ಕ್ವಾಲಿಫೈಯರ್-1 ಮ್ಯಾಚ್.. ಇವತ್ತು ಆರ್​ಸಿಬಿಗೆ ಕ್ಯಾಪ್ಟನ್ ಯಾರು..?

author-image
Ganesh
Updated On
ಕ್ವಾಲಿಫೈಯರ್-1 ಮ್ಯಾಚ್.. ಇವತ್ತು ಆರ್​ಸಿಬಿಗೆ ಕ್ಯಾಪ್ಟನ್ ಯಾರು..?
Advertisment
  • ಇಂದು ಐಪಿಎಲ್ ಕ್ವಾಲಿಫೈಯರ್ ಪಂದ್ಯ
  • ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ
  • ಗೊಂದಲದಲ್ಲಿ ಆರ್​ಸಿಬಿ ಅಭಿಮಾನಿಗಳು

ಪಂಜಾಬ್​ನ ಚಂಡೀಗಢದ ಮುಲ್ಲನ್ಪುರ ಸ್ಟೇಡಿಯಂನಲ್ಲಿ ಇವತ್ತು ಮೊದಲ ಕ್ವಾಲಿಫೈಯರ್​ ಮ್ಯಾಚ್ ನಡೆಯಲಿದೆ. ಪಂಜಾಬ್ ಕಿಂಗ್ಸ್ ಮತ್ತು ಆರ್​ಸಿಬಿ ನಡುವಿನ ಸೆಣಸಾಟದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ.

ಸೋತ ತಂಡಕ್ಕೆ ಇನ್ನೊಂದು ಅವಕಾಶ ಸಿಗಲಿದೆ. ಆರ್​ಸಿಬಿ ಫೈನಲ್​ಗೆ ಹೋಗಬೇಕು ಅಂದರೆ ಇಂದು ಗೆಲ್ಲಲೇಬೇಕು. ಸದ್ಯ ಆರ್​​ಸಿಬಿ ಅಭಿಮಾನಿಗಳು ಸಣ್ಣ ಗೊಂದಲದಲ್ಲಿ ಇದ್ದಾರೆ. ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಯಾರು ಅನ್ನೋದು.

ಇದನ್ನೂ ಓದಿ: RCB ಗೆಲುವಿನ ಹಿಂದೆ 6 ಸೂತ್ರಗಳು ಕೆಲಸ.. ಇಂದಿನ ಹೋರಾಟದ ಸ್ಟ್ರೆಂಥ್ ಕೂಡ ಅದೇ..!

ಬೆರಳಿಗೆ ಗಾಯ ಹಿನ್ನೆಲೆಯಲ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್ ಕಳೆದ ಎರಡು ಪಂದ್ಯಗಳನ್ನು ಲೀಡ್ ಮಾಡಲಿಲ್ಲ. ಪಾಟೀದಾರ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಎರಡು ಮ್ಯಾಚ್​ಗಳನ್ನ ಮುನ್ನಡೆಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ಹಾಗೂ ಎಲ್​ಎಸ್​ಜಿ ವಿರುದ್ಧದ ಪಂದ್ಯಕ್ಕೆ ಜಿತೇಶ್ ಶರ್ಮಾ ಕ್ಯಾಪ್ಟನ್ ಆಗಿದ್ದರು. ಜಿತೇಶ್ ನಾಯಕತ್ವದಲ್ಲಿ ಎಲ್​​ಎಸ್​ಜಿ ವಿರುದ್ಧ ಗೆದ್ದು, ಹೈದರಾಬಾದ್ ವಿರುದ್ಧ ಸೋಲನ್ನು ಕಂಡಿದೆ.

ರಜತ್ ಪಾಟೀದಾರ್​ ಫಿಟ್ನೆಸ್​ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಇವತ್ತು ಆರ್​ಸಿಬಿಗೆ ಯಾರು ನಾಯಕರಾಗಿರುತ್ತಾರೆ ಎಂಬ ಪ್ರಶ್ನೆ ಇದೆ. ಕೆಲವು ವರದಿಗಳ ಪ್ರಕಾರ, ರಜತ್ ಪಾಟೀದಾರ್​, ತಂಡವನ್ನು ಮುನ್ನಡೆಸಲು ಮೈದಾನಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರವನ್ನು ಆರ್​ಸಿಬಿ ಮ್ಯಾನೇಜ್ಮೆಂಟ್ ಸಸ್ಪೆನ್ಸ್ ಆಗಿಟ್ಟಿರುವ ಹಿನ್ನೆಲೆಯಲ್ಲಿ ಸಂಜೆವರೆಗೆ ಕಾದು ನೋಡಬೇಕಿದೆ.

ಇದನ್ನೂ ಓದಿ: ಆರ್​ಸಿಬಿಗೆ ಐದು ವೀಕ್ನೆಸ್.. ಕೊಂಚ ಯಾಮಾರಿದ್ರೂ ಗೆಲುವು ಕಷ್ಟ, ಇರಲಿ ಎಚ್ಚರಿಕೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment