಾಗಿ 13 ವರ್ಷಗಳು ಕಳೆದ ರೇಣು ದೇಸಾಯಿ
  • ವೈಯಕ್ತಿಕ ಬದುಕಿನ ಬಗ್ಗೆ ಮೊದಲ ಬಾರಿ ಮುಕ್ತವಾಗಿ ಮಾತನಾಡಿದ ನಟಿ
  • ಸಿಂಗಲ್ ಪೇರೆಂಟ್ ಆಗಿ ನಾನು ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೇನೆ

ಪವರ್ ಸ್ಟಾರ್, ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ 2ನೇ ಮಾಜಿ ಪತ್ನಿ ರೇಣು ದೇಸಾಯಿ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ರೇಣು ದೇಸಾಯಿ ತಮ್ಮ ಮಾಜಿ ಪತಿಯಿಂದ ದೂರವಾಗಿ 13 ವರ್ಷಗಳು ಕಳೆದಿದೆ. ಇದೀಗ ತನ್ನ 2ನೇ ಮದುವೆ ಬಗ್ಗೆ ಮಾತನಾಡಿ ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ.

ತಮ್ಮ ವೈಯಕ್ತಿಕ ಬದುಕಿನ ಬಗ್ಗೆ podcastನಲ್ಲಿ ಮಾತನಾಡಿರುವ ರೇಣು ದೇಸಾಯಿ, ಈಗಲೂ ನಾನು ನನ್ನ ಹಳೇ ಜೀವನದ ಬಗ್ಗೆ ಆಘಾತದಲ್ಲಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನನಗೂ ಒಬ್ಬ ಲೈಫ್‌ ಪಾರ್ಟನರ್ ಬೇಕು ಅಂತ ನನಗೆ ಅನಿಸಿದೆ. ನಾನು ಮತ್ತೊಂದು ಮದುವೆಯಾಗಲು ಯೋಚಿಸುತ್ತಿದ್ದೇನೆ. ಆದರೆ ಈಗಲೇ ಅದು ಆಗೋದಿಲ್ಲ. ಅದಕ್ಕೆ ಕಾರಣ ನನ್ನ ಮಗಳು ಎಂದು ರೇಣು ಹೇಳಿದ್ದಾರೆ.

publive-image

ರೇಣು ದೇಸಾಯಿ ಅವರು ತಮ್ಮ ಬದುಕಿನ ಏಳು-ಬೀಳಿನ ಬಗ್ಗೆ ಇದೇ ಮೊದಲ ಬಾರಿ ಮುಕ್ತವಾಗಿ ಮಾತನಾಡಿರೋದು ತೀವ್ರ ಸಂಚಲನ ಸೃಷ್ಟಿಸಿದೆ. ವೈಯಕ್ತಿಕ ಬದುಕಿನಲ್ಲಿ ಬಾಳ ಸಂಗಾತಿ ಬೇಕು ಎನ್ನುವ ಬಗ್ಗೆ ಯೋಚನೆ ಮಾಡುತ್ತಿದ್ದಾನೆ. ಆದರೆ ಮಕ್ಕಳ ದೃಷ್ಟಿಕೋನದಲ್ಲಿ ಯೋಚನೆ ಮಾಡಿದಾಗ ಅದು ಕಷ್ಟವಾಗಿತ್ತು. ನನ್ನ ಮಕ್ಕಳ ಮೇಲಿನ ಜವಾಬ್ದಾರಿ ನನ್ನನ್ನು ಇಷ್ಟು ದಿನ ಒಬ್ಬಂಟಿಯಾಗುವಂತೆ ಮಾಡಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಕಿರಿಯ ಮಗನಿಗೆ ಗಾಯ.. ಸಿಂಗಪೂರ್​ಗೆ ಆಂಧ್ರ ಡಿಸಿಎಂ ದಿಢೀರ್​ ಪ್ರಯಾಣ 

ನಾನು ಮರು ಮದುವೆಯಾಗಲು ಪ್ರಯತ್ನಿಸಿದ್ದರೆ ನನ್ನ ಮಕ್ಕಳ ಬಾಂಧವ್ಯಕ್ಕೆ ನ್ಯಾಯ ದೊರಕಿಸಲು ಸಾಧ್ಯವಾಗುತ್ತಿರಲಿಲ್ಲ. ನಾನೀಗ ಸಿಂಗಲ್ ಪೇರೆಂಟ್ ಆಗಿ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ಮಗಳು ಆಧ್ಯಾಗೆ 18 ವರ್ಷ ಆದ ಮೇಲೆ 2ನೇ ಮದುವೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ನನಗೂ ಒಬ್ಬ ಬಾಳ ಸಂಗಾತಿ ಬೇಕಾಗಿದೆ ಎಂದು ರೇಣು ತಿಳಿಸಿದ್ದಾರೆ.

publive-image

ಪವನ್ ಕಲ್ಯಾಣ್‌ಗೆ ಮೂವರು ಪತ್ನಿಯರು!
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ಮೂರು ಬಾರಿ ಮದುವೆಯಾಗಿದ್ದಾರೆ. 2008ರಲ್ಲಿ ಮೊದಲ ಪತ್ನಿ ನಂದಿನಿಗೆ ಡಿವೋರ್ಸ್‌ ನೀಡಿದ್ದರು. 2009ರಲ್ಲಿ ರೇಣು ದೇಸಾಯಿ ಅವರನ್ನ ವಿವಾಹವಾಗಿದ್ದರು. 2012ರಲ್ಲಿ ನಟಿ ರೇಣು ದೇಸಾಯಿ ಅವರಿಗೂ ಪವನ್ ಕಲ್ಯಾಣ್ ವಿಚ್ಛೇದನ ನೀಡಿದ್ದರು. 2013ರಲ್ಲಿ ಪವನ್ ಕಲ್ಯಾಣ್ ಅವರು ರಷ್ಯಾ ಮೂಲದ ನಟಿ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment