ಹೀನಾಯ ಸ್ಥಿತಿಗೆ ತಲುಪಿದ ಚೆನ್ನೈ ಸೂಪರ್ ಕಿಂಗ್ಸ್​.. ಫಿನಿಷರ್ ಪಾತ್ರ ನಿರ್ವಹಿಸುವಲ್ಲಿ ಧೋನಿ ಮತ್ತೆ ಫೇಲ್..!

author-image
Ganesh
Updated On
ಪ್ಲೇ-ಆಫ್​ ರೇಸ್​ನಿಂದ ಅಧಿಕೃತವಾಗಿ ಹೊರಬಿದ್ದ ಧೋನಿ.. IPL ಇತಿಹಾಸದಲ್ಲಿ ಚೆನ್ನೈ ಕೆಟ್ಟ ದಾಖಲೆ..!
Advertisment
  • ಪಂಜಾಬ್ ವಿರುದ್ಧ ಚೆನ್ನೈ ತಂಡಕ್ಕೆ ಮತ್ತೆ ಸೋಲು
  • ಐದನೇ ಬ್ಯಾಟಿಂಗ್ ಆರ್ಡರ್​ನಲ್ಲಿ ಬಂದಿದ್ದ ಧೋನಿ
  • 12 ಬಾಲ್​ನಲ್ಲಿ 27 ರನ್​ಗಳಿಸಿ ಧೋನಿ ಔಟ್..!

ಪಂಜಾಬ್​​ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್​ 18 ರನ್​ಗಳ ಅಂತರದಲ್ಲಿ ಸೋತಿದೆ. ಎಂಎಸ್ ಧೋನಿ ಚೆನ್ನೈ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಮತ್ತೆ ವಿಫಲರಾದರು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ 219 ರನ್‌ಗಳ ಬೃಹತ್ ಸ್ಕೋರ್ ಗಳಿಸಿತ್ತು. ಇದರಲ್ಲಿ ಪ್ರಿಯಾಂಶ್ ಆರ್ಯ 103 ರನ್‌ಗಳ ಶತಕ ಪಂಜಾಬ್​ಗೆ ಅತಿದೊಡ್ಡ ಕೊಡುಗೆಯಾಗಿತ್ತು.

220 ರನ್​ಗಳ ಬೃಹತ್ ಗುರಿ ಬೆನ್ನು ಹತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ 201 ರನ್‌ ಗಳಿಸಲು ಶಕ್ತವಾಯಿತು. ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಸಿಎಸ್‌ಕೆಗೆ ಉತ್ತಮ ಆರಂಭ ನೀಡಿದರು. ರವೀಂದ್ರ 36 ರನ್ ಗಳಿಸಿದರು. ಕಾನ್ವೇ ಜೊತೆಗೂಡಿ 61 ರನ್‌ಗಳ ಆರಂಭಿಕ ಪಾಲುದಾರಿಕೆ ಹಂಚಿಕೊಂಡರು. ನಾಯಕ ಋತುರಾಜ್ ಕೇವಲ 1 ರನ್ ಗಳಿಸಿ ಔಟಾದರು. ಇದರಿಂದ ಚೆನ್ನೈ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: ಮುಂಬೈ ವಿರುದ್ಧ ಗೆದ್ದು ಬೀಗಿದ ಆರ್​ಸಿಬಿ; ಪಾಯಿಂಟ್ಸ್ ಪಟ್ಟಿ ಕತೆ ಏನಾಯ್ತು..?

ನಂತರ ಕಾನ್ವೇ ಮತ್ತು ದುಬೆ ಜವಾಬ್ದಾರಿ ವಹಿಸಿಕೊಂಡರು. ಇಬ್ಬರು 89 ರನ್‌ಗಳ ಪಾರ್ಟ್ನರ್​ಶಿಪ್ ಕಲೆ ಹಾಕಿದರು. ಆದರೆ ಶಿವಂ ದುಬೆ 42 ರನ್​ಗಳಿಸಿ 16ನೇ ಓವರ್‌ನಲ್ಲಿ ಔಟ್ ಆದರು. ಆಗ ಚೆನ್ನೈ ಗೆಲುವಿಗೆ 25 ಎಸೆತಗಳಲ್ಲಿ 69 ರನ್‌ಗಳ ಅಗತ್ಯವಿತ್ತು. ನಂತರ ಕಾನ್ವೇ 69 ರನ್ ಗಳಿಸಿ ನಿವೃತ್ತರಾದರು. ಕೊನೆಯ 3 ಓವರ್‌ಗಳಲ್ಲಿ ಚೆನ್ನೈಗೆ 59 ರನ್‌ಗಳು ಬೇಕಾಗಿದ್ದವು.

ಧೋನಿ ಮತ್ತೆ ವಿಫಲ..

ದುಬೆ ಔಟ್ ಆದ ಬೆನ್ನಲ್ಲೇ ಐದನೇ ಸ್ಥಾನದಲ್ಲಿ ಎಂಎಸ್ ಧೋನಿ ಬ್ಯಾಟಿಂಗ್​ಗೆ ಬಂದರು. 12 ಎಸೆತಗಳಲ್ಲಿ 27 ರನ್ ಗಳಿಸಿ ಎಲ್ಲರ ಗಮನ ಸೆಳೆದರು. ಆದರೆ ಫಿನಿಷರ್ ಪಾತ್ರ ನಿರ್ವಹಿಸಲು ಅಸಮರ್ಥರಾದರು. ಧೋನಿ CSK ಮೇಲೆ ಹೊರೆಯಾಗುತ್ತಿದ್ದಾರೆ. ಐಪಿಎಲ್-2025ರಲ್ಲಿ ಸಿಎಸ್‌ಕೆ ಸತತ ನಾಲ್ಕನೇ ಸೋಲು ಅನುಭವಿಸಿದೆ.

ಇದನ್ನೂ ಓದಿ: ಜಸ್ಟ್‌ 4 ರನ್‌ನಲ್ಲಿ ಗೆದ್ದು ಬೀಗಿದ ಲಕ್ನೋ.. ಐಪಿಎಲ್‌ನಲ್ಲಿ ಮತ್ತೊಂದು ಲಾಸ್ಟ್‌ ಓವರ್‌ ರೋಚಕ ಪಂದ್ಯ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment