/newsfirstlive-kannada/media/post_attachments/wp-content/uploads/2025/06/PBKS-vs-MI.jpg)
IPL ಸೀಸನ್ 18ರ ಕ್ವಾಲಿಫೈಯರ್ 2ರ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇವತ್ತಿನ ಪಂದ್ಯದಲ್ಲಿ ಗೆದ್ದವರು ಫಿನಾಲೆಗೆ ಎಂಟ್ರಿಯಾಗುತ್ತಾರೆ. ಜೂನ್ 3ರಂದು RCB ವಿರುದ್ಧ ಮುಂಬೈ ಇಂಡಿಯನ್ಸಾ ಅಥವಾ ಪಂಜಾಬ್ ಕಿಂಗ್ಸ್ ಅನ್ನೋದು ಇವತ್ತು ನಿರ್ಧಾರವಾಗುತ್ತಿದೆ. ಇಂದಿನ ಐಪಿಎಲ್ ಪಂದ್ಯ ಮುಂಬೈ ಹಾಗೂ ಪಂಜಾಬ್‌ಗೆ ಡು ಆರ್ ಡೈ ಪಂದ್ಯವಾಗಿದೆ.
PBKS vs MI ಕ್ವಾಲಿಫೈಯರ್ 2ರ ಪಂದ್ಯಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಆದರೆ ಇಂದು ಗುಜರಾತ್‌ನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆ 5 ಗಂಟೆಯ ಬಳಿಕ ಮಳೆಯಾಗುವ ಮುನ್ಸೂಚನೆ ಇದೆ. ಒಂದು ವೇಳೆ ಮಳೆಯಿಂದ ಕ್ವಾಲಿಫೈಯರ್ 2 ಪಂದ್ಯಕ್ಕೆ ಅಡ್ಡಿಯಾದ್ರೆ ಏನಾಗಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪಂದ್ಯ ರದ್ದಾದ್ರೆ RCBಗೆ ಅದೃಷ್ಟ ಎಂದೇ ಹೇಳಬಹುದು. ಯಾಕಂದ್ರೆ ಇವತ್ತಿನ ಪಂದ್ಯ ರದ್ದಾದ್ರೆ ಐಪಿಎಲ್ ಟೇಬಲ್ ಟಾಪರ್ ಆಗಿರೋ ಪಂಜಾಬ್ ಕಿಂಗ್ಸ್ ನೇರವಾಗಿ ಫೈನಲ್ ತಲುಪಲಿದೆ. ಜೂನ್ 3ರ ಫಿನಾಲೆಯಲ್ಲಿ RCB ವಿರುದ್ಧ ಪಂಜಾಬ್ ಕಿಂಗ್ಸ್ ಸೆಣಸಾಡಲಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಖುಷಿ ಸುದ್ದಿ.. ಈ ಸಲ ಟ್ರೋಫಿ ಗೆಲ್ಲೋದಕ್ಕೆ ಇದೆ ದೊಡ್ಡ ಲಕ್!
ಹವಾಮಾನ ಇಲಾಖೆಯ ವರದಿ ಪ್ರಕಾರ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಮಳೆಯಾಗುವ ಸಣ್ಣ ಸಾಧ್ಯತೆಗಳಿವೆ. ಮಳೆಯಿಂದ ಈ ಪಂದ್ಯಕ್ಕೆ ಅಡ್ಡಿಯಾದರು 2 ಗಂಟೆಗಳ ಹೆಚ್ಚು ಕಾಲಾವಧಿ ನೀಡಲಾಗುತ್ತದೆ. ಅಂದ್ರೆ ಐಪಿಎಲ್ ಪ್ಲೇ ಆಫ್ ಪಂದ್ಯ ಮಧ್ಯರಾತ್ರಿವರೆಗೂ ನಡೆಸುವ ಅವಕಾಶಗಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ