newsfirstkannada.com

ಕಳೆದ 3 ತಿಂಗಳಿಂದ ವೃದ್ಧರು, ವಿಧವೆಯವರಿಗೆ ಸಿಗ್ತಿಲ್ಲ ಪೆನ್ಶನ್; ಅಸಲಿ ಕಾರಣವೇನು..?

Share :

Published April 4, 2024 at 6:03am

    ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರ್ಕಾರ ವೃದ್ಧರು, ವಿಧವೆಯರು ಕಂಗಾಲು

    70 ವರ್ಷದ ವೃದ್ಧೆಗೆ 3 ತಿಂಗಳಿಂದ ಪಿಂಚಣಿ ಬಂದಿಲ್ಲ ಏಕೆ?

    ಪಿಂಚಣಿ ನಂಬಿಕೊಂಡು ಇರೀರ ಜೀವನ ಸಾಗೋದು ಹೇಗೆ!

ಸರ್ಕಾರ ವೃದ್ಧರು, ವಿಧವೆಯರಿಗೆ ಅನುಕೂಲ ಆಗಲಿ ಅಂತ ಪಿಂಚಣಿ ಸೌಲಭ್ಯ ಒದಗಿಸಿದೆ. ಆದ್ರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿರು ಬಿಸಿಲಿನಲ್ಲಿ ಜನ ಪಿಂಚಣಿಗಾಗಿ ಪರದಾಡುವಂತಾಗಿದೆ. ದಿನ ನಿತ್ಯದ ಅಗತ್ಯಗಳಿಗೆ ಪಿಂಚಣಿ ಹಣವನ್ನೇ ನಂಬಿರುವ ಬಡಪಾಯಿಗಳು ಹಣ ಸಿಗದೇ ಅಕ್ಷರಶಃ ಕಂಗಲಾಗಿದ್ದಾರೆ.

ಇದನ್ನೂ ಓದಿ: ಯುಗಾದಿ ಮಟನ್ ಚೀಟಿ ಹೆಸರಲ್ಲಿ ಮೋಸ.. ಆಸಾಮಿ ಗುಡ್ಡೆ ಹಾಕಿದ್ದು ಒಂದು, ಎರಡು ಕೋಟಿಯಲ್ಲ; ಎಷ್ಟು?

ಸಾಲುಗಟ್ಟಿ ನಿಂತಿರೋ ಮಹಿಳೆಯರು, ನೆಲದ ಮೇಲೆ ಕೂತು ತಮ್ಮ ಸರದಿ ಯಾವಾಗ ಬರೋತ್ತು ಅಂತ ಕಾಯ್ತಿರೋ ಬಡ ಜೀವಗಳು. ಪಾಪ ಬಿರು ಬಿಸಿಲಿನಲ್ಲಿ ಈ ಹಿರಿ ಜೀವಗಳು ಪರದಾಡ್ತಿರೋದು ನೋಡಿದ್ರೆ ಕರುಳು ಚುರ್ ಅನ್ನುತ್ತೆ.
ಬಹುತೇಕ ಮಂದಿಗೆ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಸಿಗ್ತಿಲ್ಲ ಪಿಂಚಣಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಜನ ಹೈರಾಣಾಗಿದ್ದಾರೆ. ಹೀಗಾಗಿ ವೃದ್ಧರು, ವಿಧವೆಯರು, ವಿಶೇಷಚೇತನರು ಕಂಗಲಾಗಿದ್ದಾರೆ. ಇದು ಕೇವಲ ನಾಲ್ಕು ಜನರು ಅಷ್ಟೇ ಅಲ್ಲ, ಅನೇಕರ ಗೋಳು ಇದೇ ಜೀವನಾಧಾರವಾಗಿದ್ದ ಪೆನ್ಶನ್​ ಕೈ ಸೇರುತ್ತಿಲ್ಲ. ಇದರಿಂದ ಪೆನ್ಶನ್​ ಯೋಜನಗೆಳೇ ಬಂದ್ ಆದ್ವಾ ಅನ್ನೋ ಅನುಮಾನ ಕೂಡ ಮೂಡಿದೆ. ಹೀಗಾಗಿ ಇದೇ ಹಣವನ್ನ ನಂಬಿಕೊಂಡು ಜೀವನ ಸಾಗಿಸ್ತಿದ್ದವರಿಗೆ ಈಗ ದಿಕ್ಕೆ ತೋಚದಂತಾಗಿದೆ. ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಹೈರಾಣಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ನರಕ ಅನುಭವಿಸಂತಾಗಿದೆ.

ಪಿಂಚಣಿ ಹಣದಲ್ಲೇ ಎಷ್ಟೋ ಜನರ ತಿಂಗಳಿನ ಬದುಕು ಸಾಗುತ್ತೆ. ಇನ್ನೂ ಹಿರಿ ಜೀವಗಳು ಇದೇ ಹಣದಲ್ಲಿ ಮೆಡಿಸಿನ್​, ಔಷಧಿ ಅಂತೆಲ್ಲ ಖರೀದಿ ಮಾಡ್ತಾರೆ. ಆದ್ರೆ ಪೆನ್ಷನ್ ಹಣ ಸಿಗದೇ ಮೆಡಿಸಿನ್​ಗಾಗಿ ವೃದ್ಧ ಜೀವಗಳು ಪರದಾಡ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೆ ಕ್ಯೂ ನಿಂತು ಪಿಂಚಣಿ ಬಗ್ಗೆ ವಿಚಾರಿಸ್ತಿದ್ರೂ ಯಾರೋಬ್ಬರು ಸರಿಯಾದ ಉತ್ತರ ನೀಡ್ತಿಲ್ಲ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗ ಪಿಂಚಣಿ ಸಿಗುವಂತೆ ಕ್ರಮ ಕೈಗೊಳ್ಳಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳೆದ 3 ತಿಂಗಳಿಂದ ವೃದ್ಧರು, ವಿಧವೆಯವರಿಗೆ ಸಿಗ್ತಿಲ್ಲ ಪೆನ್ಶನ್; ಅಸಲಿ ಕಾರಣವೇನು..?

https://newsfirstlive.com/wp-content/uploads/2024/04/bank.jpg

Load More