Advertisment

ಬೆಂಗಳೂರು ಮಂದಿಗೆ ಕೊನೆಗೂ ಗುಡ್​ ನ್ಯೂಸ್​​.. ವಾಹನ ಸವಾರರು ಓದಲೇಬೇಕಾದ ಸ್ಟೋರಿ ಇದು..!

author-image
Bheemappa
Updated On
ಬೆಂಗಳೂರು ಮಂದಿಗೆ ಕೊನೆಗೂ ಗುಡ್​ ನ್ಯೂಸ್​​.. ವಾಹನ ಸವಾರರು ಓದಲೇಬೇಕಾದ ಸ್ಟೋರಿ ಇದು..!
Advertisment
  • ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ರೀ ಓಪನ್
  • ಈ ದಿನ ಮಾತ್ರ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ
  • ವಾರದಲ್ಲಿ 1 ದಿನ ಬಿಟ್ಟು ಉಳಿದ ಆರು ದಿನ ಸಂಚಾರಕ್ಕೆ ಅವಕಾಶ

2 ವರ್ಷಗಳಿಂದ ಭಾರೀ ವಾಹನಗಳಿಗೆ ಕ್ಲೋಸ್ ಆಗಿದ್ದ ಸಿಲಿಕಾನ್ ಸಿಟಿಯ ಪೀಣ್ಯ ಮೇಲ್ಸೇತುವೆ ಇಂದಿನಿಂದ ಸಂಚಾರ ಮುಕ್ತವಾಗ್ತಾಯಿದೆ. ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ವಾಹನಗಳ ಓಡಾಟಕ್ಕೆ ಮುಕ್ತ ಆಗ್ತಾಯಿದ್ದು, ಟ್ರಾಫಿಕ್​ ಕಿರಿಕಿರಿಗೆ ಬ್ರೇಕ್​ ಬೀಳಲಿದೆ.

Advertisment

ಇಂದಿನಿಂದ ಪೀಣ್ಯ ಫ್ಲೈ ಓವರ್‌ ವಾಹನ ಸಂಚಾರಕ್ಕೆ ಓಪನ್

2 ವರ್ಷಗಳಿಂದ ಭಾರೀ ವಾಹನಗಳಿಗೆ ಕ್ಲೋಸ್ ಆಗಿದ್ದ ಬೆಂಗಳೂರು ನಗರದ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಇಂದಿನಿಂದ ಎಲ್ಲ ಮಾದರಿ ವಾಹನಗಳ ಸಂಚಾರಕ್ಕೆ ಮುಕ್ತವಾಗ್ತಿದೆ. ಬೆಂಗಳೂರಿನಿಂದ 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು- ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗ್ತಿದೆ.

ಇದನ್ನೂ ಓದಿ:ಒನ್​ ನೇಷನ್.. ಒನ್ ರೇಟ್.. ಇನ್ಮುಂದೆ ಎಲ್ಲಾ ‘ಚಿನ್ನ’ಪ್ರಿಯರಿಗೂ ಸಮಾನ ಬೆಲೆ..!

publive-image

ಇಂದಿನಿಂದ ಪೀಣ್ಯ ಮೇಲ್ಸೇತುವೆ ಓಪನ್!

  • 2 ವರ್ಷಗಳಿಂದ ಭಾರೀ ವಾಹನಗಳಿಗೆ ಕ್ಲೋಸ್ ಆಗಿದ್ದ ಮೇಲ್ಸೇತುವೆ
  • 2 ಪಿಲ್ಲರ್‌ಗಳಲ್ಲಿ ದೋಷ ಹಿನ್ನೆಲೆ ಭಾರೀ ವಾಹನಗಳಿಗೆ ನಿರ್ಬಂಧ
  • ಇಂದಿನಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಎಲ್ಲ ವಾಹನಕ್ಕೆ ಅವಕಾಶ
  • ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಫ್ಲೈ ಓವರ್
  • ಬಸ್, ಲಾರಿ-ಟ್ರಕ್​ಗಳ ಸಂಚಾರಕ್ಕೆ ಇಂದಿನಿಂದ ಮುಕ್ತ ಅವಕಾಶ
  • ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಸಿರು ನಿಶಾನೆ
  • 2021 ಡಿಸೆಂಬರ್​​ನಿಂದಲೂ ಪೀಣ್ಯ ಮೇಲ್ಸೇತುವೆಯಲ್ಲಿ ಸಮಸ್ಯೆ
  • ವಾರದಲ್ಲಿ 1 ದಿನ ಬಿಟ್ಟು ಉಳಿದ 6 ದಿನದಲ್ಲಿ ಸಂಚಾರಕ್ಕೆ ಅವಕಾಶ
  • ಶುಕ್ರವಾರ ಬೆ.6 ರಿಂದ ಶನಿವಾರ ಬೆ. 6 ಗಂಟೆವರೆಗೂ ಅವಕಾಶವಿಲ್ಲ
Advertisment

ಇದನ್ನೂ ಓದಿ: ಮೆಟ್ಟೂರು‌ ಡ್ಯಾಂನಿಂದ ಕಾವೇರಿಗೆ ನೀರು.. ಕೃಷ್ಣೆಯಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಣೆ; ತುಂಗಭದ್ರೆಯಿಂದ ಕಂಪ್ಲಿಗೆ ಕಂಟಕ..!

ಇಂದಿನಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿ ವಾಹನ ಸಂಚಾರ ಆರಂಭವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಹಲವು ಸೂಚನೆ ನೀಡಿದೆ. ಇನ್ಮುಂದೆ ಬೆಳಗ್ಗೆ, ರಾತ್ರಿ ನಗರ ಪ್ರವೇಶ ಮತ್ತು ನಿರ್ಗಮನಕ್ಕೆ ಮೇಲ್ಸೇತುವೆ ಅನೂಕೂಲವಾಗಲಿದೆ. ಇದರಿಂದ ಟ್ರಾಫಿಕ್ ಸಮಸ್ಯೆಗೂ ಮುಕ್ತಿ ಸಿಗಲಿದೆ. ಪ್ರತಿ ಶುಕ್ರವಾರ ಫ್ಲೈಓವರ್‌ನ ನಿರ್ವಹಣೆ, ಪರಿಶೀಲನೆ ಆಗಲಿದ್ದು, ಆ ದಿನ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment