/newsfirstlive-kannada/media/post_attachments/wp-content/uploads/2024/10/Police-Dog-1-Crore-money-Seize.jpg)
ಅಹಮದಾಬಾದ್: ಗುಜರಾತ್ನ 4 ವರ್ಷದ ಡಾಬರ್ಮ್ಯಾನ್ ತಳಿಯ ಪೆನ್ನಿ ನಾಯಿ ಬಹುದೊಡ್ಡ ರಾಬರಿ ಕೇಸನ್ನು ಭೇದಿಸಿದೆ. ದೋಕ್ಲಾ ತಾಲೂಕಿನ ಸರಗ್ವಾಲ ಗ್ರಾಮದ ರೈತ ಉದಯ್ ಸಿಂಗ್ ಸೋಲಂಕಿ ಮನೆಯಲ್ಲಿ ದರೋಡೆ ಆಗಿತ್ತು. ಯಾವುದೇ ಬ್ಯಾಂಕ್ ಅಕೌಂಟ್ ಹೊಂದಿರದ ಸೋಲಕಿ ಭೂಮಿ ಮಾರುವ ಒಪ್ಪಂದದ ಮೇರೆಗೆ ಮುಂಗಡ ಹಣವಾಗಿ 1.07 ಕೋಟಿ ಹಣವನ್ನು ಪಡೆದುಕೊಂಡಿದ್ದ.
ಗೋಧಿ ಡ್ರಮ್ನಲ್ಲಿಟ್ಟಿದ್ದ ₹1.07 ಕೋಟಿ ಹಣ
ಉದಯ್ ಸಿಂಗ್ ಸೋಲಂಕಿ ಮನೆಯಲ್ಲಿದ್ದ ಗೋಧಿ ಡ್ರಮ್ನಲ್ಲಿ ₹1.07 ಕೋಟಿ ಹಣವನ್ನು ಭಧ್ರವಾಗಿ ಇಟ್ಟಿದ್ದ. ಅಕ್ಟೋಬರ್ 12ರಂದು ಯಾರೋ ಬೀಗ ಒಡೆದು ಮನೆಗೆ ನುಗ್ಗಿ ಡ್ರಮ್ನಲ್ಲಿದ್ದ ಅಷ್ಟೂ ಹಣವನ್ನು ದೋಚಿದ್ದರು. ಕೂಡಲೇ ಅಹಮದಾಬಾದ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉದಯ್ ಸಿಂಗ್ ದೂರು ಸಲ್ಲಿಸಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಪೊಲೀಸರು 2 ಟೀಮ್ ಮಾಡಿ ಶೋಧ ಕಾರ್ಯ ನಡೆದಿದ್ದರು.
30 ಶಂಕಿತರನ್ನು ತೀವ್ರವಾಗಿ ವಿಚಾರಣೆ ಮಾಡಲಾಗಿತ್ತು.
ಇದನ್ನೂ ಓದಿ: BBK11: ‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’ ಎಂಬ ಬೆಂಕಿ; ಹೆತ್ತ ತಾಯಿಗೆ ಮಾಡಿದ ಅವಮಾನ ಎಂದು ಚೈತ್ರಾಗೆ ಕಿಚ್ಚ ಕ್ಲಾಸ್!
ಮೊದಲಿಗೆ ಪೊಲೀಸರು ವೃತ್ತಿಪರ ದರೋಡೆಕೋರರ ಮೇಲೆ ಕಣ್ಣಿಟ್ಟಿದ್ದರು. ಇಂಥಾ ಕೃತ್ಯಗಳಲ್ಲಿ ಭಾಗಿಯಾಗಿ ಕನಿಷ್ಠ 3ಕ್ಕಿಂತ ಹೆಚ್ಚು ಚಾರ್ಜ್ಶೀಟ್ ಹೊಂದಿರೋ ಸುಮಾರು 30 ಜನರನ್ನು ಪೊಲೀಸರು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಇವರ್ಯಾರೂ ಸಹ ಈ ಕೃತ್ಯವನ್ನ ಮಾಡಿಲ್ಲ ಅನ್ನೋದು ಒಂದೆರಡು ದಿನಗಳಲ್ಲೇ ಪೊಲೀಸರಿಗೆ ಗೊತ್ತಾಯ್ತು. ಕೂಡಲೇ ಅಖಾಡಕ್ಕೆ 4 ವರ್ಷದ ಪೆನ್ನಿಯನ್ನು ಇಳಿಸಿದ್ದಾರೆ.
4 ವರ್ಷದ ಡಾಬರ್ಮ್ಯಾನ್ ತಳಿಯ ಜಾಣ ಪೆನ್ನಿ ಗೇಮ್!
ಒಂಬತ್ತು ಮಂದಿ ಪೊಲೀಸರೊಂದಿಗೆ ದರೋಡೆ ಆದ ಜಾಗಕ್ಕೆ ಬಂದ ಪೆನ್ನಿ ಕೆಲವೇ ನಿಮಿಷಗಳಲ್ಲೇ ದರೋಡೆ ಕೇಸ್ ಭೇದಿಸಿತ್ತು. ಉದಯ್ ಸಿಂಗ್ ಮನೆಯಿಂದ 50 ಮೀಟರ್ ದೂರದಲ್ಲೇ ಬಂದು ನಿಂತ ಪೆನ್ನಿ ಅಚ್ಚರಿ ಮೂಡಿಸಿತ್ತು. ಉದಯ್ ಸಿಂಗ್ ಸೋಲಂಕಿಯ ಸ್ನೇಹಿತನೇ ಆಗಿದ್ದ ಬುದ್ಧ ಸೋಲಂಕಿ ಹಾಗೂ ವಿಕ್ರಮ್ ಸಿಂಗ್ ₹1.07 ಕೋಟಿ ಹಣವನ್ನು ದೋಚಿದ್ದರು.
ಇದನ್ನೂ ಓದಿ: 7 ದಿನ ಜಪ ಮಾಡಿದ ಮನೆಯಲ್ಲಿ ಘೋರ ದುರಂತ.. 2 ಬಲಿ, ಇಬ್ಬರ ಸ್ಥಿತಿ ಗಂಭೀರ, ಇನ್ನಿಬ್ಬರಿಗೆ ಹುಚ್ಚು!
ಪೊಲೀಸರು ತೀವ್ರವಾಗಿ ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಬ್ಯಾಗ್ ತಂದು ಕೊಟ್ಟಿದ್ದಾರೆ. ಸದ್ಯ, ರೈತ ಉದಯ್ ಸಿಂಗ್ ಮನೆಯಿಂದ ಕದ್ದಿದ್ದ ಹಣದಲ್ಲಿ 53 ಲಕ್ಷವನ್ನು ಬುದ್ಧ ಸೋಲಂಕಿ ವಾಪಸ್ ನೀಡಿದ್ದಾರೆ. ಇನ್ನುಳಿದ ಹಣದ ಬಗ್ಗೆ ಪೊಲೀಸರು ಬಾಯಿ ಬಿಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ