/newsfirstlive-kannada/media/post_attachments/wp-content/uploads/2025/05/PEJAVARA-SHREE-1.jpg)
ಮಂಗಳೂರಲ್ಲಿ ನಡೆದ ಸುಹಾಸ್ ಶೆಟ್ಟಿ ಪ್ರಕರಣದ ಕೊಪ್ಪಳದ ಗಂಗಾವತಿಯಲ್ಲಿ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿದ್ದಾರೆ. ಜನ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ವಿಶ್ವಾಸ ಕಳೆದುಕೊಂಡು ಪರಸ್ಪರ ಬಡೆದಾಡುಕೊಳ್ಳುತ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ನ್ಯಾಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡಿರುವುದು ಈ ಗಲಭೆಗಳಿಗೆ ಕಾರಣ. ಎಲ್ಲೋ ಒಂದು ಕಡೆ ಗಲಾಟೆ ನಡೆಯುತ್ತೆ, ಅದಕ್ಕೆ ಪ್ರತೀಕಾರವಾಗಿ ಇನ್ನೊಂದುಕಡೆ ನಡೆಯುತ್ತೆ. ಇದು ಸಾಲು ಸಾಲಾಗಿ ನಡೆಯುತ್ತೆಲೇ ಇರುತ್ತೆ. ಇದನ್ನು ಸಾಮಾನ್ಯ ಮಾತಿನಲ್ಲಿ ಅರಾಜಕತೆ ಎನ್ನುತ್ತಾರೆ.
ಇದನ್ನೂ ಓದಿ: ತನ್ನ ಪ್ರಜೆಗಳನ್ನೇ ಸ್ವೀಕರಿಸದ ಪಾಕ್, ಗಡಿಯಲ್ಲಿ ಕಣ್ಣೀರು ಇಡುತ್ತ ಕೂತ ನಾಗರಿಕರು..!
ಮಂಗಳೂರು ಪ್ರಕರಣ, ನಿವೃತ್ತ ಪೊಲೀಸ್ ಮಹಾನಿರ್ದೇಶಕರ ಪ್ರಕರಣ, ಹುಬ್ಬಳ್ಳಿಯಲ್ಲಿ ಪುಟ್ಟ ಮಗುವಿನ ಮೇಲೆ ನಡೆದ ಪ್ರಕರಣಗಳು ತುಂಬಾ ನೋವಿನ ಸಂಗತಿಗಳು. ವಿಳಂಬ ನ್ಯಾಯದಾನ ನೀತಿಯಿಂದಾಗಿ ಜನ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಹಾಗಾಗಿ ಸಮಗ್ರವಾದ ಬದಲಾವಣೆ ಕಾನೂನಿನಲ್ಲಿ ಆಗಬೇಕಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾರಂಗ ಸೇರಿದಂತೆ ಸಮಗ್ರ ಚಿಂತನೆ ನಡೆಸಬೇಕಾಗಿದೆ. ನಮ್ಮ ಮುಂದಿನ ದಿನಗಳು ನೆಮ್ಮದಿಯಿಂದ ಜೀವಿಸಲು ಇವುಗಳ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಇದನ್ನೂ ಓದಿ: 2017 ರಿಂದ 2025 ವರೆಗೆ.. ಹೇಗಿದೆ ಕರಾವಳಿಯಲ್ಲಿ ಪ್ರತೀಕಾರದ ಕೊಲೆಗಳು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ