/newsfirstlive-kannada/media/post_attachments/wp-content/uploads/2024/07/arman-malik-1.jpg)
ಹಿಂದಿ ಬಿಗ್​ಬಾಸ್ ಒಟಿಟಿ ಸೀಸನ್​ 3 ಈ ಸಲ ಸಖತ್​ ಸದ್ದು ಮಾಡುತ್ತಿದೆ. ಈ ಬಾರಿಯ ಬಿಗ್​ಬಾಸ್​ ರಿಯಾಲಿಟಿ ಶೋಗೆ ಯೂಟ್ಯೂಬರ್ ಅರ್ಮಾನ್ ಮಲಿಕ್ ತಮ್ಮ ಇಬ್ಬರು ಹೆಂಡತಿಯರಾದ ಪಾಯಲ್ ಮತ್ತು ಕೃತಿಕಾ ಜೊತೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್​ಬಾಸ್​ಗೆ ಹೋದ ಮೊದಲ ವಾರಕ್ಕೆ ಅರ್ಮಾನ್ ಮಲಿಕ್ ಮೊದಲ ಹೆಂಡತಿ ಪಾಯಲ್ ಮಲಿಕ್​ ​ ಶೋನಿಂದ ಎಲಿಮಿನೇಟ್ ಆಗಿದ್ದರು. ಬಿಗ್​ಬಾಸ್​ಗೂ ಬರುವ ಮುನ್ನ ಸಖತ್​ ಹೈಪ್​ ಕ್ರಿಯೇಟ್​ ಮಾಡಿದ್ದ ಅರ್ಮಾನ್ ಮಲಿಕ್ ದಂಪತಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ.
/newsfirstlive-kannada/media/post_attachments/wp-content/uploads/2024/06/bigg-boss-hinddi.jpg)
ಕಳೆದ ವಾರವಷ್ಟೇ ಬಿಗ್​ಬಾಸ್​​​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಹೈಡ್ರಾಮ ನಡೆದಿತ್ತು. ಸಹ ಕಂಟೆಸ್ಟಂಟ್ ಆಗಿರೋ ವಿಶಾಲ್​​​ಗೆ ಅರ್ಮಾನ್ ಮಲಿಕ್ ಕಪಾಳಮೋಕ್ಷ ಮಾಡಿ ಸಖತ್​ ಹಲ್​ಚಲ್​ ಸೃಷ್ಟಿಸಿದ್ದರು. ಇದಾದ ಬೆನ್ನಲ್ಲೇ ಯೂಟ್ಯೂಬರ್ ಅರ್ಮಾನ್ ಮಲಿಕ್​ ಎರಡನೇ ಪತ್ನಿ ಕೃತಿಕಾ ಮಲಿಕ್​ ಜೊತೆಗೆ ಬಿಗ್​ಬಾಸ್​ ಮನೆಯಲ್ಲಿ ಬೆಡ್​ ಮೇಲೆ ರೊಮ್ಯಾನ್ಸ್ ಮಾಡಿರೋ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೇ ವಿಡಿಯೋ ನೋಡಿದ ವೀಕ್ಷಕರು ದಂಪತಿ ಮೇಲೆ ಕೆಂಡ ಕಾರಿದ್ದರು.
/newsfirstlive-kannada/media/post_attachments/wp-content/uploads/2024/07/hindi-bigg-boss2.jpg)
ನಾನು ಅರ್ಮಾನ್​ ಮಲಿಕ್​ಗೆ ಡಿವೋಸ್​​ ನೀಡುತ್ತೇನೆ
ಆದರೆ ಇದೀಗ ಮೊದಲ ಹೆಂಡತಿ ಪಾಯಲ್​​ ತಮ್ಮ ಪತಿ ಅರ್ಮಾನ್​ ಮಲಿಕ್​ಗೆ ಡಿವೋರ್ಸ್ ನೀಡಲು ಮುಂದಾಗಿದ್ದಾರಂತೆ. ಹೌದು, ಅರ್ಮಾನ್ ಮಲಿಕ್​ನನ್ನು ತೊರೆಯಲು ನಾನು ನಿರ್ಧರಿಸಿದ್ದೇನೆ ಅಂತ ಬಿಗ್ ಬಾಸ್ OTT 3 ಮಾಜಿ ಸ್ಪರ್ಧಿಯಾಗಿರೋ ಪಾಯಲ್ ತಮ್ಮ ವ್ಲಾಗ್‌ವೊಂದರಲ್ಲಿ ಹಂಚಿಕೊಂಡಿದ್ದಾರೆ. ಬಿಗ್​ಬಾಸ್​ನಿಂದ ಎಲಿಮಿನೇಟ್ ಆದ ಬಳಿಕ ಸಾಕಷ್ಟು ಮಂದಿ ಟ್ರೋಲ್​ ಮಾಡಿರೋ ವಿಡಿಯೋ ನೋಡಿ ಬೇಸರ ಹೊರ ಹಾಕಿದ್ದರು. ನಾನು ಈ ಡ್ರಾಮಾ ಇಲ್ಲಿಗೆ ಮುಗಿಸಿದ್ದೇನೆ. ನನ್ನ ಬಗ್ಗೆ ಎಷ್ಟಾದರೂ ಟ್ರೋಲ್​ ಮಾಡಲಿ ಪರವಾಗಿಲ್ಲ, ಆದರೆ ಈಗ ನನ್ನ ಮಕ್ಕಳನ್ನು ಇಟ್ಟುಕೊಂಡು ಸಾಕಷ್ಟು ಮಂದಿ ಟ್ರೋಲ್ ಮಾಡುತ್ತಿದ್ದಾರೆ. ಇದು ತುಂಬಾ ಆಘಾತಕಾರಿ ಮತ್ತು ಅಸಹ್ಯಕರವಾಗಿದೆ. ನಾನು ಅರ್ಮಾನ್‌ನಿಂದ ದೂರವಾಗಲು ನಿರ್ಧರಿಸಿದ್ದೇನೆ. ಒಂದು ನಾವು ಮೂವರೂ ಬೇರ್ಪಡುತ್ತೇವೆ, ಅಥವಾ ಇಬ್ಬರು ಬೇರೆಯಾಗುತ್ತೇವೆ, ಇಲ್ಲವೇ ನಾನು ದೂರ ಹೋಗುತ್ತೇನೆ. ಇದು ಹಾಗೆ ಉಳಿಯಬಾರದು. ಅಮಾನ್​ ಕಾಗೂ ಕೃತಿಕಾಗೆ ಹೊರಗಡೆ ಏನೆಲ್ಲಾ ಆಗುತ್ತಿದೆ ಅಂತ ಅವರಿಗೆ ತಿಳಿದಿಲ್ಲ. ನಾನು ನನ್ನ ಜೀವನದಲ್ಲಿ ಇಷ್ಟು ದ್ವೇಷ, ಟ್ರೋಲಿಂಗ್‌ಗಳನ್ನು ನಾನು ಎಂದಿಗೂ ಎದುರಿಸಿಲ್ಲ.
/newsfirstlive-kannada/media/post_attachments/wp-content/uploads/2024/06/bigg-boss1.jpg)
ಇಬ್ಬರು ಹೆಂಡತಿಯ ಜೊತೆಗೆ ಬಿಗ್​ಬಾಸ್​ ಮನೆಗೆ ಬಂದಿದ್ದ ಅರ್ಮಾನ್​ ಮಲಿಕ್​
ಇನ್ನು, ಈ ಬಾರಿಯ ಬಿಗ್​ಬಾಸ್​ನಲ್ಲಿ ಯೂಟ್ಯೂಬರ್ ಅರ್ಮಾನ್ ಮಲಿಕ್ ಹಾಗೂ ಅವರ ಇಬ್ಬರು ಪತ್ನಿಯರಾದ ಕೃತಿಕಾ ಮಲಿಕ್ ಮತ್ತು ಪಾಯಲ್ ಮಲಿಕ್ ಎಂಟ್ರಿ ಕೊಡುತ್ತಿರುವುದು ವಿಶೇಷವಾಗಿದೆ. ಯೂಟ್ಯೂಬರ್ ಅರ್ಮಾನ್ ಮಲಿಕ್, ಅವರ ನಿಜವಾದ ಹೆಸರು ಸಂದೀಪ್ ಸಿಂಗ್. ಅರ್ಮಾನ್ ಮಲಿಕ್ ಅವರು ಯೂಟ್ಯೂಬ್​ನಲ್ಲಿ 7.67M ಫಾಲೋವರ್ಸ್​ ಅನ್ನು ಹೊಂದಿದ್ದಾರೆ.
ಅರ್ಮಾನ್​ ಮಲಿಕ್​ ಕೇವಲ ಎರಡೂವರೆ ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು, ಅವರಿಗೆ ಚಿರಾಯು ಮಲಿಕ್ ಎಂಬ ಮಗು ಇದೆ. ಇದಾದ ಬಳಿಕ 2018ರಲ್ಲಿ ಅರ್ಮಾನ್ ಮಲಿಕ್ ಪತ್ನಿ ಪಾಯಲ್ ಅವರ ಆತ್ಮೀಯ ಸ್ನೇಹಿತೆ ಕೃತಿಕಾ ಮಲಿಕ್ ಮದುವೆಯಾದರು. ಮೊದ ಮೊದಲು ಪಾಯಲ್ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಪಾಯಲ್ ಅರ್ಮಾನ್‌ನೊಂದಿಗೆ ರಾಜಿ ಮಾಡಿಕೊಂಡರು ಮತ್ತು ಕೃತಿಕಾ ಅವರನ್ನು ಕುಟುಂಬಕ್ಕೆ ವೆಲ್​ಕಮ್​ ಮಾಡಿ ಸುಖ ಸಂಸಾರ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us