Qualifier- 2ರಲ್ಲಿ ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್​ಗಾಗಿ ಬಿಗ್ ಫೈಟ್​

author-image
Bheemappa
Updated On
Qualifier- 2ರಲ್ಲಿ ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ..? ಫೈನಲ್ ಟಿಕೆಟ್​ಗಾಗಿ ಬಿಗ್ ಫೈಟ್​
Advertisment
  • ಇವತ್ತಿನ ಕ್ವಾಲಿಫೈಯರ್​- 2ನ ಫೈರಿ ವಾರ್​ನಲ್ಲಿ ಗೆಲ್ಲುವ ಟೀಮ್?
  • ಮೇಜರ್ ರೋಲ್ ಪ್ಲೇ ಮಾಡುತ್ತಿರೋ ಜಸ್​ಪ್ರಿತ್ ಬೂಮ್ರಾ​
  • ಮುಂಬೈ ಇಂಡಿಯನ್ಸ್​ ತಂಡದ ಹಿಂದಿರುವ ಶಕ್ತಿಗಳು ಯಾರು?

ಐಪಿಎಲ್​​​​​​​ ದಂಗಲ್​​ನಲ್ಲಿಂದು ಫ್ಯಾನ್ಸ್​​ಗೆ ಫುಲ್ ಟ್ರೀಟ್ ಕಾದಿದೆ. ಕ್ವಾಲಿಫೈಯರ್​​​​​​- 2ನಲ್ಲಿ ಬಲಾಢ್ಯ ಪಂಜಾಬ್ ಕಿಂಗ್ಸ್​, ಮುಂಬೈ ಇಂಡಿಯನ್ಸ್​ ತಂಡಗಳು ಸೆಣಸಾಡಲಿವೆ. ಉಭಯ ತಂಡಗಳಲ್ಲಿ ಹೋರಾಟದ ಕಿಚ್ಚಿದೆ. ಹೀಗಾಗಿ ಸೀಸನ್​​​-18ರ ಐಪಿಎಲ್​ನಲ್ಲಿ ಫೈನಲ್​​​​ಗೆ ಎಂಟ್ರಿ ನೀಡುವ ತಂಡ ಯಾವುದು ಎಂಬುವುದು ಭಾರೀ ಕುತೂಹಲ ಕೆರಳಿಸಿದೆ.

ಸೀಸನ್​​​ -18 ಐಪಿಎಲ್​​​​ನ 2ನೇ ಫೈನಲಿಸ್ಟ್​ ಯಾರು, ಸೂಪರ್​ ಸಂಡೇ ನಡೆಯೋ ಕ್ವಾಲಿಫೈಯರ್​ ದಂಗಲ್​ನಲ್ಲಿ ಗೆಲ್ಲೋದು ಯಾರು?. ಈ ಮಿಲಿಯನ್​ ಪ್ರಶ್ನೆಗೆ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಆನ್ಸರ್ ಸಿಗಲಿದೆ. ಆದ್ರೆ, ಈ ಹೈವೋಲ್ಟೇಜ್ ಕ್ವಾಲಿಫೈಯರ್ ಬ್ಯಾಟಲ್ ಗೆಲ್ಲೋಕೆ ತೆರೆಮರೆಯಲ್ಲೇ ತಂತ್ರ-ಪ್ರತಿತಂತ್ರ ರೂಪಿಸ್ತಿದ್ದು, ಸೂಪರ್ ಸಂಡೇಯ ಸೂಪರ್ ಫೈಟ್​ ಬ್ಯಾಟಲ್​ನಲ್ಲಿ ಯಾರ್ ಗೆಲ್ತಾರೆ ಅನ್ನೋದು ಭಾರೀ ಕುತೂಹಲ ಕೆರಳಿಸಿದೆ.

publive-image

ಸ್ಮಾರ್ಟ್​ ಕ್ಯಾಪ್ಟನ್ಸ್​.. ಲೆಜೆಂಡರಿ ಕೋಚಸ್..! ಯಾರಿಗೆ ಗೆಲುವು..?

ಶ್ರೇಯಸ್ ಅಯ್ಯರ್ ಆ್ಯಂಡ್ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನ ಸಕ್ಸಸ್​ ಫುಲ್ ಕ್ಯಾಪ್ಟನ್​​ಗಳಲ್ಲಿ ಒಬ್ಬರು. ಹಾರ್ದಿಕ್ ನಾಯಕನಾಗಿ ಒಂದು ಟ್ರೋಫಿ ಗೆದ್ದರೆ, ಒಮ್ಮೆ ರನ್ನರ್ ಆಫ್ ಪಟ್ಟಕ್ಕೇರಿಸಿದ್ದಾರೆ. ಇನ್ನು ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೂಡ ನಾಯಕತ್ವದ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರನ್ನರ್ ಆಫ್​​ ಆಗಿ ಮಾಡಿದ್ದ ಶ್ರೇಯಸ್​, ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧನೆ ಮಾಡಿದ್ದಾರೆ. ನಾಯಕತ್ವದ ವಿಚಾರದಲ್ಲಿ ಸಮಬಲರಾಗಿರುವ ಇವರಿಬ್ಬರು, ಇಂದು ಆನ್​ಫೀಲ್ಡ್​ನಲ್ಲಿ ಏನ್ ಮಾಡ್ತಾರೆ ಅನ್ನೋದೆ ಕ್ಯೂರಿಯಾಸಿಟಿ.

ಸ್ಮಾರ್ಟ್​ ಕ್ಯಾಪ್ಟನ್ಸ್​ & ಲೆಜೆಂಡರಿ ಕೋಚ್​ಗಳ ಕಾಳಗ

ನಾಯಕರೇ ಅಲ್ಲ, ಸಪೋರ್ಟಿಂಗ್ ಸ್ಟಾಫ್​ನಲ್ಲೂ ಲೆಜೆಂಡ್ಸ್​ ಇದ್ದಾರೆ. ಬೌಂಡರಿ ಲೈನ್​​ ಬಳಿಯೇ ನಿಂತು ಕ್ಷಣ ಕ್ಷಣಕ್ಕೂ ತಂತ್ರಗಳನ್ನು ಹೆಣೆಯುವ ಮುಂಬೈ ಹೆಡ್ ಕೋಚ್ ಮಹೇಲಾ ಜಯವರ್ಧನೆ, ಬೌಲಿಂಗ್ ಕೋಚ್​ಗಳಾದ ಲಸಿತ್ ಮಲಿಂಗಾ, ಪರಸ್ ಮಾಬ್ರೆ ನಿಜಕ್ಕೂ ಮುಂಬೈ ತಂಡದ ಶಕ್ತಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಮುಂಬೈನಲ್ಲೇ ಅಲ್ಲ, ಪಂಜಾಬ್ ತಂಡದ ಹೆಡ್ ಕೋಚ್ ರಿಕಿ ಪಾಟಿಂಗ್, ಅಸಿಸ್ಟೆಂಟ್ ಕೋಚ್ ಬ್ರಾಡ್ ಹೆಡಿನ್, ಸ್ಪಿನ್ ಬೌಲಿಂಗ್ ಕೋಚ್ ಸುನಿಲ್ ಜೋಶಿ ಗ್ಯಾಲರಿಯಿಂದಲೇ ನೀಡುವ ಇನ್​ಫುಟ್ಸ್​ ಪಂಜಾಬ್ ಗೆಲುವಿನಲ್ಲಿ ಮನಹತ್ವದ ಪಾತ್ರವನ್ನೇ ವಹಿಸಿದೆ. ಹೀಗಾಗಿ ಇವತ್ತು ಈ ಸ್ಮಾರ್ಟ್​ ಕ್ಯಾಪ್ಟನ್ಸ್​ & ಲೆಜೆಂಡರಿ ಕೋಚ್​ಗಳ ಕಾಳಗದಲ್ಲಿ ಯಾರ ಕೈ ಮೇಲಾಗುತ್ತೆ ಅನ್ನೋದೆ ಪ್ರಶ್ನೆ.

ಪಂಜಾಬ್​​​​, ಮುಂಬೈನಲ್ಲಿ ಗೇಮ್​ಚೇಂಜರ್ಸ್​​​​, ಬಿಗ್​​ ಹಿಟ್ಟರ್​ಗಳ ದಂಡು..!

ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್​.. ದಿ ಬೆಸ್ಟ್​ ಬ್ಯಾಟಿಂಗ್​ ಲೈನ್ ಆಫ್ ಹೊಂದಿರುವ ಟೀಮ್ಸ್​. ಟಾಪ್ ಆರ್ಡರ್​ ಟು ಲೋವರ್ ಆರ್ಡರ್​ ತನಕ ಗೇಮ್ ಚೇಂಜರ್​​​ಗಳ ಪಡೆಯ ಜೊತೆಗೆ ಪವರ್ ಹಿಟ್ಟರ್​ಗಳ ದಂಡನ್ನೇ ಹೊಂದಿವೆ. ಹೀಗಾಗಿ ಯಾವ ಕ್ಷಣದಲ್ಲಿ, ಯಾವುದೇ ಆಟಗಾರನಾದರು ತಂಡದ ಗತಿ ಬದಲಿಸಬಲ್ಲರು. ತಂಡವನ್ನು ಗೆಲುವಿನ ದಡ ಸೇರಿಸಬಲ್ಲರು. ಈ ಕಾರಣಕ್ಕೆ ಯಾರನ್ನೂ ಇಂದು ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಪ್ರಮುಖವಾಗಿ ಪಂಜಾಬ್ ಕಿಂಗ್ಸ್ ಪರ ಪ್ರಭ್​ ಸಿಮ್ರಾನ್, ಮುಂಬೈ ಪರ ಸೂರ್ಯನ ಶಾಕವೇ ಬಲ ಹಾಗೂ ಎದುರಾಳಿಗಳ ಪಾಲಿಗೆ ವಿಲನ್.

ಇದನ್ನೂ ಓದಿ:RCBಗೆ ಇಂದು ಡಬಲ್​ ಸಂಭ್ರಮ, ಏನೇನು ಗೊತ್ತಾ..? ಫೈನಲ್​ ಆಡಲು ಗುಜರಾತ್​ ತಲುಪಿದ ಟೀಮ್

publive-image

ಪಂಜಾಬ್​ ಪರ ಗರಿಷ್ಠ ರನ್ ಸರದಾರರು!

ಹೌದು! ಪಂಜಾಬ್ ಪರ ಪ್ರಭ್ ಸಿಮ್ರಾನ್ ಸಿಂಗ್, 15 ಪಂದ್ಯಗಳಿಂದ 166.23ರ ಸ್ಟ್ರೈಕ್​ರೇಟ್​ನಲ್ಲಿ 517 ರನ್ ಗಳಿಸಿದ್ರೆ. ಶ್ರೇಯಸ್ ಅಯ್ಯರ್ 170.86ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 516 ರನ್ ಗಳಿಸಿದ್ದಾರೆ.

ಮುಂಬೈ ಪರ ಗರಿಷ್ಠ ರನ್ ಸರದಾರರು!

ಇನ್ನು ಮುಂಬೈ ಪರ ಸೂರ್ಯಕುಮಾರ್ ಯಾದವ್, 15 ಪಂದ್ಯಗಳಿಂದ 673 ರನ್ ಕಲೆ ಹಾಕಿದ್ದಾರೆ. 167.83ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ರೋಹಿತ್ ಶರ್ಮಾ 14 ಪಂದ್ಯಗಳಿಂದ 150.18ರ ಸ್ಟ್ರೈಕ್​ರೇಟ್​ನಲ್ಲಿ 410 ರನ್ ಕೊಳ್ಳೆ ಹೊಡೆದಿದ್ದಾರೆ. ಹೀಗಾಗಿ ಇವತ್ತಿನ ಕ್ವಾಲಿಫೈಯರ್​ ಮ್ಯಾಚ್​ನಲ್ಲಿ ಇವರು ಫೈರ್ ಪರ್ಫಾಮೆನ್ಸ್ ನೀಡಿದ್ರೆ. ಗೆಲ್ಲೋದು ಕಷ್ಟವೇನಲ್ಲ.

ಮುಂಬೈ ಬೆಂಕಿ ಬೌಲಿಂಗ್​​​.. ಎದೆಯೊಡ್ಡಿ ನಿಲ್ಲುತ್ತಾ ಪಂಜಾಬ್​​​​..?

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಬೆಂಕಿ, ಬಿರುಗಾಳಿ ಬೌಲರ್​ಗಳಿದ್ದಾರೆ. ಎಫೆಕ್ಟಿವ್ ಸ್ಪೆಲ್ ನಡೆಸಿ ಬ್ಯಾಟರ್​​ಗಳನ್ನ ಯಾವುದೇ ಕ್ಷಣದಲ್ಲಿ ಖೆಡ್ಡಾಗೆ ಕೆಡವಬಲ್ಲರು. ಟ್ರೆಂಟ್​​​ ಬೋಲ್ಟ್​​​, ಜಸ್​​ಪ್ರೀತ್ ಬೂಮ್ರಾ​​​, ಸ್ಪಿನ್ ಮ್ಯಾಜಿಷಿಯನ್​ ಮಿಚೆಲ್ ಸ್ಯಾಟ್ನರ್​​ ವಿಕೆಟ್​​ ಸರಮಾಲೆ ಕಟ್ಟಿ ಮೆರೆದಾಡ್ತಿದ್ದಾರೆ.

IPL 2025ರಲ್ಲಿ ಮುಂಬೈ ಇಂಡಿಯನ್ಸ್​ ಬೌಲರ್ಸ್​

ವೇಗಿ ಟ್ರೆಂಟ್ ಬೋಲ್ಟ್​, 15 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. 8.92ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಬೊಂಬಾಟ್ ಪರ್ಫಾಮೆನ್ಸ್ ನೀಡ್ತಿರುವ ಜಸ್​ಪ್ರೀತ್ ಬೂಮ್ರಾ 11 ಪಂದ್ಯಗಳಿಂದ 18 ವಿಕೆಟ್ ಬೇಟೆಯಾಡಿದ್ದಾರೆ. ಕೇವಲ 6.36ರ ಎಕಾನಮಿಯಲ್ಲಿ ರನ್ ನೀಡ್ತಿರುವ ಬೂಮ್ರಾ, ಮುಂಬೈ ಗೆಲುವಿನಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದಾರೆ. ಇನ್ನು ಮಿಡಲ್ ಓವರ್​​​ಗಳಲ್ಲಿ ರನ್ ಗಳಿಕೆಗೆ ಕಡಿವಾಣ ಹಾಕುವ ಮಿಚೆಲ್ ಸ್ಯಾಟ್ನರ್​, 12 ಪಂದ್ಯಗಳಿಂದ 10 ವಿಕೆಟ್ ಉರುಳಿಸಿದ್ದಾರೆ. ಆದ್ರೆ, ಪ್ರತಿ ಓವರ್​ಗೆ 7.94ರಂತೆ ರನ್ ನೀಡಿರುವ ಸ್ಯಾಟ್ನರ್, ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸ್ತಿದ್ದಾರೆ. ಹೀಗಾಗಿ ಇವತ್ತು ಇವರ ಮೇಲೆ ಪಂಜಾಬ್​ ಬ್ಯಾಟರ್​ಗಳು ಸಿಡಿದು ನಿಂತರಷ್ಟೇ ಗೆಲುವು ಸುಲಭ.

publive-image

ಒತ್ತಡ ಗೆದ್ದವರಿಗೆ ಫೈನಲ್.. ಮುಂಬೈ ಇಂಡಿಯನ್ಸ್​ ಫೇವರಿಟ್!

2ನೇ ಕ್ವಾಲಿಫೈಯರ್​ನಲ್ಲಿ ಬಲಿಷ್ಠರ ಕಾಳಗವೇ ನಡೀತಿದೆ. ಆದ್ರೆ, ಈ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲೋದು ನಿಜಕ್ಕೂ ಸುಲಭವಲ್ಲ. ಯಾಕಂದ್ರೆ, ಹೈವೋಲ್ಟೇಜ್ ಮ್ಯಾಚ್​ನಲ್ಲಿ ಫ್ರಷರ್ ಹ್ಯಾಂಡಲ್ ಮಾಡಬೇಕಾದ ಸವಾಲು ಇತ್ತಂಡಗಳ ಮುಂದಿದೆ. ಈ ವಿಚಾರದಲ್ಲಿ ಮುಂಬೈ ಇಂಡಿಯನ್ಸ್​ ನಿಜಕ್ಕೂ ಮುಂದಿದೆ. ಇದಕ್ಕೆ ಕಾರಣ ಪ್ಲೇ ಆಫ್​​​ನಂತಹ ಬಿಗ್ ಮ್ಯಾಚ್​ಗಳಲ್ಲಿ ಆಡಿದ ಅನುಭವ ಮುಂಬೈ ತಂಡಕ್ಕೆ ಮಾತ್ರವಲ್ಲ. ತಂಡದಲ್ಲಿರುವ ಆಟಗಾರರಿಗೂ ಇದ್ದೇ ಇದೆ. ಹೀಗಾಗಿ ಪ್ಲೇ ಆಫ್​ನಂತಹ ಮ್ಯಾಚ್​ಗಳಲ್ಲಿ ಮುಂಬೈ ಸುಲಭಕ್ಕೆ ಗೆಲ್ಲುತ್ತೆ. ಆದ್ರೆ, ಪಂಜಾಬ್ ಆಗಲ್ಲ. ತಂಡದಲ್ಲಿರುವ ಬಹುತೇಕರು ಯುವಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಪ್ಲೇ ಆಫ್ ಆಡ್ತಿದ್ದಾರೆ. ಹೀಗಾಗಿ ಈ ಹೈಫ್ರಷರ್​​ನ ಮೆಟ್ಟಿ ನಿಂತರಷ್ಟೇ ಗೆಲುವು ಸಾಧ್ಯ.

ಇಂದಿನ 2ನೇ ಕ್ವಾಲಿಫೈಯರ್​ ಪಂದ್ಯ ಬ್ಯಾಟಿಂಗ್, ಬೌಲಿಂಗ್ ಕದನವಾಗಿ ಮಾತ್ರವಲ್ಲದೆ. ಸ್ಮಾರ್ಟ್​ ಆ್ಯಂಡ್ ಲೆಜೆಂಡರಿ ಕೋಚ್​ಗಳ ಬ್ಯಾಟಲ್ ಎಂದೇ ಕರೆಯಲ್ಪಡ್ತಿದೆ. ಹೀಗಾಗಿ ಇವತ್ತಿನ ಕ್ವಾಲಿಫೈಯರ್​ನ ಫೈರಿ ವಾರ್​ನಲ್ಲಿ ಗೆಲ್ಲೋದ್ಯಾರು, ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ, ಯಾರು ಫೈನಲ್ ಟಿಕೆಟ್​​ ಗಿಟ್ಟಿಸಿಕೊಳ್ತಾರೆ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment