/newsfirstlive-kannada/media/post_attachments/wp-content/uploads/2024/03/DC-vs-PBKS.jpg)
ಐಪಿಎಲ್ನ ಮಹಾ ಸಂಗ್ರಾಮಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಾಗಿದೆ. ಮೊದಲ ಪಂದ್ಯವೇ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಅದೇ ರೀತಿ ಇಂದು ಫ್ಯಾನ್ಸ್ಗೆ ಡಬಲ್ ಟ್ರೀಟ್ಗೆ ವೇದಿಕೆ ಸಜ್ಜಾಗಿದೆ. ಪವರ್ ಹಿಟ್ಟರ್, ಡೆಡ್ಲಿ ಬೌಲರ್ಗಳ ಕಾಳಗಕ್ಕೆ ಇಂದಿನ ಸೂಪರ್ saturday ಸಾಕ್ಷಿಯಾಗ್ತಿದೆ.
ಐಪಿಎಲ್ನಲ್ಲಿ ಇಂದು ಡಬಲ್ ಧಮಾಕ
ಐಪಿಎಲ್ 2ನೇ ದಿನವೇ ಫ್ಯಾನ್ಸ್ಗೆ ಡಬಲ್ ಧಮಾಕ. ಎರಡು ಸೂಪರ್ ಫೈಟ್ಗಳಿಗೆ ಇವತ್ತಿನ ಸೂಪರ್ saturday ಸಾಕ್ಷಿಯಾಗ್ತಿದ್ದು, ಹೈವೋಲ್ಟೇಜ್ ಮ್ಯಾಚ್ಗಳನ್ನ ಕಣ್ತುಬಿಂಕೊಳ್ಳಲು ಫ್ಯಾನ್ಸ್ ರೆಡಿಯಾಗಿದ್ದಾರೆ. ಒಂದಕ್ಕಿಂತ ಒಂದು ಜಬರ್ದಸ್ತ್ ಮ್ಯಾಚ್ಗಳು ನಡೆಯಲಿದ್ದು, ಫ್ಯಾನ್ಸ್ಗೆ ಹಬ್ಬದೂಟ ಪಕ್ಕಾ ಕಾದಿದೆ.
ಮೊದಲ ಪಂದ್ಯದಲ್ಲಿ ಪವರ್ ಹಿಟ್ಟರ್ಗಳ ಕಾಳಗ!
ಇಂದಿನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲ್ ಎಸೆಯುತ್ತಿದೆ. ಈ ಬಿಗ್ ಫೈಟ್ಗೆ ಮೊಹಾಲಿ ಸ್ಟೇಡಿಯಂ ವೇದಿಕೆಯಾಗಲಿದೆ. ಬಿಗ್ ಹಿಟ್ಟಿಂಗ್ ಬ್ಯಾಟರ್ಸ್ ಆ್ಯಂಡ್ ಖತರ್ನಾಕ್ ಬೌಲರ್ಗಳನ್ನ ಹೊಂದಿರುವ ಪಂಜಾಬ್ ಗೆಲ್ಲೋ ಆತ್ಮ ವಿಶ್ವಾಸದಲ್ಲಿದೆ.
ಪಂಜಾಬ್ ಸ್ಟ್ರೆಂಥ್
- ಶಿಖರ್ ಧವನ್, ಬೇರ್ ಸ್ಟೋ ಓಪನಿಂಗ್
- ಪವರ್ ಹಿಟ್ಟಿಂಗ್ ಬ್ಯಾಟರ್ಗಳ ದಂಡು
- ಕ್ಲಾಸಿ ಆಲ್ರೌಂಡರ್ಗಳ ಬಲ
- ಬಲಿಷ್ಠವಾದ ಬೌಲಿಂಗ್ ಅಟ್ಯಾಕ್
- ಇಂಡಿಯನ್ ಸ್ಪಿನ್ನರ್ಸ್ ಬಲ
ಡೆಲ್ಲಿ ಕ್ಯಾಪಿಟಲ್ಸ್ ಕೂಡ ಪಂಜಾಬ್ಗಿಂತ ಭಿನ್ನವಾಗಿಲ್ಲ. ಎಲ್ಲಾ ವಿಭಾಗದಲ್ಲೂ ಸಖತ್ ಸ್ಟ್ರಾಂಗ್ ಆಗಿರೋ ಡೆಲ್ಲಿ, ಪಂಜಾಬ್ಗೆ ಪಂಚ್ ನೀಡಲು ರೆಡಿಯಾಗಿದೆ.
ಡೆಲ್ಲಿ ಸ್ಟ್ರೆಂಥ್
- ಬ್ಯಾಟಿಂಗ್ ಪವರ್ ಹೌಸ್
- ಆಲ್ರೌಂಡರ್ಸ್ ದಂಡು
- ಡೆಡ್ಲಿಯಾಗಿದೆ ಪೇಸ್ ಅಟ್ಯಾಕ್
- ಮ್ಯಾಚ್ ವಿನ್ನಿಂಗ್ ಸ್ಪಿನ್ನರ್ಸ್ ಬಲ
ಎರಡೂ ಟೀಮ್ಗಳು ಸಖತ್ ಸ್ಟ್ರಾಂಗ್ ಆಗಿದೆ ಹೌದು.! ಅದ್ರ ಜೊತೆಗೆ ವೀಕ್ನೆಸ್ಗಳು ಕೂಡ ಉಭಯ ತಂಡಗಳಿವೆ.
ಪಂಜಾಬ್ ವಿಕ್ನೇಸ್
- ವಿದೇಶಿ ಆಟಗಾರರ ಅಸ್ಥಿರ ಪ್ರದರ್ಶನ
- ಮಿಡಲ್ ಆರ್ಡರ್ನಲ್ಲಿ ಭಾರತೀಯ ಬ್ಯಾಟರ್ಸ್ ಇಲ್ಲ
- ಹೆಚ್ಚುವರಿ ಆಲ್ರೌಂಡರ್ಗಳಿಂದ ಹಿನ್ನಡೆ ಸಾಧ್ಯತೆ
- ತಂಡಕ್ಕಿದೆ ಹೊಸ ಸ್ಟೇಡಿಯಂನ ಚಾಲೆಂಜ್
ಡೆಲ್ಲಿ ವಿಕ್ನೇಸ್
- ಟಾಪ್ ಆರ್ಡರ್ ಮೇಲೆ ಸಕ್ಸಸ್ ನಿರ್ಣಯ
- ದಿಢೀರ್ ಕುಸಿತದ ಆತಂಕ
- ಸೂಕ್ತ ಮ್ಯಾಚ್ ಫಿನಿಷರ್ ಕೊರತೆ
- ವಿದೇಶಿಗರ ಮೇಲೆ ಡಿಪೆಂಡ್
- ಪಂತ್ ಫಾರ್ಮ್ ಬಗ್ಗೆ ಸ್ಪಷ್ಟತೆಯಿಲ್ಲ
2ನೇ ಪಂದ್ಯದಲ್ಲಿ ದುಬಾರಿ ಆಟಗಾರರೇ ಅಟ್ರಾಕ್ಷನ್..!
ಇಂದು ನಡೆಯೋ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸಸರ್ಸ್ ಹೈದ್ರಾಬಾದ್ ಮುಖಾಮುಖಿಯಾಗಲಿವೆ. ಈ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಪ್ಯಾಟ್ ಕಮಿನ್ಸ್ ಹಾಗೂ ಕೆಕೆಆರ್ ತಂಡದ ವೇಗಿ ಮಿಚೆಲ್ ಸ್ಟಾರ್ಕ್..! ದುಬಾರಿ ಮೊತ್ತಕ್ಕೆ ಬಿಕರಿಯಾಗಿರೋ ಇವರ ಆಟ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಹೀಗಾಗಿ ಇಂದಿನ ಎರಡೂ ಪಂದ್ಯಗಳಲ್ಲಿ ಫ್ಯಾನ್ಸ್ಗೆ ಹಬ್ಬದೂಟ ಫಿಕ್ಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್