ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು ಕೇಸ್..

author-image
Veena Gangani
Updated On
ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ‘I LOVE YOU’ ಎಂದ ಪಿಡಿಓ.. ನಾಲ್ವರ ಮೇಲೆ ಬಿತ್ತು ಕೇಸ್..
Advertisment
  • ರಾಶ್ಚೆರುವು ಗ್ರಾಮ ಪಂಚಾಯಿತಿ ಪಿಡಿಓ ಅಶೋಕ್​ರಿಂದ ಅಶ್ಲೀಲ ಮೆಸೇಜ್
  • ಖಾಲಿ ಚೆಕ್​ಗೆ ಸಹಿ ಹಾಕುವಂತೆ ಅಧ್ಯಕ್ಷೆ ರೇವತಿಗೆ ಬೆದರಿಕೆ ಆರೋಪ
  • ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೇಸ್​ ದಾಖಲು

ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ I LOVE YOU ಎಂದು ಅಶ್ಲೀಲ ಮೆಸೇಜ್​ ಕಳಿಸಿರೋ ಆರೋಪ ಕೇಳಿ ಬಂದಿದೆ. ರಾಶ್ಚೆರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿಗೆ ಪಿಡಿಓ ಅಶೋಕ್ ಎಂಬುವವರು I LOVE YOU ಎಂದು ಮೆಸೇಜ್​ ಕಳುಹಿಸಿದ್ದಾರೆ.

publive-image

ಈಗಾಗಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆಗೆ ಮದುವೆಯಾಗಿದೆ. ಅಲ್ಲದೇ ಪಿಡಿಓ ಆಗಿರೋ ಅಶೋಕ್​ಗೂ ಮದುವೆಯಾಗಿದೆ. ಅಲ್ಲದೇ ಗ್ರಾ. ಪಂ. ಅಧ್ಯಕ್ಷೆ ರೇವತಿಗೆ ಅಶ್ಲೀಲ ಮೆಸೇಜ್ ಹಾಗೂ ಖಾಲಿ ಚೆಕ್​ಗಳಿಗೆ ಸಹಿ ಹಾಕುವಂತೆ ಅಶೋಕ್, ಮಾಜಿ ಅಧ್ಯಕ್ಷೆ ನೀಲಾವತಿ ಪತಿ ಎ ಎನ್ ಬಾಬು ರೆಡ್ಡಿ, ಹಾಲಿ ಸದಸ್ಯ ನಾಗೇಶ್ ಹಾಗೂ ಭಾನು ಪ್ರಕಾಶ್​ ಎಂಬುವವರಿಂದ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ ಕೇಳಿ ಬಂದಿದೆ.

publive-image

ಹೀಗಾಗಿ ನಾಲ್ವರ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ದೂರು ನೀಡಿದ್ದಾರೆ. ಈ ಸಂಬಂಧ ಚೇಳೂರು ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment