/newsfirstlive-kannada/media/post_attachments/wp-content/uploads/2025/05/IPL-PLAYOFF.jpg)
ಐಪಿಎಲ್ನ ಫಸ್ಟ್ ಹಾಫ್ 57 ಪಂದ್ಯಗಳ ಆಟ ಒಂದು ಲೆಕ್ಕ.. ಐಪಿಎಲ್ ಮರು ಆರಂಭದ ಪಂದ್ಯಗಳದ್ದೇ ಮತ್ತೊಂದು ಲೆಕ್ಕ. ಮೇ.17ರಿಂದ ಆರಂಭವಾಗಲಿರುವ ಉಳಿದ 13 ಲೀಗ್ ಪಂದ್ಯಗಳೇ ಅಸಲಿ ಕಿಕ್ ನೀಡಲಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಯಾರು ಪ್ಲೇ ಆಫ್ಗೆ ಹೋಗ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಲಿವೆ.
ಗುಜರಾತ್, ಆರ್ಸಿಬಿಗೆ ಒಂದೇ ಹೆಜ್ಜೆ..!
11 ಪಂದ್ಯಗಳ ಪೈಕಿ 8ರಲ್ಲಿ ಗೆದ್ದಿರುವ ಟೈಟನ್ಸ್, 2ನೇ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ಗಳ ಎದುರು ಸೆಣಸಾಡಲಿದೆ. ಈ ಪೈಕಿ ಒಂದು ಪಂದ್ಯ ಗೆದ್ದರೆ, ಪ್ಲೇ ಆಫ್ ಸ್ಥಾನ ಗ್ಯಾರಂಟಿ. ಟಾಪ್-2ನಲ್ಲಿ ಉಳಿಯಬೇಕಾದ್ರೆ. ಎರಡು ಅಥವಾ ಮೂರು ಪಂದ್ಯಗಳಲ್ಲಿ ಗೆಲ್ಲಬೇಕು.
ಇದನ್ನೂ ಓದಿ: ಕನ್ನಡಿಗ ಪಡಿಕ್ಕಲ್ RCB ತಂಡದಲ್ಲಿ ಆಡ್ತಾರಾ.. ಮಯಾಂಕ್ ಅಗರ್ವಾಲ್ಗೆ ಎಷ್ಟು ಕೋಟಿ ಹಣ ಕೊಡಲಾಗಿದೆ?
ಎರಡನೇ ಸ್ಥಾನದಲ್ಲಿರುವ ಆರ್ಸಿಬಿ ಕೂಡ ಫುಲ್ ಸೇಫ್ ಆಗಿದೆ. ಪ್ಲೇ ಆಫ್ ಸ್ಥಾನವನ್ನ ಬಹು ಬೇಗನೆ ಖಚಿತಪಡಿಸಿಕೊಳ್ಳುವ ಅವಕಾಶ ಆರ್ಸಿಬಿಗಿದೆ. ಮೇ 17ರಂದು ಬೆಂಗಳೂರಿನಲ್ಲಿ ನಡೆಯೋ ಪಂದ್ಯದಲ್ಲಿ ಗೆದ್ದರೆ ಸಾಕು.
ಪಂಜಾಬ್ಗೆ ಅಗ್ನಿಪರೀಕ್ಷೆ
ಪಂಜಾಬ್ ಕಿಂಗ್ಸ್ 11 ಪಂದ್ಯಗಳ ಪೈಕಿ 7 ಗೆಲುವು, ಒಂದು ಡ್ರಾ ಸಾಧಿಸಿ 15 ಅಂಕ ಪಡೆದಿದೆ. ಡೆಲ್ಲಿ ಎದುರು ಗೆಲ್ಲೋ ಹಂಬಲದಲ್ಲಿದ್ದ ಪಂಜಾಬ್ಗೆ ಪಂದ್ಯದ ರದ್ದಾಗಿದ್ದು, ಪ್ಲೇ ಆಫ್ ಲೆಕ್ಕಾಚಾರವನ್ನೇ ಬದಲಿಸಿಬಿಟ್ಟಿದೆ. ಪಂಜಾಬ್, ಪ್ಲೇ ಆಫ್ ಪ್ರವೇಶಿಸ ಬೇಕಂದ್ರೆ ಅಂಕಪಟ್ಟಿಯಲ್ಲಿ ತನಗಿಂತ ಕೆಳಗಿರೋ ಮುಂಬೈ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯ ಗೆಲ್ಲಬೇಕಿದೆ.
ಇದನ್ನೂ ಓದಿ: RCBಗೆ ಸ್ಫೋಟಕ ಬ್ಯಾಟರ್ಸ್, ಆಲ್ರೌಂಡರ್ಸ್ ಕಮ್ಬ್ಯಾಕ್.. ಮತ್ತೆ ಬೆಂಗಳೂರು ತಂಡ ಬಲಿಷ್ಠ
ಮುಂಬೈ ಇಂಡಿಯನ್ಸ್ಗೆ ಡು ಆರ್ ಡೈ ಸ್ಥಿತಿ. 12 ಪಂದ್ಯದಲ್ಲಿ 7 ಗೆದ್ದಿರುವ ಪಾಂಡ್ಯ ಪಡೆ, ಮುಂದಿನ ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಎದುರು ಹೋರಾಟ ನಡೆಸಲಿದೆ. ಈ ಎರಡೂ ತಂಡಗಳ ಎದುರು ಗೆದ್ದರೇ ಮಾತ್ರ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ಗೆ ಎಂಟ್ರಿ ನೀಡಲಿದೆ.
ಡೆಲ್ಲಿ ತಂಡದ ಮುಂದೆ ಗುಜರಾತ್, ಪಂಜಾಬ್, ಮುಂಬೈ ಸವಾಲಿದೆ. ಸವಾಲನ್ನ ಮೆಟ್ಟಿ ನಿಂತು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ರೆ, ಪ್ಲೇಆಫ್ ಎಂಟ್ರಿ ಸುಲಭವಾಗಲಿದೆ. ಇಲ್ಲ ಮುಂಬೈ ಇಂಡಿಯನ್ಸ್ ತಂಡದ ಸೋಲು, ಗೆಲುವುಗಳೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇ ಆಫ್ ಭವಿಷ್ಯ ನಿರ್ಣಯಿಸಲಿದೆ.
ಇದನ್ನೂ ಓದಿ: ಅಭಿಮಾನಿಗಳ ಆತಂಕ ದೂರ, ಆರ್ಸಿಬಿಗೆ ಬಂತು ಆನೆಬಲ.. ವಿಡಿಯೋ ಹಂಚಿಕೊಂಡ ಫ್ರಾಂಚೈಸಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್