ದಿಢೀರ್​ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಡಿಸಿಎಂ ಪವನ್ ಕಲ್ಯಾಣ್ ಪತ್ನಿ; ಕಾರಣವೇನು?

author-image
Veena Gangani
Updated On
ದಿಢೀರ್​ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಡಿಸಿಎಂ ಪವನ್ ಕಲ್ಯಾಣ್ ಪತ್ನಿ; ಕಾರಣವೇನು?
Advertisment
  • ಅಗ್ನಿ ಅವಘಡದಲ್ಲಿ ನಟ ಪವನ್​ ಕಲ್ಯಾಣ್​ ಮಗನಿಗೆ ಗಾಯ
  • ಸಿಂಗಾಪುರಕ್ಕೆ ಹೋಗಿ ಪತ್ನಿ ಮತ್ತು ಮಕ್ಕಳನ್ನ ಕರೆತಂದ ಪವನ್​
  • ಭಾರತಕ್ಕೆ ಬಂದಿಳಿದ ಬೆನ್ನಲ್ಲೇ ತಿರುಮಲ ದೇವಸ್ಥಾನಕ್ಕೆ ದೌಡು

ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಪುತ್ರ ಸಿಂಗಾಪುರದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಆಂಧ್ರದಿಂದ​ ಸಿಂಗಾಪುರಕ್ಕೆ ಹೋಗಿದ್ದ ಪವನ್, ಇದೀಗ ಪತ್ನಿ ಅನ್ನಾ ಲೆಜ್ನೆವಾ ಮತ್ತು ಮಕ್ಕಳನ್ನ ಅಲ್ಲಿಂದ ಸುರಕ್ಷಿತವಾಗಿ ವಾಪಸ್ ಕರೆತಂದಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲೇ ಪತ್ನಿ ಅನ್ನಾ ಸೀದಾ ತಿರುಪತಿಗೆ ಭೇಟಿ ನೀಡಿ, ಪುತ್ರನ ಆರೋಗ್ಯ ಕ್ಷೇಮಕ್ಕಾಗಿ ಮುಡಿ ಕೊಟ್ಟಿದ್ದಾರೆ.

publive-image

ಹೌದು, ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಪವನೋವಿಚ್‌ ಗಾಯಗೊಂಡಿದ್ದ. 8 ವರ್ಷ ವಯಸ್ಸಿನ ಮಾರ್ಕ್‌ ಶಂಕರ್‌ಗೆ ಅಲ್ಲಿಯೇ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಸಿಂಗಾಪುರಕ್ಕೆ ಹೋಗಿದ್ದ ಪವನ್​ ಕಲ್ಯಾಣ್​, ಪತ್ನಿ ಮತ್ತು ಮಕ್ಕಳನ್ನ ಹೈದರಾಬಾದ್‌ಗೆ ಕ್ಷೇಮವಾಗಿ ಕರೆತಂದಿದ್ದಾರೆ.

publive-image

ಸಮ್ಮರ್ ಕ್ಯಾಂಪ್‌ಗೆಂದು ತೆರಳಿದ್ದ ಮಾರ್ಚ್ ಶಂಕರ್‌ಗೆ ಅಗ್ನಿ ದುರಂತದಲ್ಲಿ ಗಾಯಗಳಾಗಿತ್ತು. ಮಾರ್ಕ್ ಕೈ ಹಾಗೂ ಕಾಲುಗಳು ಸುಟ್ಟಿದ್ದವು. ಅಲ್ಲದೇ ಅತಿಯಾದ ಹೊಗೆಯನ್ನ ಸೇವಿಸಿದ್ದರು. ಈ ಬೆನ್ನಲ್ಲೇ ಪವನ್‌ ಕಲ್ಯಾಣ್ ಸಿಂಗಾರಪುರಕ್ಕೆ ತೆರಳಿದ್ದರು. ಅಲ್ಲೇ ಪುತ್ರನಿಗೆ ಅಗತ್ಯ ಚಿಕಿತ್ಸೆ ಕೊಡಿಸಿದ್ರು. ಪಕ್ಕವೇ ಇದ್ದು ಆರೈಕೆ ಮಾಡಿದ್ರು. ಇದೀಗ ಆಸ್ಪತ್ರೆಯಿಂದ ಮಗ ಡಿಸ್ಚಾರ್ಜ್​ ಆಗ್ತಿದ್ದಂತೆ ಸ್ವದೇಶಕ್ಕೆ ಮರಳಿದ್ದಾರೆ.

publive-image

ಪುತ್ರ ಅಗ್ನಿ ಅವಘಡದಲ್ಲಿ ಸಿಲುಕಿ ಗಾಯಗೊಂಡಿದ್ದರಿಂದ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ತಿರುಪತಿ ತಿಮ್ಮಪ್ಪನ ಬಳಿ ಹರಕೆಯನ್ನ ಹೊತ್ತುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಸಿಂಗಾಪುರದಿಂದ ಭಾರತಕ್ಕೆ ಹಿಂತಿರುಗುತ್ತಿದ್ದಂತೆ ತಿರುಮಲಕ್ಕೆ ಬಂದು ಮುಡಿ ನೀಡಿ ಹರಕೆ ತೀರಿಸಿದ್ದಾರೆ. ಇಂದು ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿ, ತಮ್ಮ ಮಗನ ರಕ್ಷಣೆ ಮಾಡುವಂತೆ ಪವನ್ ಕಲ್ಯಾಣ್ ಪತ್ನಿ ಪ್ರಾರ್ಥನೆ ಮಾಡಲಿದ್ದಾರೆ. ತಿರುಮಲದಲ್ಲಿ ಮುಡಿ ಕೊಡುವ ವೇಳೆ ಪವನ್ ಕಲ್ಯಾಣ್ ಅನುಪಸ್ಥಿತಿಯಿತ್ತು. ಪವನ್ ಕಲ್ಯಾಣ್ ತಮ್ಮ ಕೆಲಸದಲ್ಲಿ ಬ್ಯುಸಿ ಇರುವುದರಿಂದ ಅನ್ನಾ ಒಬ್ಬರೇ ತಿರುಪತಿಗೆ ಆಗಮಿಸಿ, ಮುಡಿ ಸಮರ್ಪಿಸಿದ್ದಾರೆ. ಆದ್ರೆ, ಇಂದು ಪತ್ನಿಯೊಂದಿಗೆ ಸೇರಿ ಪವನ್ ಕಲ್ಯಾಣ್ ವಿಶೇಷ ಪೂಜೆಯನ್ನ ಸಲ್ಲಿಸುವ ಸಾಧ್ಯತೆಯಿದೆ.

publive-image

ಸದ್ಯ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಮನೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ರಷ್ಯಾ ಮೂಲದವರಾಗಿದ್ದು, ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಾರೆ. ಹೀಗಿರುವಾಗ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟಿರೋದು, ಹಿಂದೂ ಧರ್ಮದ ಬಗ್ಗೆ ಅವರಿಗೆ ಇರೋ ನಂಬಿಕೆ ತೋರ್ಪಡಿಸ್ತಿದೆ ಅನ್ನೋ ಮಾತು ಕೇಳಿ ಬರ್ತಿವೆ. ಇದೇನೇ ಚರ್ಚೆ ನಡೆದ್ರೂ ಅವರ ಉದ್ದೇಶ ಇಷ್ಟೇ ಮಗ ಆದಷ್ಟು ಬೇಗ ಗುಣಮುಖವಾಗಲಿ ಅನ್ನೋದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment