/newsfirstlive-kannada/media/post_attachments/wp-content/uploads/2025/04/CHAHAL.jpg)
ಯಾರ್ ಹೇಳಿದ್ದು ಐಪಿಎಲ್ ಬ್ಯಾಟ್ಸ್ಮನ್ಗಳ ಗೇಮ್ ಅಂತಾ. ಬೌಲರ್ಗಳು ತಿರುಗಿಬಿದ್ರೆ ಬ್ಯಾಟ್ಸ್ಮನ್ಗಳ ಖೇಲ್ ಖತಂ ಅಷ್ಟೇ. ನಿನ್ನೆ ನಡೆದ ಲೋ ಸ್ಕೋರಿಂಗ್ ಥ್ರಿಲ್ಲರ್ ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಚಂಡಿಗಢದ ಮುಲ್ಲಾಂಪುರದಲ್ಲಿ ಬ್ಯಾಟ್ಸ್ಮನ್ಗಳ ಬೌಲರ್ಗಳು ಗಿರ್ಗಿಟ್ಲೆ ಆಡಿಸಿಬಿಟ್ರು.
ಒಂದೊಂದು ಓವರ್ ರೋಚಕ.. ಒಂದೊಂದು ಎಸೆತಕ್ಕೂ ಕುತೂಹಲ.. ಪಂಜಾಬ್-ಕೊಲ್ಕತ್ತಾ ಲೋ ಸ್ಕೋರಿಂಗ್ ಥ್ರಿಲ್ಲರ್ ಗೇಮ್ ನಿನ್ನೆ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿತ್ತು. ಸ್ಟಾರ್ಟಿಂಗ್ನಲ್ಲಿ ಎಲ್ಲರಿಗೂ ಹೈ ಸ್ಕೋರಿಂಗ್ ಗೇಮ್ನ ನಿರೀಕ್ಷೆಯಿತ್ತು. ಫಸ್ಟ್ ಹಾಫ್ ಗೇಮ್ ನೋಡಿದ ಒನ್ ಸೈಡೆಡ್ ಮ್ಯಾಚ್ ಅನ್ನಿಸಿತ್ತು. ಆದ್ರೆ, ಸೆಕೆಂಡ್ ಹಾಫ್ನ ಅಂತ್ಯ ರಣ ರೋಚಕವಾಗಿತ್ತು.
ಟಾಸ್ ಗೆದ್ದು ಪಂಜಾಬ್ ಪರ ಅಗ್ರೆಸ್ಸಿವ್ ಆಗಿ ಇನ್ನಿಂಗ್ಸ್ ಓಪನ್ ಮಾಡಿದ ಪ್ರಿಯಾಂಶ್ ಆರ್ಯ, ಪ್ರಭ್ ಸಿಮ್ರನ್ ಸಿಂಗ್ ಬಿಗ್ ಸ್ಕೋರ್ ಕಲೆ ಹಾಕೋ ಸೂಚನೆಯನ್ನ ನೀಡಿದ್ರು. ಪವರ್ ಪ್ಲೇನಲ್ಲೇ ಕೆಕೆಆರ್ ಬೌಲರ್ಸ್ ಪಂಜಾಬ್ ಕಿಂಗ್ಸ್ನ ಪವರ್ ಕಟ್ ಮಾಡಿದ್ರು. 4ನೇ ಓವರ್ನಲ್ಲಿ ಬೌಲಿಂಗ್ಗೆ ಬಂದ ಹರ್ಷಿತ್ ರಾಣಾ 2ನೇ ಎಸೆತದಲ್ಲೇ ಪ್ರಿಯಾಂಶ್ ಆರ್ಯ ವಿಕೆಟ್ ಉರುಳಿಸಿದ್ರು. ಶ್ರೇಯಸ್ ಅಯ್ಯರ್ ಅದೇ ಓವರ್ನಲ್ಲಿ ಡಕೌಟ್ ಆದ್ರು.
ಇದನ್ನೂ ಓದಿ: ಚೆನ್ನೈ ಗೆಲುವಿಗೆ ಟಾಸ್ ಫಿಕ್ಸಿಂಗ್ ಅನುಮಾನ? ಮ್ಯಾಚ್ ರೆಫರಿ ಕಿವಿಯಲ್ಲಿ ಧೋನಿ ಹೇಳಿದ್ದೇನು? VIDEO
ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆದ ಜೋಶ್ ಇಂಗ್ಲೀಸ್ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರು. ಇದ್ರ ಬೆನ್ನಲ್ಲೇ ಮತ್ತೊಂದು ಶಾಕ್ ಕೊಟ್ಟ ರಾಣಾ, ಪ್ರಭ್ ಸಿಮ್ರನ್ ಸಿಂಗ್ ವಿಕೆಟ್ ಉರುಳಿಸಿದ್ರು. ನೆಹಾಲ್ ವಡೇರಾ ಎನ್ರಿಚ್ ನೋಕಿಯಾಗೆ ಬಲಿಯಾದ್ರೆ ಗ್ಲೇನ್ ಮ್ಯಾಕ್ಸ್ವೆಲ್ ಮತ್ತೊಂದು ಫ್ಲಾಪ್ ಶೋ ನೀಡಿ ನಿರ್ಗಮಿಸಿದ್ರು.
ಸುರ್ಯಾಂಶ್ ಶೆಡ್ಗೆ, ಮಾರ್ಕೋ ಯಾನ್ಸೆನ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. ಶಶಾಂಕ್ ಸಿಂಗ್ ಆಟ 18 ರನ್ಗಳಿಗೆ ಅಂತ್ಯವಾಯ್ತು. 11 ರನ್ಗಳಿಸಿದ್ದ Xavier Bartlett ರನೌಟ್ ಆದ್ರು. ಕೇವಲ 111 ರನ್ಗಳಿಗೆ ಪಂಜಾಬ್ ಕಿಂಗ್ಸ್ ಆಲೌಟ್ ಆಯ್ತು.
112 ರನ್ಗಳ ಟಾರ್ಗೆಟ್ ಅಲ್ವಾ? ಆದಷ್ಟು ಬೇಗ ಮ್ಯಾಚ್ ಮುಗ್ಸಿ ರನ್ರೇಟ್ ಹೆಚ್ಚಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಕೆಕೆಆರ್ ಕಣಕ್ಕಿಳಿತು. ಆತ್ಮವಿಶ್ವಾಸದಲ್ಲಿ ಬ್ಯಾಟಿಂಗ್ಗೆ ಬಂದ ಕೊಲ್ಕತ್ತಾಗೆ ಆಘಾತ ಕಾದಿತ್ತು. ಫಸ್ಟ್ ಓವರ್ನಲ್ಲೇ ಸುನಿಲ್ ನರೇನ್ ಔಟಾದ್ರೆ, 2ನೇ ಓವರ್ನಲ್ಲಿ ಕ್ವಿಂಟನ್ ಡಿ ಕಾಕ್ ನಿರ್ಗಮಿಸಿದ್ರು.
ಇದನ್ನೂ ಓದಿ:ಐಪಿಎಲ್ನಲ್ಲಿ ವೀರ ಕನ್ನಡಿಗನ ಘರ್ಜನೆ.. ಟ್ಯಾಲೆಂಟೆಡ್ ಕ್ರಿಕೆಟಿಗನಿಗೆ ಆದ ಅನ್ಯಾಯದ ಬಗ್ಗೆ ಗೊತ್ತೇನು..?
ಬಳಿಕ ಜೊತೆಯಾದ ಅಜಿಂಕ್ಯಾ ರಹಾನೆ, ಅಂಗ್ಕ್ರಿಶ್ ರಘುವಂಶಿ ತಂಡಕ್ಕೆ ಚೇತರಿಕೆ ನೀಡಿದ್ರು. ಕಾನ್ಫಿಡೆಂಟ್ ಆಗಿ ಬ್ಯಾಟ್ ಬೀಸಿದ ರಘುವಂಶಿ 5 ಬೌಂಡರಿ, 1 ಸಿಕ್ಸರ್ ಬಾರಿಸಿದ್ರು. ರಘುವಂಶಿ 37 ರನ್ಗಳಿಸಿದ್ರೆ, ಎಚ್ಚರಿಕೆಯ ಆಟವಾಡಿದ ರಹಾನೆ 17 ರನ್ಗಳಿಸಿದ್ರು. ಸ್ಪಿನ್ನರ್ ಯುಜುವೇಂದ್ರ ಚಹಲ್ ಸೆಟಲ್ ಆಗಿದ್ದ ಇಬ್ಬರನ್ನೂ ಬ್ಯಾಕ್ ಬ್ಯಾಕ್ ಪೆವಿಲಿಯನ್ಗಟ್ಟಿದ್ರು. ಇಡೀ ಮ್ಯಾಚ್ಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿಂದ. ಬಳಿಕ ಬೌಲಿಂಗ್ಗೆ ಬಂದ ಮ್ಯಾಕ್ಸ್ವೆಲ್ ವೆಂಕಟೇಶ್ ಅಯ್ಯರ್ನ ಎಲ್ಬಿ ಬಲೆಯಲ್ಲಿ ಬೀಳಿಸಿದ್ರು. 12ನೇ ಓವರ್ನಲ್ಲಿ ಯುಜುವೇಂದ್ರ ಚಹಲ್ ಮತ್ತೆ ಶಾಕ್ ಕೊಟ್ರು. ಒಂದೇ ಓವರ್ನಲ್ಲಿ ರಿಂಕು ಸಿಂಗ್, ರಮಣ್ ದೀಪ್ ಸಿಂಗ್ ವಿಕೆಟ್ ಕಬಳಿಸಿದ್ರು.
ಹರ್ಷಿತ್ ರಾಣಾನ ಮಾರ್ಕ್ ಯಾನ್ಸನ್ ಕ್ಲೀನ್ ಬೋಲ್ಡ್ ಮಾಡಿದ್ರೆ, ವೈಭವ್ ಅರೋರ ಆರ್ಷ್ದೀಪ್ ಸಿಂಗ್ಗೆ ಶರಣಾದ್ರು. 1 ಬೌಂಡರಿ, 2 ಸಿಕ್ಸರ್ ಸಿಡಿಸಿ ಕೆಕೆಆರ್ ಪಾಳಯದಲ್ಲಿ ಭರವಸೆ ಮೂಡಿಸಿದ್ದ ಆ್ಯಂಡ್ರೆ ರಸೆಲ್ನ ಕ್ಲೀನ್ಬೋಲ್ಡ್ ಮಾಡಿದ ಮಾರ್ಕೋ ಯಾನ್ಸೆನ್ ಪಂಜಾಬ್ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 95 ರನ್ಗಳಿಗೆ ಆಲೌಟ್ ಆದ ಕೊಲ್ಕತ್ತಾ ಹೀನಾತ ಸೋಲಿಗೆ ಶರಣಾದ್ರೆ, ಪಂಜಾಬ್ ಕಿಂಗ್ಸ್ 16 ರನ್ಗಳ ರಣರೋಚಕ ಜಯ ಸಾಧಿಸಿತು. 15.1 ಓವರ್ಗಳಲ್ಲಿ ಕೆಕೆಆರ್ನ ಖೆಡ್ಡಾಗೆ ಕೆಡವಿದ ಪಂಜಾಬ್ ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಸ್ಕೋರ್ ಡಿಫೆಂಡ್ ಮಾಡಿಕೊಂಡ ಹೆಗ್ಗಳಿಕೆಗೆ ಪಾತ್ರವಾಯ್ತು.
ಇದನ್ನೂ ಓದಿ: ಏನಾದ್ರೂ ಆಗ್ಲಿ.. ಜೀವನೋತ್ಸಾಹ ಹೀಗೆ ಇರಲಿ; ಈ ಜೋಡಿ ಖುಷಿಯ ವಿಡಿಯೋ ಒಮ್ಮೆ ನೋಡಿ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್