ನಂಬಿದ್ರೆ ನಂಬಿ ಬಿಟ್ರೆ ಬಿಡಿ: 21 ವರ್ಷ ಯುವಕನ ಶ್ವಾಸಕೋಶದಲ್ಲೇ ಸಿಲುಕಿದ್ದ ಪೆನ್ ಕ್ಯಾಪ್; ಆಮೇಲೇನಾಯ್ತು?

author-image
Ganesh Nachikethu
Updated On
ನಂಬಿದ್ರೆ ನಂಬಿ ಬಿಟ್ರೆ ಬಿಡಿ: 21 ವರ್ಷ ಯುವಕನ ಶ್ವಾಸಕೋಶದಲ್ಲೇ ಸಿಲುಕಿದ್ದ ಪೆನ್ ಕ್ಯಾಪ್; ಆಮೇಲೇನಾಯ್ತು?
Advertisment
  • ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಅಪರೂಪದ ಘಟನೆ!
  • ಕೊಂಡಾಪುರದ KIMS ಆಸ್ಪತ್ರೆ ವೈದ್ಯರು ಅಚ್ಚರಿಯ ಶಸ್ತ್ರ ಚಿಕಿತ್ಸೆ
  • ಇಂದು ಅಪರೂಪದ ಘಟನೆಗೆ ಸಾಕ್ಷಿಯಾದ ವೈದ್ಯಕೀಯ ಲೋಕ

ಹೈದರಾಬಾದ್​​: ಇಂದು ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಅಪರೂಪದ ಘಟನೆ ನಡೆದಿದೆ. ಇಲ್ಲಿನ ಕೊಂಡಾಪುರದ KIMS ಆಸ್ಪತ್ರೆ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವೈದ್ಯಕೀಯ ಲೋಕವೇ ಅಚ್ಚರಿಪಟ್ಟಿದೆ. ಬರೋಬ್ಬರಿ 21 ವರ್ಷಗಳ ನಂತರ ಯುವಕನ ಶ್ವಾಸಕೋಶದಲ್ಲಿ ಸಿಲುಕಿದ್ದ ಪ್ಲಾಸ್ಟಿಕ್ ಪೆನ್ ಕ್ಯಾಪ್ ಹೊರಗೆ ತೆಗೆದು ದಾಖಲೆ ಬರೆದಿದ್ದಾರೆ.

ಪೆನ್ ಕ್ಯಾಪ್ ಪತ್ತೆ ಆಗಿದ್ದು ಹೇಗೆ?

ಕರೀಂ ನಗರದ 26 ವರ್ಷದ ಯುವಕ. ಈತ ಕಳೆದ ಒಂದು ತಿಂಗಳಿನಿಂದ ತೂಕ ಇಳಿಕೆ ಹಾಗೂ ಅತಿಯಾದ ಕೆಮ್ಮುವಿನಿಂದ ಬಳಲುತ್ತಿದ್ದ. ಅಷ್ಟೇ ಅಲ್ಲ ಕೇವಲ 10 ದಿನಗಳಲ್ಲಿ ಈ ಸಮಸ್ಯೆ ಸಾಕಷ್ಟು ತೀವ್ರವಾಗಿತ್ತು. ಇದರ ಪರಿಣಾಮ ನಿದ್ದೆ ಕೂಡ ಮಾಡಲು ಆಗುತ್ತಿರಲಿಲ್ಲ. ಆರೋಗ್ಯ ಹದಗೆಡುತ್ತದಂತೆ ವೈದ್ಯರ ಬಳಿ ಹೋದಾಗ CT ಸ್ಕ್ಯಾನ್ ಮಾಡಿದ್ರು. CT ಸ್ಕ್ಯಾನ್ ಜತೆಗೆ ಇವರನ್ನು KIMS ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಮತ್ತೊಂದು ಸ್ಕ್ಯಾನ್ ಮಾಡಿದಾಗ ಶ್ವಾಸಕೋಶದಲ್ಲಿ ಪ್ಲಾಸ್ಟಿಕ್ ಪೆನ್ನಿನ ಕ್ಯಾಪ್ ಸಿಲುಕಿರುವುದು ಕಂಡುಬಂದಿತ್ತು.

ಶ್ವಾಸಕೋಶದ ಭಾಗದಲ್ಲಿ ಊತ ಕಂಡು ಬಂದಿದೆ. ಇದು ಕೆಮ್ಮುವಿಗೆ ಕಾರಣ ಇರಬಹುದು ಎಂದು ವೈದ್ಯರು ಭಾವಿಸಿದ್ದರು. ಪರೀಕ್ಷೆ ನಡೆಸಿದಾಗ ಶ್ವಾಸಕೋಶದ ಒಳಗಡೆ ಪೆನ್ನಿನ ಕ್ಯಾಪ್ ಸಿಲುಕಿರುವುದು ಗೊತ್ತಾಗಿದೆ. ಇವರು ಐದು ವರ್ಷ ಇದ್ದಾಗ ಪೆನ್ನಿನ ಕ್ಯಾಪ್ ನುಂಗಿರುವುದು ಧೃಡವಾಗಿದೆ.

ಮೂರು ಗಂಟೆ ಶಸ್ತ್ರ ಚಿಕಿತ್ಸೆ

ಇನ್ನು, ಸುಮಾರು 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಪೆನ್ ಕ್ಯಾಪ್ ಹೊರಗೆ ತೆಗೆಯಲಾಗಿದೆ. 21 ವರ್ಷಗಳಿಂದ ಪೆನ್ನಿನ ಕ್ಯಾಪ್ ಒಳಗಡೆ ಇದ್ದರಿಂದ ಶ್ವಾಸಕೋಶ ಹಾನಿಯಾಗಿದೆ. ಚಿಕಿತ್ಸೆ ಮೂಲಕ ದೇಹದ ಭಾಗಕ್ಕೆ ಯಾವುದೇ ತೊಂದರೆ ಆಗದಂತೆ ನಿಗಾ ವಹಿಸಲಾಗಿದೆ ಎಂದರು ವೈದ್ಯರು.

ಇದನ್ನೂ ಓದಿ:ಟೀಮ್​ ಇಂಡಿಯಾ ಆಟಗಾರರಿಗೆ ಬಿಸಿಸಿಐನಿಂದ ಭರ್ಜರಿ ಗುಡ್​ನ್ಯೂಸ್​; ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment