newsfirstkannada.com

ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!

Share :

Published March 23, 2024 at 11:16am

Update March 23, 2024 at 11:22am

  ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡಿರುವ ರಿಷಬ್ ಪಂತ್

  ಐಪಿಎಲ್​ ಸೀಸನ್​​-17ರ ಮೇಲಿದೆ ರಿಷಭ್​​​​ ಪಂತ್​ ಭವಿಷ್ಯ ನಿರ್ಧಾರ

  ರಿಷಬ್ ಪಂತ್ ಚೇತರಿಕೆಗೆ ಕೋಟಿ ಕೋಟಿ ಹಣ ಸುರಿದಿರುವ BCCI

ಕ್ರಿಕೆಟ್ ಅಂಗಳದಿಂದ ದೂರ ಉಳಿದಿದ್ದ ರಿಷಬ್ ಪಂತ್ ಕೊನೆಗೂ ಅಂಗಳಕ್ಕಿಳಿಯಲು ಸಜ್ಜಾಗಿದ್ದಾರೆ. ಪಂತ್ ಮೇಲಿನ ನಿರೀಕ್ಷೆಯಂತು ಡಬಲ್ ಆಗಿದೆ. ಪವರ್ ಫುಲ್ ಪಂತ್ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಲೋಕ ಕಾದು ಕುಳಿತಿದೆ. ಕಮ್​​ಬ್ಯಾಕ್​ಗೆ​ ಸಜ್ಜಾಗಿರುವ ಪಂತ್ ಮುಂದೆ​ ಸಾಲು ಸಾಲು ಅಗ್ನಿಪರೀಕ್ಷೆಗಳಿವೆ.

457 ದಿನ..! 1 ವರ್ಷ, 3 ತಿಂಗಳು..!

ರಿಷಬ್ ಪಂತ್ ಎಂಬ ಡೈನಾಮೆಟ್​​ನ ಅಂಗಳದಲ್ಲಿ ನೋಡಿ ಬರೋಬ್ಬರಿ 457 ದಿನ ಅಂದ್ರೆ, 1 ವರ್ಷ 3 ತಿಂಗಳೇ ಕಳೆದಿವೆ. ಪವರ್​ ಫುಲ್​ ಪಂತ್ ಯಾವಾಗ ಫೀಲ್ಡ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇಂದು ರಣಾಂಗಣಕ್ಕೆ ರಾಯಲ್​ ಎಂಟ್ರಿ ಕೊಡಲು ಪಂತ್​ ಸಜ್ಜಾಗಿದ್ದಾರೆ.

ಪಂಜಾಬ್​ ಎದುರು ಕಣಕ್ಕಿಳಿಯಲು ಪಂತ್ ರೆಡಿ!

ಅಪಘಾತದಿಂದ ಸಂಪೂರ್ಣ ಚೇತರಿಸಿಕೊಂಡಿರುವ ಪಂತ್, ಇಂದು ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಂತ್ ಬ್ಯಾಟಿಂಗ್, ಕೀಪಿಂಗ್, ಕ್ಯಾಪ್ಟನ್ಸಿ ಕಣ್ತುಂಬಿಕೊಳ್ಳಲು ಫ್ಯಾನ್ಸ್​, ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ, ಸಂಪೂರ್ಣ ಫಿಟ್​ ಆಗಿ ಕಣಕ್ಕಿಳಿಯುತ್ತಿರುವ​ ಪಂತ್​ಗೆ​ ಈ ಐಪಿಎಲ್​​ ಅಗ್ನಿಪರೀಕ್ಷೆಯ ಕಣವಾಗಿದೆ.

ಯಶಸ್ಸಿನ ಹಾದಿಯಲ್ಲಿ ಮುನ್ನಡೆಸ್ತಾರಾ ಪಂತ್.?

2021ರಲ್ಲಿ ಶ್ರೇಯಸ್ ಅಲಭ್ಯತೆಯಲ್ಲಿ ಚುಕ್ಕಾಣಿ ಹಿಡಿದಿದ್ದ ಪಂತ್, ನಂತರ ಡೆಲ್ಲಿ ಕ್ಯಾಪಿಟಲ್ಸ್​ನ ಖಾಯಂ ನಾಯಕನಾಗಿದ್ರು. ಆ ಸೀಸನ್​ನಲ್ಲಿ ತಂಡ ಟೇಬಲ್ ಟಾಪರ್ ಆಗಿಯೇ ಹೊರಹೊಮ್ಮಿತ್ತು. ಇದೀಗ ವರ್ಷದ ಬಳಿಕ ತಂಡಕ್ಕೆ ಕಮ್​​ಬ್ಯಾಕ್ ಮಾಡಿರೋ ಪಂತ್​ಗೆ, ತಂಡವನ್ನ ಅದೇ ಯಶಸ್ಸಿನ ಅಲೆಯಲ್ಲಿ ಮುನ್ನಡೆಸಬೇಕಾದ ಸವಾಲು ಇದೆ. ಯಾಕಂದ್ರೆ, ಮುಂದೆ ಮೆಗಾ ಹರಾಜು ನಡೆಯಲಿದೆ. ಫೇಲ್​ ಆದ್ರೆ ಡೆಲ್ಲಿ ಕ್ಯಾಪಿಟಲ್ಸ್​ ಪಂತ್​ನ ಕೈ ಬಿಟ್ಟರು ಅಚ್ಚರಿ ಇಲ್ಲ.

ಆನ್​ಫೀಲ್ಡ್​ನಲ್ಲಿ ಪವರ್ ತೋರಿಸ್ತಾರಾ ಡೆಲ್ಲಿ ಡ್ಯಾಶರ್..?

ಆನ್​ಫೀಲ್ಡ್​ನಲ್ಲಿ ಪವರ್ ತೋರಿಸುವುದೆ ಪಂತ್​ ಮುಂದಿರೋ ಬಿಗ್​ ಚಾಲೆಂಜ್​. ವಿಕೆಟ್ ಹಿಂದೆ ಕೀಪರ್​ ಆಗಿ, ವಿಕೆಡ್​ ಮುಂದೆ ಬ್ಯಾಟ್ಸ್​ಮನ್​ ಆಗಿ ಜಾದು ಮಾಡಬೇಕಿದೆ. ಈ ಐಪಿಎಲ್​ ಟೂರ್ನಿ ಪಂತ್, ಭವಿಷ್ಯವನ್ನ ನಿರ್ಧರಿಸಲಿದೆ. ಅಕಸ್ಮಾತ್ ಇಲ್ಲಿ ಪಂತ್ ಎಡವಿದ್ರೆ, ಕರಿಯರ್ ಮಂಕಾಗುವುದ್ರಲ್ಲಿ ಎರಡು ಮಾತಿಲ್ಲ.

ಟಿ20 ವಿಶ್ವಕಪ್​​ನಲ್ಲಿ ಸ್ಥಾನ ಪಡೆಯಲು ಐಪಿಎಲ್ ವೇದಿಕೆ..!

ಪಂತ್​ರ ಮುಂದಿನ ಟಾರ್ಗೆಟ್.. ಜೂನ್​ನಲ್ಲಿ ನಡೆಯೋ ಟಿ20 ವಿಶ್ವಕಪ್​ ಟೂರ್ನಿಯಾಗಿದೆ. ಟೀಮ್​ ಇಂಡಿಯಾದಲ್ಲಿ ವಿಕೆಟ್ ಕೀಪರ್ ಕಮ್​ ಬ್ಯಾಟರ್​ ಆಗಿ ಸ್ಥಾನ ಪಡೆಯಲು ಬರೋಬ್ಬರಿ ಐವರು ರೇಸ್​ನಲ್ಲಿದ್ದಾರೆ. ಇವರಿಗೆಲ್ಲ ಐಪಿಎಲ್ ಟೂರ್ನಿ ವೇದಿಕೆಯಾಗಿದೆ. ಆ ಐವರನ್ನು ಹಿಂದಿಕ್ಕುವ ಪರ್ಫಾಮೆನ್ಸ್, ಡೇರ್ ಡೆವಿಲ್ ಪಂತ್​​ರಿಂದ ಬರಬೇಕಿದೆ. ಇಲ್ಲ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸುವ ಕನಸು ನುಚ್ಚುನೂರಾಗೋದು ಗ್ಯಾರಂಟಿ.

ಬಿಗ್​ಬಾಸ್​ಗಳಿಗೂ ಪಂತ್ ಆಟ ಪ್ರತಿಷ್ಠೆ..!

ಪಂತ್, ಅಪಘಾತದಲ್ಲಿ ಪವಾಡದ ರೀತಿಯಲ್ಲಿ ಬದುಕಿದ್ದು ಮಾತ್ರವಲ್ಲ. 14 ತಿಂಗಳಲ್ಲೇ ಚೇತರಿಸಿಕೊಂಡು, ಅಂಗಳಕ್ಕಿಳಿಯುತ್ತಿರುವುದು ಕೂಡ ಒಂದು ಮಿರಾಕಲ್. ಡೆಡ್ಲಿ ಆ್ಯಕ್ಸಿಡೆಟ್​ನಲ್ಲಿ ಪಂತ್​​ಗಾದ ಇಂಜುರಿ ತೀವ್ರತೆ ಅಷ್ಟಿತ್ತು. ಆದ್ರೆ, ಸ್ಪೆಷಲ್ ಕೇರ್ ತೆಗೆದುಕೊಂಡ ಬಿಸಿಸಿಐ ಬಿಗ್​ಬಾಸ್​ಗಳು, ಪಂತ್ ಚೇತರಿಕೆಗೆ ಕೋಟಿ ಕೋಟಿ ಹಣವನ್ನೇ ಸುರಿದಿದ್ದಾರೆ. ಈಗ ಪಂತ್, ಐಪಿಎಲ್​ನಲ್ಲಿ ಆಡಿ ಸಾಮರ್ಥ್ಯ ಫ್ರೂವ್ ಮಾಡಬೇಕಿರೋದು ಬಿಸಿಸಿಐಗೆ ಒಂದು ರೀತಿ ಪ್ರತಿಷ್ಠೆಯಾಗಿದೆ.

ಇದನ್ನು ಓದಿ: ಮಾ.​ 25ರಿಂದ SSLC ಪರೀಕ್ಷೆ ಆರಂಭ.. ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಹಳೆ ಶೇಪ್​ನಲ್ಲಿ ಇರ್ತಾರಾ ರಿಷಬ್ ಪಂತ್​..?

ರಿಷಬ್ ಪಂತ್​.. ಪಕ್ಕಾ ಅಟ್ಯಾಕರ್​.. ಯಾವುದೇ ಬೌಲರ್​ಗಳ ಮೇಲಾದ್ರೂ, ಮುಗಿಬೀಳೋ ಪಂತ್, ಮೋಸ್ಟ್ ಡೇಂಜರಸ್ ಬ್ಯಾಟರ್ ಆಗಿಯೇ ಫೇಮಸ್​. ಆದ್ರೆ, ಇದೀಗ ಒಂದು ವರ್ಷಕ್ಕೂ ಅಧಿಕ ದಿನಗಳ ಬಳಿಕ ಅಂಗಳಕ್ಕಿಳಿಯುತ್ತಿರುವ ರಿಷಬ್ ಪಂತ್​, ಮೊದಲಿನ ಟಚ್​​ನಲ್ಲಿದ್ದಾರೆ. ಅದೇ ಫಾರ್ಮ್​ನಲ್ಲಿ ಪರ್ಫಾಮ್​ ಮಾಡ್ತಾರಾ ಅನ್ನೋ ಪ್ರಶ್ನೆಯಿದೆ.

ರಿಷಬ್ ಪಂತ್​ ಕಮ್​​ಬ್ಯಾಕ್​ನಿಂದ ತಂಡಕ್ಕೆ ಬಲ ಬಂತು ಅನ್ನೋದು ಒಂದೆಡೆಯಾಗಿದೆ. ಇನ್ನೊಂದೆಡೆ ಐಪಿಎಲ್​ಗೂ ಕಳೆ ಬಂದಿದೆ. ಆದ್ರೆ, ಪಂತ್ ಮುಂದೆ ಮಾತ್ರ ಸಾಲು ಸಾಲು ಸವಾಲುಗಳಿವೆ. ಇವುಗಳನ್ನ ಹೇಗೆ ಮೆಟ್ಟಿ ನಿಲ್ತಾರೆ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮರುಜೀವ ಪಡೆದ ಪಂತ್​​ಗೆ ಇದು ಬದುಕಿನ ಸೆಕೆಂಡ್ ಇನ್ನಿಂಗ್ಸ್; ಕ್ರಿಕೆಟ್ ಲೋಕದಲ್ಲೂ ಪವಾಡ ಮಾಡಲು ರೆಡಿ..!

https://newsfirstlive.com/wp-content/uploads/2024/03/RISHABH_PANTH.jpg

Load More