/newsfirstlive-kannada/media/post_attachments/wp-content/uploads/2024/10/money2.jpg)
ದುಡ್ಡು ಮರದಲ್ಲಿ ಬಿಡುತ್ತಾ? ಹೀಗಂತ ಅನ್ನೋದನ್ನ ಕೇಳಿರ್ತೀರಿ. ಆದರೆ ಇಲ್ಲೊಂದು ಮರದಲ್ಲಿ ಗರಿ, ಗರಿ ನೋಟುಗಳು ಎಲೆಗಳಂತೆ ಉದುರಿದೆ. ಮರದ ಕೆಳಗೆ ಕಂತೆ ಕಂತೆ ನೋಟು ಬಿದ್ದಿತ್ತು. ಜನ ನೋಡ ನೋಡುತ್ತಲೇ ಓಡೋಡಿ ಬಂದು 100, 200, 500ರ ನೋಟುಗಳನ್ನು ಗಬಕ್ಕನೆ ಎತ್ತಿಕೊಂಡು ಜೇಬಿಗೆ ಇಳಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/10/money.jpg)
ಈ ಊರಿನಲ್ಲಿ ಮರದ ಕೆಳಗೆ ಬಿದ್ದಿತ್ತು ಕಂತೆ ಕಂತೆ ನೋಟುಗಳು!
ಗರಿಗರಿಯ ಗಾಂಧಿ ನೋಟುಗಳು. ಒಂದಲ್ಲ ಎರಡಲ್ಲ, ಸುಮಾರು ಒಂದು ಲಕ್ಷ ನೋಟುಗಳು. ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ವೆಲ್ಪೂರದ ಅಕ್ಸಾಂಪೂರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ರಸ್ತೆ ಪಕ್ಕದಲ್ಲೇ ಓಡಾಡುತ್ತಿದ್ದ ಜನಕ್ಕೆ ಆ ಮರದ ಕೆಳಗೆ ಬಿದ್ದಿದ್ದ ಕಂತೆ ಕಂತೆ ನೋಟು ಆಕರ್ಷಿಸಿದ್ದವು. ಕಣ್ಣು ಮುಚ್ಚಿ ತೆಗೆಯೋದ್ರಲ್ಲಿ ನೂರಾರು ಮಂದಿ ಓಡೋಡಿ ಬಂದು ನೋಟುಗಳನ್ನು ಆರಿಸಿಕೊಂಡಿದ್ದರು.
ಇದನ್ನೂ ಓದಿ: ಮೋರಿಯಲ್ಲಿ ಕೈ ಹಾಕಿದವರಿಗೆಲ್ಲಾ ಸಿಕ್ತು ₹500; ಬಂಡಲ್ ಬಂಡಲ್ ನೋಟುಗಳು ಸಿಕ್ಕವರಿಗೆ ಸೀರುಂಡೆ!
ಕಂತೆ ಕಂತೆ ನೋಟು ಸಿಕ್ಕ ಖುಷಿ ನಿಮಿಷವೂ ಇಲ್ಲದಂತಾಯ್ತು!
ನೋಟುಗಳನ್ನು ಆರಿಸಿಕೊಂಡ ಜನ ದೀಪಾವಳಿಗೆ ಸಾಕ್ಷಾತ್​ ಲಕ್ಷ್ಮಿಯೇ ಸಿಕ್ಕಿಬಿಟ್ಟಳು ಅಂತ ಖುಷಿಯಾದ್ರು. ಆದರೆ, ನೋಟು ಆರಿಸಿಕೊಂಡವರ ಖುಷಿ ನಿಮಿಷವೂ ಇಲ್ಲದಂತಾಯ್ತು. ಯಾಕಂದ್ರೆ, ನೋಟುಗಳು ಜೇಬು ಸೇರಿದ ಕೂಡಲೇ ಖರ್ಚು ಮಾಡೋದಕ್ಕೆ ಮುಂದಾದ್ರು. ಇದೇ ವೇಳೆಯೇ ತಮ್ಮ ಮರದ ಕೆಳಗೆ ಬಿದ್ದ ನೋಟುಗಳು ಅಸಲಿ ಅಲ್ಲ, ನಕಲಿ ಅನ್ನೋದು ಗೊತ್ತಾಗಿದೆ. ಇದೀಗ ಜೇಬು ಸೇರಿದ್ದ ನೋಟುಗಳು ಮತ್ತೆ ಬೀದಿ ಬೀದಿಯಲ್ಲಿ ಬೀಳುವಂತಾಗಿದೆ. ಪೊಲೀಸರು ನೋಟುಗಳ ಮಾಲೀಕ ಯಾರು ಅಂತ ಹುಡುಕಾಟ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us